ಸ್ವಾಭಿಮಾನಕ್ಕೆ ತಕ್ಕ ವಿಜಯದ ದಿನ, ಮಹಾರ್ ಸೈನಿಕರ , ಮಹಾನ್ ಯುದ್ಧದ , ಮಹಾನ್ ವಿಜಯೋತ್ಸವ, ಭೀಮಾ ಕೊರೆಗಾಂವ್ ವಿಜೋತ್ಸವದ ದಿನ..!
ಸ್ವಾಭಿಮಾನಿ ಮಹಾರ್ ಸೈನಿಕರ ಮಹಾನ್ ವಿಜಯದ ದಿನ ( ಭೀಮಾ ಕೋರೆಗಾಂವ್).
ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರು ಲಂಡನ್ ಸ್ಕೋಲ್ ಆಫ್ ಎಕಾನಾಮಿಕ್ಸ್ & ಪೊಲಿಟಿಕಲ್ ಸೈನ್ಸ್ ನಲ್ಲಿ ಅರ್ಧಕ್ಕೆ ಬಿಟ್ಟು ಬಂದಿದ್ದ ವ್ಯಾಸಾಂಗವನ್ನು ಪೂರ್ಣಗೊಳಿಸಲು 1920ರ ಜುಲೈ ತಿಂಗಳಲ್ಲಿ ಲಂಡನ್ ಗೇ ಪ್ರಯಾಣ ಬೆಳೆಸಿದರು. ಲಂಡನ್ ನಲ್ಲಿ ವ್ಯಾಸಾಂಗ ಮಾಡುವ ಸಮಯದಲ್ಲಿ ಒಂದು ದಿವಸ ಬಾಬಾಸಾಹೇಬರು ಸಾರ್ವಜನಿಕ ಗ್ರಂಥಾಲಯದಲ್ಲಿ ಅಧ್ಯಯನದಲ್ಲಿ ತೊಡಗಿದ್ದಾಗ ಅವರ ಕಣ್ಣಿಗೆ *ಕ್ಯಾಪ್ಟನ್ ಸ್ಟಂಟನ್ ಕುರಿತು* ಅಧ್ಯಯನ ಮಾಡುವಾಗ ಪೇಶ್ವೇಗಳ ದೌರ್ಜನ್ಯಯುತ ಆಡಳಿತ ಮತ್ತು ಬ್ರಿಟೀಷರ ಮತ್ತು ಪೇಶ್ವೆಗಳ ನಡುವೆ ಜರುಗಿದ್ದ ಭೀಮಾಕೊರೆಗಾಂವ ಯುದ್ಧದ ಐತಿಹಾಸಿಕ ದಾಖಲೆ ಓದುತ್ತಾರೆ.
ಮಹಾರ್ ಜನಾಂಗದ ಶೌರ್ಯದ ಯಶೋಗಾಥೆಯನ್ನು ಓದಿದ ನಂತರ ಬಾಬಾಸಾಹೇಬರಿಗೆ ತಾವು ಭಾರತದ ಮೂಲ ನಿವಾಸಿ ರಾಜವಂಶಸ್ಥರು ಎಂಬುವುದು ಮತ್ತಷ್ಟು ದೃಢಪಡುತ್ತದೆ.
1919ರಿಂದ ಭಾರತದ ಸಾಮಾಜಿಕ ಮತ್ತು ರಾಜಕೀಯ ಚಳುವಳಿಯಲ್ಲಿ ಸಕ್ರೀಯವಾಗಿ ತಲ್ಲಿನರಾದ ಬಾಬಾಸಾಹೇಬರು ಅಸ್ಪೃಶ್ಯರ ಹಕ್ಕೊತ್ತಾಯಕ್ಕಾಗಿ ಹಗಲಿರಳು ಶ್ರಮಿಸುತ್ತಲಿರುತ್ತಾರೆ. ಹೀಗಿರುವಾಗ 1926ರಲ್ಲಿ ಬ್ರಿಟೀಷ್ ಸರಕಾರ ‘ಮಹಾರ್’ರನ್ನು ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳುವುದನ್ನು ನಿಲ್ಲಿಸುತ್ತಾರೆ. ಇದರಿಂದ ಕುಪಿತರಾದ ಬಾಬಾಸಾಹೇಬರು 1818ರ ಕಾಲಗಟ್ಟದಲ್ಲಿ ‘ಮಹಾರ್’ ಬಟಾಲೀಯನ್ ಬ್ರಿಟೀಷ್ ರಿಗೇ ಮಾಡಿರುವ ಸಹಾಯವನ್ನು ಕುರಿತು ಮನವರಿಕೆ ಮಾಡಿಕೊಡಲು ಚಳುವಳಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದರು. ಆ ನಿಮಿತ್ಯ 1ನೇ ಜನೇವರಿ 1927ರಂದು ಪೂನಾದಿಂದ 20ಕಿ.ಮೀ.ಅಂತರದಲ್ಲಿರುವ ಭೀಮಾಕೊರೆಗಾಂವದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡರು. ಸದರಿ ಸಮಾವೇಶದಲ್ಲಿ ಹತ್ತು ಸಾವಿರಕಿಂತಲೂ ಹೇಚ್ಚಿನ ಮಹಾರ್ ವೀರ ಜನಾಂಗ ಭಾಗವಹಿಸಿದ್ದರು. ಈ ಸಮಾವೇಶವನ್ನು ಉದ್ದೇಶಿಸಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರು ಮಾತನ್ನಾಡುತ್ತಾ;
“ಬಂಧುಗಳೆ ನಾವು ಈ ದೇಶದ ಮೂಲನಿವಾಸಿಗಳು. ಈ ದೇಶವನ್ನು ಆಳಿರುವ ಆಳರಸರ ವಂಶಸ್ಥರು. ಇಂತಹ ವೀರ ವಂಶಸ್ಥರಾದ ನಮ್ಮ ಹಿರಿಯರ ಶೌರ್ಯ ಸಾಮರ್ಥ್ಯವನ್ನು ಮನಗಂಡ ಬ್ರಿಟೀಷರು ‘ಮಹಾರ್’ ಬಟಾಲೀಯನ್ ಆರಂಭಿಸಿ ಅವರ ಯೊಗ್ಯತೆಗೆ ತಕ್ಕ ಸ್ಥಾನಮಾನಗಳನ್ನು ಕೊಟ್ಟಿದ್ದರು.
1886ರ ಕಾಲಘಟ್ಟದಲ್ಲಿ ಮತಾಧೀನ ಭಂಗಿ ಎನ್ನುವ ಅಸ್ಪೃಶ್ಯ ಯೋಧನನ್ನು ಸೈನಿಕ ಶಿಭೀರದಲ್ಲಿ ಬಂದೂಕುಗಳ ನಿರ್ಮಾಣಧಿಕಾರಿ ಎಂದು ನೇಮಕ ಮಾಡಿದ್ದರು. ಈತನು ಬ್ರಿಟಿಷರ ದೌರ್ಜನ್ಯದ ವಿರುದ್ದ ತಿರುಗಿ ಬಿದ್ದನು ..ಅದಕ್ಕಾಗಿ ಇತನಿಗೇ ಮತ್ತು ಆತನ ಹೇಂಡತಿಯಾದ ‘ರಾಜೂ‘ ಗೇ ಬ್ರಿಟಿಷರು 1856 ಡಿಸೇಂಬರ ತಿಂಗಳಲ್ಲಿ ಪ್ರಥಮ ಸ್ವಾತಂತ್ರ ಸಂಗ್ರಾಮದ ಕಿಚ್ಚು ಹಚ್ಚಿರುವ ನಿಜವಾದ ಹೊರಾಟಗಾರ ಮತಾದೀನ್ ಭಂಗಿಯನ್ನು ಆತನ ಹೇಂಡತಿ ರಾಜೂಳನ್ನು ಗಲ್ಲಿಗೆರಿಸಿದ್ದಾರೆ.
ಇಂತಹ ವೀರ ಯೋದ್ಧರಾಗಿದ್ದ ಮಹಾರ್, ಚಮ್ಮಾರ್, ಭಂಗಿ ಎಂದು ಸಂಬೋಧನೆ ಮಾಡುವ ಅಸ್ಪೃಶ್ಯರ ಶೌರ್ಯ ಮತ್ತು ರಾಷ್ಟ್ರಾಭಿಮಾನವನ್ನು ಕಂಡ ಬ್ರಿಟೀಷ್ ಗವರ್ನರ್ ಜನರಲ್ ಸರ್.ಫ್ರೇಡ್ ಎಸ್. ರಾಬರ್ಟ ಸೈನ್ಯದಲ್ಲಿ ಅಸ್ಪೃಶ್ಯರ ನೇಮಕಾತಿಯನ್ನು ರದ್ದುಪಡಿಸಿದನು. ಬ್ರಿಟನ್ ಸರಕಾರದ ನಿಯಮದಂತೆ ಈಗಾಗಲೆ ಸೈನ್ಯದಲ್ಲಿದ್ದ ಸೈನಿಕರನ್ನು ವಯೋನಿವೃತ್ತಿಗೊಳ್ಳುವವರೆಗೂ ಮುಂದುವರಿಸಿದ ಪ್ರಯುಕ್ತ ನಮ್ಮ ತಂದೆಯಾದ ರಾಮಜಿ ಸಕ್ಪಾಲರು 1891ರವರಗೂ ಸೈನ್ಯದಲ್ಲಿಯೇ ಸೇವೆ ಸಲ್ಲಿಸಿದರು.
ಮುಂದೆ 1914ರಲ್ಲಿ ವಿಶ್ವಯುದ್ಧ ಆರಂಭವಾದ ಪ್ರಯುಕ್ತ ಬ್ರಿಟೀಷರು ಮಹಾರ್ ಬಟಾಲೀಯನ್ ನನ್ನು ಪುನಃ ಆರಂಭಿಸಿದರು.
ವಿಶ್ವ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಮಹಾರ್ ಬಟಾಲಿಯನ್ ಬ್ರಿಟನ್ ಸರಕಾರದ ವಿವಿಧ ಸಮ್ಮಾನಗಳಿಗೆ ಪಾತ್ರರಾದರು. ಇದರಿಂದ ಬ್ರಾಹ್ಮಣರು ಕುಪಿತರಾದರು ಅಸ್ಪೃಶ್ಯರು ಆರ್ಥೀಕವಾಗಿ ಸಭಲರಾದರೆ ಬ್ರಾಹ್ಮಣರ ಉಳಿಗಾಲವಿಲ್ಲವೆಂದು ಅರಿತು ಮತ್ತು ಇದು ತಮ್ಮ ಧರ್ಮವಾದ ಮನು ಧರ್ಮಕ್ಕೆ ವಿರುದ್ಧವಾದ ಕೃತ್ಯವೆಂದು ಪರಿಭಾವಸಿದ ಬ್ರಾಹ್ಮಣರು ಭಾರತದ ಗವರ್ನರ್ ಜನರಲ್
‘ಲಾರ್ಡ ಇರ್ವೀನ್’ರ ಮೇಲೆ ಒತ್ತಡ ಹಾಕಿ 1926ರಲ್ಲಿ ಮಹಾರ್ ರೆಜಿಮೇಂಟ್ ನ್ನು ಪ್ರತಿಬಂಧಿಸಿದ್ದಾರೆ. ಇಂದು ನಾವು ನಮ್ಮ ಹಕ್ಕಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಒಂದು ವೇಳೆ ನಮ್ಮ ಪೂರ್ವಜರನ್ನು ಪೇಶ್ವೇಗಳು ನಮ್ಮ ಹಿರಿಯರೊಂದಿಗೆ ಅಮಾನುಷವಾಗಿ ನಡೆದುಕೊಳ್ಳದೆ ಮತ್ತು ಅಪಮಾನ ಮಾಡದಿದ್ದರೆ, ನಮ್ಮವರೆ ಬ್ರಿಟೀಷರನ್ನು ಧೂಳಿಪಟ ಮಾಡುತಿದ್ದರು. ಇಂದು ನಮ್ಮ ಮಹಾರ್ ಯೋದ್ಧರ ಇತಿಹಾಸ ಅರಿಯುವುದು ಅವಶ್ಯಕವಾಗಿದೆ. ”
ಎಂದು ಬಾಬಾಸಾಹೇಬರು ಮಹಾರ್ ಇತಿಹಾಸವನ್ನು ಸಂಕೀಪ್ತವಾಗಿ ವಿವರಿಸಿ ಹೇಳಿದರು.ಮುಂದುವರೇದು ಮಾತನ್ನಾಡುತ್ತ ,
“16ನೇ ಶತಮಾನದ ಕಾಲಘಟ್ಟದಲ್ಲಿ ಬ್ರಾಹ್ಮಣರು ಶಿವಾಜಿ ಮಹಾರಾಜರ ಆಡಳಿತಾವಧಿಯಲ್ಲಿ ಮುಸ್ಲಿಂರ ಮತ್ತು ಬ್ರಿಟೀಷರ ವಿರುದ್ಧ ಹೋರಾಡಲು ಹಿರಿದಾದ ಸೈನಿಕರ ಬಲದ ಅವಶ್ಯಕತೆಯಿತ್ತು. ಆಗ ಮರಾಠರು ಬ್ರಾಹ್ಮಣರನ್ನೂ ಕೂಡಾ ಸೈನ್ಯದಲ್ಲಿ ಭರ್ತಿ ಮಾಡಿಕೊಂಡರು ಆಗ ಈ ಬ್ರಾಹ್ಮಣರು ಅಲ್ಪ ಸ್ವಲ್ಪ ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ಕಲಿತರು.
ನಾವು ಚರಿತ್ರೇಯನ್ನು ನೋಡಿದಾಗ ನಮಗೇ ತಿಳಿದು ಬರುವುದೇನೇಂದರೇ ಯಾರಲ್ಲಿ ಹಿರಿದಾದ ಸೈನಿಕ ಬಲವಿರುತ್ತದೆಯೋ ಅವರೇ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಲು ಸಮರ್ಥರಾಗಿರುತ್ತಿದ್ದರು. ಆಗ ಮುಸ್ಲಿಂರು ಅಸ್ಪೃಶ್ಯರನ್ನು ತಮ್ಮ ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳುತ್ತಲಿದ್ದರು. ಇದನ್ನರಿತ ಮರಾಠರು ಕೂಡಾ ವೀರ ಯೋದ್ಧರಾದ ಮಹಾರ್ರನ್ನು ಸೈನ್ಯದಲ್ಲಿ ಭರ್ತಿಮಾಡಿಕೊಂಡರು. ಶಿವಾಜಿ ಮಹಾರಾಜರ ಆಡಳಿತದಲ್ಲಿ ಜಾತಿಬೇಧ ಅಷ್ಟಾಗಿರಲಿಲ್ಲ. ಈ ವ್ಯವಸ್ಥೆ ಬ್ರಾಹ್ಮಣರಿಗೆ ಹಿಡಿಸಲಿಲ್ಲ. ಈ ಸ್ವಾತಂತ್ರ್ಯದ ಹರಣಕ್ಕಾಗಿ ಹವಣಿಸುತಿದ್ದ ಪೇಶ್ವೆಗಳು ಯಾವಾಗ ಮರಾಠರ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಹು ಮಹಾರಾಜರು ಬ್ರಾಹ್ಮಣ ಬಾಲಾಜಿ ವಿಶ್ವನಾಥನನ್ನು ತನ್ನ ಪೇಶ್ವೆಯನ್ನಾಗಿ ನೇಮಕ ಮಾಡಿಕೊಂಡಿ ತನ್ನೇಲ್ಲಾ ಅಧಿಕಾರವನ್ನು ಪೇಶ್ವೆ ಬಾಲಾಜಿಗೆ ಒಪ್ಪಿಸಿದನು.ಆಗ ಪೇಶ್ವೆಗಳು ಸಾಮ್ರಾಜ್ಯಶಾಹಿಗಳಾಗಿ ಪರಿವರ್ತನೆಗೊಂಡರು.
ಈ ಪೇಶ್ವೆಗಳಲ್ಲಿ ಕೊನೆಯ ಪೇಶ್ವೆಯಾದವನು ಎರಡನೇ ಬಾಜಿರಾಯ. (1796-1818) ಈತನ ಆಡಳಿತದಲ್ಲಿ ಸಮಾಜಿಕ ಸ್ಥಿತಿಗತಿ ಹೀನಾಯವಾಗಿತ್ತು ಅದರಲ್ಲೂ ಮಹಾರ್ ರ ಸ್ತಿತಿಯಂತೂ ಹೇಳತ್ತಿರದು. ಬಾಜಿರಾಯನು ಮನುಸ್ಮೃತಿಯನ್ವಯ ತನ್ನ ಆಡಳಿತವನ್ನು ನಡೆಸುತ್ತಿದ್ದನು.
- ಮಹಾರ್ ಜನಾಂಗವು ಮುಕ್ತವಾಗಿ ಸಮಾಜದಲ್ಲಿ ಸುತ್ತಾಡಲು ಅವಕಾಶವಿರಲಿಲ್ಲ.
- ಮಹಾರ್ ಜನಾಂಗದವರು ಕೊರಳಲ್ಲಿ ಮಡಿಕೆ ಬೆನ್ನಿಗೆ ಬಾರಿಗೆ ಕಟ್ಟಿಕೊಂಡು ಮಧ್ಯಾನ್ಹದ ಅವಧಿಯಲ್ಲಿ ಮಾತ್ರ ತಿರುಗಾಡಬೇಕಾಗಿತ್ತು.
- ಎಲ್ಲಾದರೂ ಬ್ರಾಹ್ಮಣರು ಕಂಡರೆ ಅವರಿಗೆ ನೆಲಕ್ಕೆ ಬಾಗಿ ” ಜೋಹಾರ್ ಮಾಯಾ ಬಾಪ್| ಜೋಹಾರ್” ಅಂದರೆ – ” ದಯಮಾಡಿ ತಾಯಿ ತಂದೆ |ದಯಮಾಡಿ.”
ಎಂದು ನಮಸ್ಕಾರ ಮಾಡಬೇಕು.
ಇದರಿಂದ ಇವರು ಅಸ್ಪೃಶ್ಯರೆಂಬುವುದು ತಿಳಿಯಬಹುದಾಗಿತ್ತು. - ಪೇಶ್ವೆಗಳ ಕಾಲದಲ್ಲಿ ಅಸ್ಪೃಶ್ಯರು ನಾಯಿ-ಬೆಕ್ಕುಗಳಿಗಿಂತ ಕೀಳಾಗಿ ಕಾಣುತ್ತಿದ್ದರು. ಇರುವೆಗೆ ಸಕ್ಕರೆ ಹಾಕುತ್ತಿದ್ದರು ಆದರೆ ಅಸ್ಪೃಶ್ಯರಿಗೆ ಒಂದು ತೊಟ್ಟು ನೀರು ಕೊಡುತ್ತಿರಲಿಲ್ಲ.
- ಒಂದು ವೇಳೆ ನೀರು ಬೇಡಿದರೆ ದೂರದಿಂದ ಕಲ್ಲಿನಿಂದ ಹೊಡೆಯುವ ಸಂಪ್ರದಾಯ ಇತ್ತು.
- ಇವರು ಹೆಣದ ಮೇಲಿನ ಬಟ್ಟೆಗಳನ್ನೆ ಉಡುವಂತೆ ಒಡೆದ ಮಡಿಕೆಯಲ್ಲಿಯೇ ಊಟ ಮಾಡುವಂತೆ ಒತ್ತಾಯಿಸುತಿದ್ದರು.
- ಬ್ರಾಹ್ಮಣರು ಪಠನ ಮಾಡುವ ಶ್ಲೋಕಗಳನ್ನು ಕೇಳಿದರೆ ಕಿವಿಯಲ್ಲಿ ಕಾಸಿದ ರಾಡನ್ನು ತುರಕುತಿದ್ದರು.
ಈ ರೀತಿ ಅಸ್ಪೃಶ್ಯರೊಂದಿಗೆ ಅಮಾನುಷ್ಯವಾಗಿ ವರ್ತಿಸುವ ಮನು ಸಂಪ್ರದಾಯವನ್ನು ಜಾರಿಗೆ ತಂದಿದ್ದರು. ಇದರಿಂದ ಅಸ್ಪೃಶ್ಯರಲ್ಲಿ ಕೋಪದ ಜ್ವಾಲೆ ಕುದಿಯುತ್ತಲಿತ್ತು.
ಇಂತಹ ಪ್ರಕ್ಷುಬ್ದ ಪರಸ್ಥಿತಿಯಲ್ಲಿ ಬ್ರಿಟೀಷರು ಅಸ್ಪೃಶ್ಯರನ್ನು ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳುವ ಅವಕಾಶವನ್ನು ಒದಗಿಸಿಕೊಟ್ಟರು.ಆ ಮೂಲಕ ಭಾರತದಲ್ಲಿ ತಮ್ಮ ಅಧಿಪತ್ಯವನ್ನು ಶಾಶ್ವತವಾಗಿ ಸ್ಥಾಪಿಸಲು ಯೊಜನೆಯೊಂದನ್ನು ಹಾಕಿದ್ದರು. ಈ ತಂತ್ರಗಾರಿಕೆಯು ಅಸ್ಪೃಶ್ಯ ನಾಯಕರ ಗಮನಕ್ಕೆ ಬಂತು ತಾವೇ ತಮ್ಮ ಹಿಂದೂ ಬಂಧುಗಳೆದುರಿಗೆ ಬ್ರಿಟೀಷರೆಡೆಯಲ್ಲಿ ನಿಂತು ಯುದ್ಧ ಮಾಡಿ ತಮ್ಮವರ ಪ್ರಾಣ ತೆಗೆಯಬೇಕಲ್ಲ ಎಂಬ ಕಳವಳ ಉಂಟಾಗುತ್ತಲಿತ್ತು. ಇಂತಹ ವೇಳೆಯಲ್ಲಿ ನಾವು ನಮ್ಮ ಹಿಂದೂ ಬಾಂದವರೊಂದಿಗಿದ್ದು ಅವರನ್ನು ರಕ್ಷಿಸಬೇಕು ಎಂದೆನಿಸಿತ್ತು.
ಆಗ ಮಹಾರ್ ಜನಾಂಗದ ಸೇನಾಪತಿಯಾದ ಸಿದ್ಧನಾಕನು ಕೆಲವು ಜನ ಮಹಾರ್ ಸರದಾರನ್ನು ಕರೆದುಕೊಂಡು ತಮ್ಮ ಮನೋಭಿಲಾಷೆಯನ್ನು ಪೇಶ್ವೆಯ ಮುಂದಿಡಲು ನಿಶ್ಚಯಿಸಿದರು. ಆದಕ್ಕೂ ಮುದಲು ಈ ವಿಷಯವನ್ನು ಪೇಶ್ವೆಯ ಸೇನಾಪತಿಯ ಮೂಲಕ ತಿಳಿಸಿದರೆ ಉಚಿತವೆಂದು ತಿಳಿದು ಹೇಳಿಕಳುಹಿಸಿದರೆ ಸರಿಯಾದ ಉತ್ತರ ಬರಲಿಲ್ಲ. ಆಗ ಸಿಧ್ಧನಾಕ ಮತ್ತು ಇತರೆ ಸರದಾರರು ತಾವೆ ನೇರವಾಗಿ ಬಾಜಿರಾವ ಪೇಶ್ವೆಯನ್ನು ಪ್ರತ್ಯಕ್ಷ ವಾಗಿ ಕಾಣಲು ಹೋದರು. ಆಗ ಬಾಜಿರಾವ ಕಂಡ ಕೂಡಲೇ ಜೋಹಾರ್ ಮಾಯಾ ಬಾಪ್| ಜೋಹಾರ್ ಎಂದು ನೆಲಕ್ಕೆ ಬಾಗಿ ನಮಸ್ಕಾರ ಮಾಡಿದರು. ಆಗ ಬಾಜಿರಾವ ತಿರಸ್ಕಾರದಿಂದ ಏನು, ಏನು ಹೇಳಲು ಬಂದಿದ್ದಿರಿ ಎಂದು ವಿಚಾರಿಸಿದ ಈ ಮಹಾರ್ರನ್ನು ಒಳಗೆ ಬಿಟ್ಟವರನ್ನು ಗಲ್ಲಿಗೇರಿಸಿ ಎಂದು ಆಜ್ಞೆ ಮಾಡಿದ. ಈ ಬೇಟಿಗೆ ಅವಕಾಶ ಕೊಡಿಸಿದ್ದ ಬಾಪೂ ಗೊಖಲೆಗೆ ನಿಂದಿಸಿದನು.
ಆಗ ಸಿದ್ಧನಾಕ ಮಾತನ್ನಾಡುತ್ತ
“ತಮ್ಮ ಜನಾಂಗವನ್ನು ಅಪರಾಧಿಗಳಾಗಿ ಮಾಡಬಾರದೆಂದು, ಅಸ್ಪೃಶ್ಯರಾದ ನಮಗೆ ಬ್ರಿಟೀಷರೆಡೆಗಿದ್ದು ಯುದ್ಧ ಮಾಡುವ ಇಚ್ಛೆ ಎಂದೆಂದಿಗೂ ಇಲ್ಲ. ನಮಗೆ ಅದು ಒಪ್ಪಿತವೂ ಅಲ್ಲ. ನಾವು ಮಹಾರ್ ರು ಈ ದೇಶದ ಮಣ್ಣಿನ ಮಕ್ಕಳು ನಿಮ್ಮೊಂದಿಗಿದ್ದು ಹೋರಾಡುತ್ತೇವೆ. ಹೋರಾಡಿ ಬ್ರಿಟೀಷರನ್ನು ಸೋಲಿಸಿ ಭಾರತದಿಂದ ಬ್ರಿಟೀಷರನ್ನು ಶಾಶ್ವತವಾಗಿ ಹೊರಗಟ್ಟಿ ಬಿಡುತ್ತೇವೆ. ಹಾಗಾದರೆ ತಾವು ರಾಜ್ಯದಲ್ಲಿ ಹಾಗೂ ತಮ್ಮ ಸೈನ್ಯದಲ್ಲಿ ನಮ್ಮ ಸ್ಥಾನಮಾನವೆನಿರಬಹುದೆಂದು ಕೇಳಿದರು”
ಆಗ ಬಾಜಿರಾವ ತಿರಸ್ಕಾರದಿಂದ ಮಾತನ್ನಾಡುತ್ತ ” ನೀವು ಮಹಾರ್ ರು ಸೈನಿಕ ಸೇವೇ ಮಾಡಿ ನಿಮಗೇ ಸೊಕ್ಕು ಬಂದಿದೇ. ನಿಮಗೆ ಸೂಜಿ ಮೊನೆಯಷ್ಟು ಸ್ಥಾನ ಈ ಪೇಶ್ವೆ ಷಾಹಿಯಲ್ಲಿ ಸಿಗಲಾರದು. ನಾವು ನಿಮಗೆ ಈಗ ಹೇಗೆ ಇಟ್ಟಿದ್ದೇವೋ ಹಾಗೆಯೇ ಇಡುತ್ತೇವೆ. ಅದರಲ್ಲಿ ಎಳ್ಳಷ್ಟು ಬದಲಾವಣೆ ಮಾಡಲಾಗದು ಎಂದು ಖಡಾ ಖಂಡಿತವಾಗಿ ಹೇಳಿದನು . ಆದರೂ ಸಿದ್ಧನಾಕ ಅತೀ ವಿನಯದಿಂದ ಬೇಡಿಕೊಂಡರು ಬಾಲಾಜಿ ಕೇಳಲಿಲ್ಲ. ನಿಮ್ಮಂತಹ ಅಸ್ಪೃಶ್ಯರ ಬೆಂಬಲ ನಮಗೆ ಬೇಕಿಲ್ಲ ಎಂದು ಹೀನಾಯವಾಗಿ ನಿಂದಿಸಿ ಕಳುಹಿಸಿದ. ಅಲ್ಲಿಂದ ಸಿದ್ಧನಾಕ ಮತ್ತು ಇತರೆ ಸರದಾರರು ಬಂದ ನಂತರ ಆ ಸ್ಥಳವನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿದರು.
ನಂತರ ಸ್ವಾಭಿಮಾನಿ ಸಿದ್ಧನಾಕ ಪಿತ್ತು ನೆತ್ತಿಗೇರಿರುವ ಪೇಶ್ವೆಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಬ್ರಿಟೀಷ್ ಸೈನ್ಯದಲ್ಲಿ ಸೇರಿಕೊಂಡರು.
1817ರ ಡಿಸ್ಸೆಂಬರ್ ತಿಂಗಳಲ್ಲಿ ಬಾಜಾರಾವ ಪೇಶ್ವೆಯು ತನ್ನ 25000ದಿಂದ ಸುಮಾರು 30,000ಸಾವಿರ ಸೈನ್ಯದೊಂದಿಗೆ ಪುಣೆಯ ಮೇಲೆ ದಾಳಿ ಮಾಡುವುದನ್ನು ಮನಗಂಡ ಬ್ರೀಟಿಷ್ “ಕರ್ನಲ್ ರಾಬರ್ಟ” ಕ್ಯಾಪ್ಟನ್ ಸ್ಟಂಟನ್ ಗೇ
ನಿರ್ದೇಶನ ನೀಡಿ ಮಹಾರ್ ಬಾಟಾಲಿಯನ್ನೊಂದಿಗೆ ತಕ್ಷಣ ಪುಣೆಗೆ ಯುದ್ಧಕ್ಕಾಗಿ ಹೋಗಲು ಆದೇಶ ನೀಡಿದನು. ಆಗ ಕಾರ್ಯಪ್ರವರ್ತನಾದ ಕ್ಯಾಪ್ಟನ್ ಸ್ಟಂಟನ್ 500ಜನ ಮಹಾರ್ ಸೈನ್ಯದೊಂದಿಗೆ ಕೇವಲ ಎರಡು ತೊಪುಗಳೊಂದಿಗೆ ಪೇಶ್ವೆಗಳ ಸೈನ್ಯದೊಂದಿಗೆ ಹೋರಾಡಲು
ಸಾಕೇನಿಸುವಷ್ಟು ಯುದ್ಧ ಸಾಮಗ್ರಿಗಳನ್ನು ನೀಡಿದನು. ಕ್ಯಾಪ್ಟನ್ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಸೈನಿಕರೊಂದಿಗೆ ಯುದ್ಧಕ್ಕಾಗಿ ಪುಣೆಯಡಿಗೆ ಶಿರೂರಿನಿಂದ
31 ಡಿಸೆಂಬರ್ 1817ರ ರಾತ್ರಿ 8;30 ಗಂಟೆಗೆ ಹೊರಟನು. ಹೀಗೆ 25 ಮೈಲಿ ನಡೆದು ಬಂದು ಜನೇವರಿ 1818ರಂದು ಬೆಳಿಗ್ಗೆ ಹತ್ತು ಗಂಟೆಗೆ ಕೋರೆಗಾಂವ ತಲುಪಿದರು. ಕ್ಯಾಪ್ಟನ್ ಸ್ಟಂಟನ್ ಕಡಿಮೆ ಸೈನ್ಯದೊಂದಿಗೆ ಮುತ್ತಿಗೆ ಹಾಕಲು ಬಂದಿದ್ದನೆಂದು ತಿಳಿದ ಪೇಶ್ವೇ ಸೇನೆ ನಾಲ್ಕು ದಿಕ್ಕಿನಿಂದ ಮುತ್ತಿಗೆ ಹಾಕಲು ನಿರ್ಧರಿಸಿತು. ಸುಮಾರು 30,000 ಪೇಶ್ವೆಗಳ ಸೈನ್ಯ ಮತ್ತು ಕೇವಲ 500, ಬ್ರಿಟೀಷರ ಮಹಾರ್ ಬಟಾಲೀಯನ್ ನಡುವೆ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 9ಗಂಟೆಯವರೆಗೆ ಯುದ್ಧ ನಡೆದು ಮುಕ್ತಾಯಗೊಂಡಿತ್ತು. ಸ್ವಾಭಿಮಾನ ಮಹಾರ್ ಸೈನಿಕರು ಸತತವಾಗಿ 12ಗಂಟೆಗಳ ಕಾಲ ಯುದ್ಧ ಮಾಡಿ ಮನುವಾದಿ 30000ಸಾವಿರ ಸೈನಿಕರನ್ನು ್ಲ ಧೂಳಿಪಟ ಮಾಡಿತ್ತು. ಈ ಯುದ್ಧದಲ್ಲಿ ಮಹಾರ್ ರೆಜಿಮೆಂಟ್ನ 22 ಸೈನಿಕರು ಹುತಾತ್ಮರಾದರು.
ಈ ಕದನದಲ್ಲಿ ಹುತಾತ್ಮರಾದ ಮತ್ತು ಗಾಯಾಳುಗಳಾದ ಯೋಧರ ನೆನೆಪು ಮತ್ತು ಕೀರ್ತಿ
ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿಯಲು ಕೋರೆಗಾಂವದ ಭೀಮಾ ನದಿಯ ತೀರದ ಪ್ರಶಸ್ತವಾದ ಮೈದಾನದಲ್ಲಿ ಕದನದ ಕೀಡಿ ಮೊಟ್ಟ ಮೊದಲು ಹೊತ್ತಿದ್ದ ಸ್ಥಳದಲ್ಲಿ ಬ್ರಿಟೀಷರು ಮಹಾರ ಯೋದ್ಢರ ಸ್ಮರಣಾರ್ಥ ವಿಜಯ ಸ್ತಂಭವನ್ನು ಸ್ಥಾಪಿಸಿದರು.
26ನೇ ಮಾರ್ಚ 1821ರಲ್ಲಿ ಈ ಭವ್ಯ ವಿಜಯ ಸ್ತಂಭಕ್ಕೆ ಅಡಿಗಲ್ಲು ಹಾಕಲಾಯಿತು. ಇದರ ಕಾರ್ಯವು 1822ರಲ್ಲಿ ಪೂರ್ಣಗೊಂಡಿತ್ತು. ಮೊದಲು ಇದನ್ನು ಮಹಾರ್ ವಿಜಯ ಸ್ತಂಭ ಎಂದೇ ಕರೆಯಲಾಗುತ್ತಿತ್ತು. ನಾವು ಇದನ್ನು ಇಂದಿನಿಂದ ಭೀಮಾಕೋರೆಗಾಂವ್ ವಿಜಯ ಸ್ತಂಭ ಎಂದು ಕರೆಯೋಣ ಎಂದರು”
. ಹೀಗೆ ಬಾಬಾಸಾಹೇಬರು ಮಹಾರ್ ಯೋದ್ಧರ ವೀರಗಾಥೆಯನ್ನು ಹೇಳಿದಾಗ ನೆರೆದಿದ್ದ ಜನರ ಕಣ್ಣಲ್ಲಿ ಭಾಷ್ಪಗಳು ಉದುರುತ್ತಲಿದ್ದವು. ಮಹಾರ್ ಈ ವಿಜಯದ ಪ್ರತಿಕವಾಗಿ ಬ್ರಿಟೀಷರು ವಿಜಯ ಸ್ತಂಭದ ಬ್ಯಾಡ್ಜ ಮತ್ತು ಟೊಪ್ಪಿಗೆ ಮೇಲೂ ಚಿನ್ಹೆಯನ್ನು ಅಳವಡಿಸಿದ್ದರು. ಮಹಾರ್ ರೆಜಿಮೆಂಟ್ ಹೊಂದಿರುವ ಮದ್ಯಪ್ರದೇಶ್ ದ *ಸಾಗರ* ಎಂಬ ಸ್ಥಳದಲ್ಲಿ ಈ ವಿಜಯಸ್ತಂಭದ ಪ್ರತಿಕೃತಿಯನ್ನು ನಿಲ್ಲಿಸಿದ್ದಾರೆ.
ಹೀಗೆ ಯಾವ ಮಹಾರ್ ಯೋಧರು ಪೇಶ್ವೆಗಳನ್ನು ದಮನ ಮಾಡಿ ಬ್ರಿಟೀಷರಿಗೆ ವಿಜಯವನ್ನು ತಂದು ಕೊಟ್ಟಿದ್ದಾರೋ ಅಂತಹ ವೀರತನವನ್ನೇ ಹೊಂದಿರುವ ಮಹಾರ್ ಯುವಕರನ್ನು ಸೇನೆಗೆ ಸೇರಿಸಿಕೊಳ್ಲಲು ಬ್ರಿಟೀಷ್ ಸರಕಾರ ನಿರ್ಭಂಧ ಹೇರಿರುವುದು ದ್ರೋಹವೇ ಆಗಿದೆ ಎಂದರು. ಈಗಲಾದರೂ ಬ್ರಿಟೀಷ್ ಸರಕಾರ ಮಾಹಾರ್ ರನ್ನು ಸೈನ್ಯದಲ್ಲಿ ಸೇರಿಸಿಕೊಳ್ಳಬೇಕು.ಇಲ್ಲದೆ ಹೋದರೆ ನಿರಂತರವಾಗಿ ಉಗ್ರವಾದ ಹೋರಾಟ ಮಾಡಬೆಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೆಂಪು ತೊಗಲಿನ ಅವಕಾಶವಾದಿ ಬ್ರಿಟೀಷ್ ಸರಕಾರ ಬಾಬಾಸಾಹೇಬರ ಹಕ್ಕೋತ್ತಾಯಕ್ಕೆ ಕಿವಿಗೊಡದೆ ಇದ್ದ ಕಾರಣ ಹದಿನಾಲ್ಕು ವರ್ಷಗಳ ಕಾಲ ನಿರಂತರವಾದ ಹೋರಾಟ ಮಾಡಬೇಕಾಯಿತು, ಬಾಬಾಸಾಹೇಬರ ದಿಟ್ಟ ಹೋರಾಟಕ್ಕೆ ಶರಣಾದ ಬ್ರಿಟೀಷ್ ಸರಕಾರ 1941 ರಲ್ಲಿ ಪುನಃ ಮಹಾರ್ ರೆಜಿಮೇಂಟ್ ನ್ನು ಸ್ಥಾಪನೆ ಮಾಡಿದರು. ಹಾಗೂ ಮಹಾರ್ ರನ್ನು ಸೇನೆಗೆ ಸೇರ್ಪಡೆ ಮಾಡತೊಡಗಿತು.
ಬಾಬಾಸಾಹೇಬರು ಹುಡುಕಿ ತೆಗೆದಿರುವ ಮಹಾರ್ ವಿಜಯ ಸ್ತಂಭಕ್ಕೆ ಪ್ರತಿ ವರ್ಷ ಬಾಬಾಸಾಹೇಬರು ತಪ್ಪದೇ ಬಂದು ಗೌರವ ಸಲ್ಲಿಸಿ ಹೋಗುತ್ತಿದ್ದರು ..ಈಗ ಪ್ರತಿ ವರ್ಷ ಲಕ್ಷಾಂತರ ಮಹಾರ ಜನರು ಜನೇವರಿ ಒಂದರಂದು ಬಂದು ಆ ಯೋಧರ ವಿಜಯ ಸ್ತಂಭಕ್ಕೆ ನಮನ ಸಲ್ಲಿಸುತ್ತಾರೆ.