ರಂಗೋಲಿ ಭಾರತೀಯ ಸನಾತನ ಸಂಸ್ಕೃತಿಯ ಹೆಗ್ಗುರುತು – ಸ್ವಾಮಿ ಜಪಾನಂದಜೀ ಮಹಾರಾಜ್.
ಚಳ್ಳಕೆರೆ ನ.19




ರಂಗೋಲಿ ಸ್ಪರ್ಧೆಯು ಭಾರತೀಯ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ತಿಳಿಸಿದರು.

ನಗರದ ಹೊರ ವಲಯದ ಶ್ರೀಸಾಯಿ ಗಣೇಶ ಬಡಾವಣೆಯಲ್ಲಿ ನಗರಂಗೆರೆ ಗ್ರಾಮ ಪಂಚಾಯಿತಿ ಹಿತ ರಕ್ಷಣಾ ವೇದಿಕೆ ಮತ್ತು ಮೂರ್ತಿ ಇಂಡಸ್ಟ್ರೀಸ್ ಮತ್ತು ಡೆವಲಪರ್ಸ್ ಗ್ರೂಪ್ಸ್ ನ ಸಹಯೋಗದಲ್ಲಿ ಆಯೋಜಿಸಿದ್ದ “71 ನೇ. ಕನ್ನಡ ರಾಜ್ಯೋತ್ಸವ, ವಾಲ್ಮೀಕಿ ಜಯಂತ್ಯುತ್ಸವ ಹಾಗೂ ಬೃಹತ್ ರಂಗೋಲಿ ಸ್ಪರ್ಧೆ” ಯ ಬಹುಮಾನ ವಿತರಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಟಿ ರಘುಮೂರ್ತಿ ಅವರು ಬಿ.ಸಿ ಸಂಜೀವಮೂರ್ತಿ ಅವರು ತಿಳಿಸಿರುವ ಶಾಶ್ವತ ಗೋ ಶಾಲೆಯ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ, ವೈ ರಾಜಾರಾಮ್ ಗುರುಗಳು ಮಾತನಾಡಿ ಬಿ.ಸಿ ಸಂಜೀವಮೂರ್ತಿ ಅವರು ತಮ್ಮ ಸಂಸ್ಥೆಯ ಮೂಲಕ ಮಾಡುತ್ತಿರುವ ಜನಪರ ಕಾರ್ಯಕ್ರಮಗಳು ಬಹಳ ಶ್ಲಾಘನೀಯ ಎಂದು ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಬಗ್ಗೆ ಶಿಮುಲ್ ನಿರ್ದೇಶಕ ಹಾಗೂ ಮೂರ್ತಿ ಇಂಡಸ್ಟ್ರೀಸ್ ಮತ್ತು ಡೆವಲಪರ್ಸ್ ಗ್ರೂಪ್ಸ್ ನ ಸಂಸ್ಥಾಪಕರಾದ ಬಿ.ಸಿ ಸಂಜೀವಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಕತೆಗಾರರಾದ ಬಿ.ತಿಪ್ಪಣ್ಣ ಮರಿಕುಂಟೆ, ಅನರ್ಘ್ಯ ರತ್ನ ಪ್ರಶಸ್ತಿ ಪುರಸ್ಕೃತರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ, ಸಮಾಜ ಸೇವಕರಾದ ಎಚ್.ಎಸ್ ಸೈಯದ್, ಡಾ, ನಾರಾಯಣಮೂರ್ತಿ ಅವರಿಗೆ ಸನ್ಮಾನ, ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಣೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಸಿ ವೆಂಕಟೇಶಮೂರ್ತಿ, ಬಿ.ಸಿ ಸತೀಶ್ ಕುಮಾರ್, ಕಾರ್ತಿಕ್ ಎಸ್ ಮೂರ್ತಿ, ಪುಷ್ಪಾ, ಶಾರದಾ, ರಶ್ಮಿ, ಕವಿತಾ, ಅಪರ್ಣ, ವಿಷ್ಣುಮೂರ್ತಿ ರಾವ್, ಮೃತ್ಯುಂಜಯ, ಶೇಖರಪ್ಪ, ರಾಜಣ್ಣ, ನಿಂಗಣ್ಣ ಯತೀಶ್ ಎಂ ಸಿದ್ದಾಪುರ ಸೇರಿದಂತೆ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

