ಶಿಕ್ಷಣ ಸಮಾಜದ ಪ್ರಗತಿಯ ಅಡಿಪಾಯ – ವಿಧಾನ ಪರಿಷತ್ ಸದಸ್ಯ ಎನ್.ಎಸ್ ಬೋಸುರಾಜು.
ರಾಯಚೂರು ಸೆ.19

ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಸಹರಾ ಎಜ್ಯುಕೇಷನ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾನ್ಯ ಸಂಸದರಾದ ಶ್ರೀ ಜಿ. ಕುಮಾರ ನಾಯಕ್ ಅವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್ ಬೋಸುರಾಜು ಭಾಗವಹಿಸಿ, ಶಿಕ್ಷಕರನ್ನು ಗೌರವಿಸಿದರು.
ಶಿಕ್ಷಣವು ಸಮಾಜದ ಪ್ರಗತಿಯ ಅಡಿಪಾಯ, ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುತ್ತಿರುವ ಸಹರಾ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಹಾಗೂ ಮಾದರಿ ಯಾಗಿದೆ.

ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದ್ದು, 371 (ಜೆ) ಅಡಿ ದೊರೆತಿರುವ ಅವಕಾಶಗಳನ್ನು ಬಳಸಿ ಕೊಂಡು ಈ ಭಾಗದ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ, ಪ್ರತಿಯೊಂದು ಕುಟುಂಬಕ್ಕೂ ಉತ್ತಮ ಭವಿಷ್ಯ ರೂಪಿಸುವುದೇ ನಮ್ಮ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಆಲ್ ಕರೀಮ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಜರತ್ ಶಾ ಖಾಜಾ ಬಹುದ್ದೀನ್ ಫಾರೂಕ್ ಸಾಬ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಶಾಂತಪ್ಪ, ಹಿರಿಯ ಮುಖಂಡರಾದ ಜಯಣ್ಣ, ಹೈಫಿರೋಜ್, ಮೊಹಮ್ಮದ್ ಶಾಲಂ, ಅಕ್ಬರ್ ಸಾಬ್, ಬಶೀರುದ್ದೀನ್, ಅಸ್ಲಾಂ ಪಾಷಾ, ಸಾಜೀದ್ ಸಮೀರ್, ರಜಾಕ್ ಉಸ್ತಾದ್, ರಾಮಾಂಜನಯ್ಯಲು, ಜಿ. ಶಿವಮೂರ್ತಿ, ಜಯಂತರಾವ್ ಪತಂಗೆ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ ಹಾಗೂ ಹಲವು ನಾಯಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ
