ಅಕ್ಷರದವ್ವನ ಜನ್ಮೋತ್ಸವ ಹಾಗೂ – ಪಾಲಕರ ಸಭೆ ಯಶಸ್ವಿಯಾಗಿ ಜರುಗಿತು.‎

ಜಕ್ಕಲಿ ಜ.03

ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಸಮೀಪದ ಜಕ್ಕಲಿಯ ಸರ್ಕಾರಿ ಶಾಲೆಗಳ ಗಾಂಧಿ ಭವನದಲ್ಲಿ ಜನೆವರಿ 03ರ ಶನಿವಾರದಂದು ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮಕ್ಕಳ ಕೌಶಲ್ಯಾಭಿವೃದ್ಧಿ ಕುರಿತು ಪಾಲಕರ ಮತ್ತು ಎಸ್‌ಡಿಎಂಸಿ ಸದಸ್ಯರ ಮಹತ್ವದ ಜಂಟಿ ಸಭೆ ಜರುಗಿತು.‎‎

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಅಂದಪ್ಪ ಆರ್. ಮಾದರ ಹಾಗೂ ಸಮಿತಿಯ ಸದಸ್ಯರು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅಧ್ಯಕ್ಷರು, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆ ಅವರು ಅಂದು ಶಿಕ್ಷಣಕ್ಕಾಗಿ ನಡೆಸಿದ ಕಠಿಣ ಹೋರಾಟದ ಫಲವಾಗಿ ಇಂದು ನಾವೆಲ್ಲರೂ ಜ್ಞಾನವಂತರಾಗಲು ಸಾಧ್ಯವಾಗಿದೆ. ಪೋಷಕರು ಕೇವಲ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಸಾಲದು, ಶಾಲೆಯ ಪ್ರಗತಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪೋಷಕರ ಸಹಕಾರವಿದ್ದರೆ ಮಾತ್ರ ಶಾಲೆಯ ಉನ್ನತಿ ಸಾಧ್ಯ” ಎಂದು ಮನವಿ ಮಾಡಿದರು.‎‎‎

ಮುಖ್ಯೋಪಾಧ್ಯಾಯರಾದ ಎಸ್.ಬಿ. ಗವಿ ಅವರು ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿ. ಸಾವಿತ್ರಿಬಾಯಿ ಅವರು ಅಂದು ಎದುರಿಸಿದ ಸಂಕಷ್ಟಗಳ ಫಲವಾಗಿ ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪಾಲಕರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.‎ಜನ್ಮದಿನಾಚರಣೆಯ ನಂತರ ನಡೆದ ಪಾಲಕರ ಸಭೆಯಲ್ಲಿ ಶಾಲಾ ಶೈಕ್ಷಣಿಕ ಪ್ರಗತಿ, ಮೂಲಭೂತ ಸೌಕರ್ಯ ಮತ್ತು ಮಕ್ಕಳ ಹಾಜರಾತಿ ಕುರಿತು ಸಮಾಲೋಚನೆ ನಡೆಸಲಾಯಿತು.

ಗ್ರಾಮೀಣ ಮಕ್ಕಳ ಸಬಲೀಕರಣಕ್ಕೆ ಸ್ಕಿಲ್ ಇನ್ ವಿಲೇಜ್’‎ಪಾಲಕರ ಸಭೆಯಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕಿಲ್ ಇನ್ ವಿಲೇಜ್ ಕಾರ್ಯಕ್ರಮದ ಕ್ಲಸ್ಟರ್ ಹೆಡ್ ಮಂಜುನಾಥ ಎಂ ಬಡಿಗೇರ ಹಾಗೂ ಕೇಂದ್ರ ತರಬೇತುದಾರರಾದ ಶ್ರೀಮತಿ ಶಿವಲೀಲಾ ಪಟ್ಟಣಶೆಟ್ಟಿ ಅವರು ಮಕ್ಕಳ ಕಲಿಕೆ ಮತ್ತು ಕೌಶಲ್ಯದ ಬಗ್ಗೆ ಮಾಹಿತಿ ನೀಡಿದರು.‎ಗ್ರಾಮೀಣ ವಿದ್ಯಾರ್ಥಿಗಳಿಗೆ ನಿರ್ಣಾಯಕ ಜೀವನ ಕೌಶಲ್ಯ ಮತ್ತು ಇಂಗ್ಲಿಷ್ ಸಂವಹನದೊಂದಿಗೆ ಸಬಲೀಕರಣ ಗೊಳಿಸುವುದು, ನಗರ-ಗ್ರಾಮೀಣ ಶಿಕ್ಷಣದ ಅಂತರವನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. 5 ರಿಂದ 8 ನೇ. ತರಗತಿಯ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಮತ್ತು ನಾವೀನ್ಯತೆಯನ್ನು ಬೆಳೆಸಿ ಅವರನ್ನು ‘ನವೀನ ಬದಲಾವಣೆ ಮಾಡುವವರು’ ಆಗಿ ರೂಪಿಸುವುದು ನಮ್ಮ ಗುರಿ” ಎಂದು ಅವರು ವಿವರಿಸಿದರು.‎‎‎

ಕಾರ್ಯಕ್ರಮದಲ್ಲಿ ಬಾಲಕರ ಸರಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎ.ಬಿ. ಜಕ್ಕಲಿ, ಎಸ್‌ಡಿಎಂಸಿ ಸದಸ್ಯರಾದ ಬಸಪ್ಪ ಚಿನ್ನೂರು, ಮುತ್ತಪ್ಪ ಮರಬಸಪ್ಪಣ್ಣವರ, ರಜಾಕ್ ಅಮ್ಮದ್ ಗಡಾದ್, ಕುಬೇರಪ್ಪ ಕೊಡಗನೂರು, ಹನಮಂತ ಭಜಂತ್ರಿ, ಕಳಕಪ್ಪ ರಂಗಣ್ಣವರ, ಶರಣಪ್ಪ ಕೋರಿ ಉಪಸ್ಥಿತರಿದ್ದರು. ಶಿಕ್ಷಕರುಗಳಾದ ವಿ.ಎ. ಕುಂಬಾರ್.ಎಮ್, ಎ.ಪಿ ಶೆಟ್ಟರ್, ಸಿ.ಎಸ್. ಬೆಳ್ಳಟ್ಟಿ, ಸಿ.ಎಸ್. ಘೋಡೆಸವಾರ, ವಿ.ಎಸ್. ದಿಂಡೂರ್, ಪಿ.ಜಿ. ಹುಯಿಲಗೋಳ ಸೇರಿದಂತೆ ಅನೇಕ ಗಣ್ಯರು ಹಾಗೂ ಪೋಷಕರು ಭಾಗವಹಿಸಿದ್ದರು.‎‎

ಎಂ.ವಿ ತಾಳಿಕೋಟಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎ ಪಲ್ಲೆದ ಸ್ವಾಗತಿಸಿದರು. ಮತ್ತು ಎ.ಎಂ ಸೂರ್ಯಭಟ್ ವಂದಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button