ತಿಮ್ಮಪ್ಪ ಪೂಜಾರಿ ಯಿಂದ ಅಮಾಸೆಬೈಲು ರೆಟ್ಟಾಡಿ ಸರ್ಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಯತ್ನ – ದೂರು ದಾಖಲು.

ಕುಂದಾಪುರ:/ಉಡುಪಿ ಸೆ.20

ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಟ್ಟಾಡಿ ಪ್ರದೇಶದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿವೆ.

ಮುಖ್ಯಾಂಶಗಳು:-

ಅಕ್ರಮ ನಿರ್ಮಾಣದ ಗಂಭೀರ ಆರೋಪ:-

ರೆಟ್ಟಾಡಿಯ ಸರ್ಕಾರಿ ಜಾಗದಲ್ಲಿ ತಿಮ್ಮಪ್ಪ ಪೂಜಾರಿ ಎಂಬುವವರು ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ ಎಂದು ಅವರ ಸಂಬಂಧಿಯಾದ ನಾಗರಾಜ್ ಪೂಜಾರಿ ಅವರು ಆರೋಪಿಸಿದ್ದಾರೆ. ಅಲ್ಲದೆ, ನಿರ್ಮಿಸಲಾಗುತ್ತಿರುವ ಈ ಕಟ್ಟಡವನ್ನು ಉತ್ತರ ಪ್ರದೇಶದಿಂದ ಬಂದಿರುವ ಕುಟುಂಬ ವೊಂದಕ್ಕೆ ಬಾಡಿಗೆಗೆ ನೀಡುವ ಹುನ್ನಾರ ನಡೆಯುತ್ತಿದೆ ಎಂದೂ ಅವರು ದೂರಿದ್ದಾರೆ.

ಅಧಿಕಾರಿಗಳ ತಕ್ಷಣದ ಭೇಟಿ ಹಾಗೂ ಪರಿಶೀಲನೆ:-

ಈ ಕುರಿತಂತೆ ಸಾರ್ವಜನಿಕರಿಂದ ಹಾಗೂ ಸಂಬಂಧಿಕರಿಂದ ದೂರುಗಳು ಬಂದ ಬೆನ್ನಲ್ಲೇ, ಎಚ್ಚೆತ್ತ ಗ್ರಾಮ ಆಡಳಿತಾಧಿಕಾರಿ (ವಿಲ್ಲೇಜ್ ಅಕೌಂಟೆಂಟ್) ಚಂದ್ರಶೇಖರ್ ಅವರು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾನೂನು ಕ್ರಮಕ್ಕೆ ಕಳಕಳಿಯ ಮನವಿ:-

ಸಾರ್ವಜನಿಕ ಹಾಗೂ ಸರ್ಕಾರದ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿ ಅನಧಿಕೃತ ಚಟುವಟಿಕೆಗಳು ಹಾಗೂ ನಿರ್ಮಾಣಗಳನ್ನು ಕೈಗೊಳ್ಳುತ್ತಿರುವ ತಿಮ್ಮಪ್ಪ ಪೂಜಾರಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸ ಬೇಕೆಂದು ದೂರುದಾರರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button