ಭಕ್ತಿ ಗೀತೆಯ ಆಲ್ಬಮ್ ಸಾಂಗ್ – ಶೀಘ್ರ ಬಿಡುಗಡೆ.

ಬೆಂಗಳೂರ ಸೆ.21

ಸಾಲು ಸಾಲು ಹಬ್ಬದ ಸಂಭ್ರಮದ ಪ್ರಯುಕ್ತ ಕೀರ್ತನ ಮೂವಿ ಮೇಕರ್ಸ್ ವತಿಯಿಂದ ನಾಡಿನ ಸಮಸ್ತ ಜನತೆಗೆ ಮೂರು ಮಹಾ ತಾಯಂದಿರ ಭಕ್ತಿ ಭಾವ ತುಂಬಿದ ವಿಶೇಷ ವಿಡಿಯೋ ಆಲ್ಬಮ್‌ ಸಾಂಗ್ ಶೀಘ್ರದಲ್ಲೇ ಬಿಡುಗಡೆ ಯಾಗಲಿದೆ.

ಶ್ರೀದೇವಿ ಎಲ್ಲಮ್ಮ, ಶ್ರೀದೇವಿ ಲಕ್ಷ್ಮಿ ಹಾಗೂ ಶ್ರೀದೇವಿ ದುರ್ಗೆ ಈ ಮೂರು ಮಹಾ ತಾಯಂದಿರ ಮಹಿಮೆ, ಶಕ್ತಿ ಹಾಗೂ ಭಕ್ತಿಭಾವವನ್ನು ಸಾರುವ ವಿಶೇಷ ಹಾಡುಗಳನ್ನು ಬೆಂಗಳೂರಿನ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಸತತ ಐದು ದಿನಗಳ ಚಿತ್ರೀಕರಣ ನಡೆಸಲಾಗಿದ್ದು ಮೂರು ದೇವತೆಗಳ ಪಾತ್ರಗಳಲ್ಲಿ ಕಿರುತೆರೆ ಮತ್ತು ಚಲನ ಚಿತ್ರ ಕಲಾವಿದೆ ಸುನಂದಾ ಕಲ್ಬುರ್ಗಿ, ನಮೃತ. ಎನ್. ಕುಲಕರ್ಣಿ ಹಾಗೂ ಶ್ರೀಮತಿ ಗೀತಾ ವೆಂಕಟೇಶ್ ಅವರುಗಳು ಅಭಿನಯಿಸಿದ್ದಾರೆ.

ಛಾಯಾಗ್ರಹಣ ಬೆಟ್ಟೇಗೌಡ ಕಿಲಾರ, ಸಾಹಿತ್ಯ ಲೋಕೇಶ್ ವಿದ್ಯಾಧರ, ನಾರಾಯಣ್, ಸಂಗೀತ ಎಸ್.ಕೆ. ಸಾಯಿ ಶ್ಯಾಮ್ (ರಿದಂ ಕುಟ್ಟಿ), ಅನಿತಾ ನಾರಾಯಣ ಕುಲಕರ್ಣಿ ಹಿನ್ನೆಲೆ ಗಾಯನ, ನೃತ್ಯ ಸಂಯೋಜನೆ ಶ್ರೀಮತಿ ಶಾಂತಿ ಹಾಗೂ ದೀಪಾ, ವರ್ಣಾಲಂಕಾರ, ಕೇಶಾಲಂಕಾರ ಪಲ್ಲವಿ ಸಹಾಯ ಭಾಗ್ಯಮ್ಮ, ವಸ್ತ್ರಾಲಂಕಾರ ರೋಹಿತ್, ಸಂಕಲನ ಯುವರಾಜ್, ಡಿ.ಐ ಜೀವನ್, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ್ ಹಂಡಿಗಿ, ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಚಲನ ಚಿತ್ರ ನಿರ್ದೇಶಕ,ನಿರ್ಮಾಪಕ ಲೋಕೇಶ್ ವಿದ್ಯಾಧರ ಹೊತ್ತಿದ್ದಾರೆ.

ನಾಡಿನ ಸಂಸ್ಕೃತಿ ಮತ್ತು ಭಕ್ತಿಯ ಸೊಗಡನ್ನು ಜನ ಮನಗಳಿಗೆ ತಲುಪಿಸುವ ಉದ್ದೇಶದಿಂದ ಮೂಡಿ ಬರುತ್ತಿರುವ ಈ ವಿಶೇಷ ವಿಡಿಯೋ ಆಲ್ಬಮ್ ಸಾಂಗ್ ಸದ್ಯದಲ್ಲೇ ಬಿಡುಗಡೆ ಯಾಗಲಿದ್ದು ನಾಡಿನ ಸಮಸ್ತ ಜನರ ಆಶೀರ್ವಾದ, ಪ್ರೋತ್ಸಾಹ ಹಾಗೂ ಬೆಂಬಲವನ್ನು ಕೀರ್ತನ ಮೂವಿ ಮೇಕರ್ಸ್ ಕೋರಿದೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button