ಕಟೆಡನ್ ಕ್ರೀಡಾ ಸಂಕೀರ್ಣದಲ್ಲಿ ರಾಷ್ಟ್ರೀಯ – ಕರಾಟೆ ಕ್ರೀಡಾಕೂಟ ಜರುಗಿತು.
ರಾಯಚೂರು ಸೆ.21

ರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ 11 ಪದಕ ದಿನಾಂಕ 20-09-2026 ರಂದು ಕಟೆಡನ್ ಕ್ರೀಡಾ ಸಂಕೀರ್ಣ ಹೈದರಾಬಾದಿನಲ್ಲಿ ನಡೆದ ರಾಷ್ಟ್ರೀಯ ಕರಾಟೆ ಕ್ರೀಡಾಕೂಟ ನಡೆಯಿತು.
ಈ ಕ್ರೀಡಾಕೂಟಲ್ಲಿ ಬಾಲಕರ ಕಥಾ ವಿಭಾಗದಲ್ಲಿ 8 ವರ್ಷ ಒಳಗಡೆ ಕುಮಾರ ಅಬ್ದುಲ್ ವಾಹಿದ್ ಆರ್ ಜಮಾದಾರ್ ಹಸಿರು ಬೆಲ್ಟ್ ವಿಭಾಗದಲ್ಲಿ ಬೆಳ್ಳಿ ಪದಕ ಕುಮಾರ ತೇಜಶ ಆರ್ ಕೋಳಿ ಕೇಸರಿ ಬೆಲ್ಟ್ ವಿಭಾಗದಲ್ಲಿ 12 ವರ್ಷ ಒಳಗಡೆ ಬೆಳ್ಳಿ ಪದಕ, ಪುರುಷರ ಬ್ಲಾಕ್ ಬೆಲ್ಟ್ ಕಥಾ ವಿಭಾಗದಲ್ಲಿ ಬಸವರಾಜ ನಂ ಬಾಗೇವಾಡಿ 48 ವರ್ಷ ಒಳಗಡೆ ಬಂಗಾರ ಪದಕ, ಬಾಲಕಿಯರ ಕಥಾ ವಿಭಾಗದಲ್ಲಿ ಕುಮಾರಿ ಪೂರ್ಣಿಮಾ ಎನ್ ಕಾಂಬಳೆ 13 ವರ್ಷ ಒಳಗಡೆ ಹಸಿರು ಬೆಲ್ಟ್ ವಿಭಾಗದಲ್ಲಿ ಕಂಚಿನ ಪದಕ ಕುಮಾರಿ ಪ್ರತೀಕ್ಷಾ ಪಿ ಪೋತದಾರ 13 ವರ್ಷ ಒಳಗಡೆ ಕೇಸರಿ ಬೆಲ್ಟ್ ವಿಭಾಗದಲ್ಲಿ.
ಬೆಳ್ಳಿ ಪದಕ ಕುಮಾರಿ ಸಂಜೀವನಿ ಟಿ ಶಿಂಧೆ 13 ವರ್ಷ ಒಳಗಡೆ ಕೇಸರಿ ಬೆಲ್ಟ್ ವಿಭಾಗದಲ್ಲಿ ಬೆಳ್ಳಿ ಪದಕ ಕುಮಾರಿ ವೈಭವಿ ಎನ್ ಕಾಂಬಳೆ 14 ವರ್ಷ ಒಳಗಡೆ ಹಸಿರು ಬೆಲ್ಟ್ ವಿಭಾಗದಲ್ಲಿ ಕಂಚಿನ ಪದಕ ಕುಮಾರಿ ಪಲ್ಲವಿ ಎಸ್ ಕುಂಬಾರ 14 ವರ್ಷ ಒಳಗಡೆ ಕೇಸರಿ ಬೆಲ್ಟ್ ವಿಭಾಗದಲ್ಲಿ ಕಂಚಿನ ಪದಕ ಕುಮಾರಿ ಕೃತಿಕಾ ಎನ್ ಹೊಟ್ಕರ 16 ವರ್ಷ ಒಳಗಡೆ ಹಸಿರು ಬೆಲ್ಟ್ ವಿಭಾಗದಲ್ಲಿ ಬೆಳ್ಳಿ ಪದಕ ಕುಮಾರಿ ಪುನಮ ವಿ ಜಾಧವ 17 ವರ್ಷ ಒಳಗಡೆ ಕೇಸರಿ ಬೆಲ್ಟ್ ವಿಭಾಗದಲ್ಲಿ ಕಂಚಿನ ಪದಕ ಕುಮಾರಿ ಶಿವಾನಿ ಸಂ ಘಾಟಗೆ 17 ವರ್ಷ ಒಳಗಡೆ ಕೇಸರಿ ಬೆಲ್ಟ್ ವಿಭಾಗದಲ್ಲಿ ಬೆಳ್ಳಿ ಪದಕ, ಒಟ್ಟು 1 ಬಂಗಾರ ಪದಕ,6 ಬೆಳ್ಳಿ ಪದಕ 4 ಕಂಚಿನ ಪದಕ ಪಡೆದು ಕೊಂಡು ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ ಆಯೋಜಕರು ಮತ್ತು ನಿರ್ಣಾಯಕರು ಮುಖ್ಯ ತರಬೇತಿದಾರಾದಂತಹ ಬಸವರಾಜ ನಂ ಬಾಗೇವಾಡಿ ಸಾ ಉತ್ನಾಳ ರವರು, ಶಾಖಾ ತರಬೇತಿದಾರರಾದ ರಿಯಾಜ್ ಎಂ ಜಮಾದಾರ ಮಕ್ಕಳೊಂದಿಗೆ ಹಾಜರಿದ್ದರು.

