🚨ಬ್ರೇಕಿಂಗ್ ನ್ಯೂಸ್🚨ಜಿಲ್ಲೆಗೆ ನಾಳೆ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ, ಬ್ರಹ್ಮಾವರದ ಕೃಷಿ ಭೂಮಿಯಲ್ಲಿ ಕ್ಯಾಶ್ಯೂ ಫ್ಯಾಕ್ಟರಿ ನಿಯಮ ಉಲ್ಲಂಘನೆ ತನಿಖೆಗೆ ಆಡಳಿತ ಮಂಡಳಿಯಲ್ಲಿ ನಡುಕ? – ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ..!
ಉಡುಪಿ ಮೇ.25

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಗೌರವಾನ್ವಿತ ಅಧ್ಯಕ್ಷರಾದ “ಡಾ, ನಾಗಲಕ್ಷ್ಮಿ ಚೌಧರಿ” ಅವರು ಮೇ 26 ರ ಮಂಗಳವಾರ ದಂದು ಉಡುಪಿ ಜಿಲ್ಲೆಗೆ ಅಧಿಕೃತ ಪ್ರವಾಸ ಹಮ್ಮಿಕೊಂಡಿದ್ದು, ಅವರ ಪ್ರವಾಸದ ಮೊದಲನೇ ಕಾರ್ಯಕ್ರಮವೇ ಈಗ ಜಿಲ್ಲೆಯಾದ್ಯಂತ ತೀವ್ರ ಕುತೂಹಲ ಮತ್ತು ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಾಳೆ ಬೆಳಗ್ಗೆ 9:15 ಕ್ಕೆ ಅಧ್ಯಕ್ಷರು ಬ್ರಹ್ಮಾವರದಲ್ಲಿರುವ ‘ಶ್ರೀ ಕೃಷ್ಣ ಪ್ರಸಾದ್ ಆಗ್ರೋ ಇಂಡಸ್ಟ್ರೀಸ್’ ಗೆ ಹಠಾತ್ ಭೇಟಿ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಗಂಭೀರ ಪ್ರಶ್ನೆಗಳನ್ನು ಹಾಗೂ ಅನುಮಾನಗಳನ್ನು ಹುಟ್ಟು ಹಾಕಿದೆ.
🔍 ಕೃಷಿ ಭೂಮಿ ದುರ್ಬಳಕೆ ಮತ್ತು ನಿಯಮ ಉಲ್ಲಂಘನೆ ಆರೋಪ..!
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಈ ಫ್ಯಾಕ್ಟರಿ ನಿರ್ಮಾಣವಾಗಿರುವ ಜಾಗವು ಮೂಲತಃ ಕೃಷಿ ಭೂಮಿಯಾಗಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಇಂಡಸ್ಟ್ರಿ ವಲಯಕ್ಕೆ ಒಳಪಡದ ಈ ಕೃಷಿ ಜಾಗದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ಕ್ಯಾಶ್ಯೂ (ಗೇರು ಬೀಜ) ಫ್ಯಾಕ್ಟರಿಯನ್ನು ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. “ಈ ಜಾಗವನ್ನು ಫ್ಯಾಕ್ಟರಿಗಾಗಿ ಹೇಗೆ ಅಲರ್ಟ್ ಮಾಡಲಾಯಿತು? ಕೃಷಿ ಭೂಮಿಯಲ್ಲಿ ಕೈಗಾರಿಕಾ ಚಟುವಟಿಕೆಗೆ ಅನುಮತಿ ಸಿಕ್ಕಿದ್ದು ಹೇಗೆ?” ಎನ್ನುವ ಗಂಭೀರ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಈಗ ತೀವ್ರ ಚರ್ಚೆಯಾಗುತ್ತಿದ್ದು, ಮಹಿಳಾ ಆಯೋಗದ ಅಧ್ಯಕ್ಷರ ಈ ಭೇಟಿಯು ಈ ಅಕ್ರಮಗಳ ತನಿಖೆಯ ಭಾಗವೇ ಎನ್ನುವ ಪ್ರಶ್ನೆ ಮೂಡಿದೆ.
⚠️ ಮಹಿಳಾ ಕಾರ್ಮಿಕರ ಸವಲತ್ತುಗಳ ವಂಚನೆ ಹಾಗೂ ದೌರ್ಜನ್ಯದ ಶಂಕೆ..?
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಫ್ಯಾಕ್ಟರಿಗಳು ನಿಯಮಬಾಹಿರವಾಗಿ ತಲೆಯೆತ್ತಿರುವುದು ಬೆಳಕಿಗೆ ಬಂದಿದೆ. ಈ ಫ್ಯಾಕ್ಟರಿಗಳಲ್ಲಿ ದುಡಿಯುತ್ತಿರುವ ನೂರಾರು ಮಹಿಳಾ ಸಿಬ್ಬಂದಿಗಳ ರಕ್ಷಣೆ, ಅವರಿಗೆ ಸಿಗಬೇಕಾದ ಕನಿಷ್ಠ ವೇತನ, ಇಎಸ್‌ಐ, ಪಿಎಫ್ ಹಾಗೂ ಸರ್ಕಾರದ ಮೂಲಭೂತ ಸವಲತ್ತುಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದೆಯೇ ಅಥವಾ ವಂಚಿಸಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಅಲ್ಲದೆ, ಕಾರ್ಮಿಕರ ಕೆಲಸದ ಅವಧಿಯ ಸಮಯ ನಿಗದಿ ಪಡಿಸಿದ್ದರೂ, ಕಾನೂನು ಉಲ್ಲಂಘಿಸಿ ಹೆಣ್ಣು ಮಕ್ಕಳನ್ನು ನಿಯಮ ಬಾಹಿರವಾಗಿ ಸತಾಯಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿಂದೆ ಜಿಲ್ಲೆಯ ಕೆಲವು ಫ್ಯಾಕ್ಟರಿಗಳಲ್ಲಿ ಮಹಿಳಾ ನೌಕರರ ಮೇಲೆ ದೌರ್ಜನ್ಯಗಳು ನಡೆದ ಪ್ರಕರಣಗಳು ಕೂಡ ವರದಿಯಾಗಿದ್ದು,
ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷರ ನಡೆ ಅತ್ಯಂತ ಪ್ರಮುಖವಾಗಿದೆ.
❓ ಮಹಿಳಾ ಆಯೋಗದ ಭೇಟಿಯ ಅಸಲಿ ಉದ್ದೇಶವೇನು..?
ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಕ್ಯಾಶ್ಯೂ ಫ್ಯಾಕ್ಟರಿ ನಿರ್ಮಿಸಿದ ಕಾನೂನು ಉಲ್ಲಂಘನೆಯ ಹಿಂದಿನ ಸತ್ಯಾಸತ್ಯತೆ ಪರಿಶೀಲನೆಯೇ..?
ಫ್ಯಾಕ್ಟರಿಯಲ್ಲಿ ತಳಮಟ್ಟದ ಮಹಿಳಾ ಸಿಬ್ಬಂದಿಗಳಿಗೆ ಸುರಕ್ಷತೆ ಇದೆಯೇ ಮತ್ತು ಸವಲತ್ತುಗಳ ವಂಚನೆ ನಡೆಯುತ್ತಿದೆಯೇ ಎಂಬ ತನಿಖೆಯೇ..?
ದೌರ್ಜನ್ಯದ ದೂರುಗಳ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಲು ಅಧ್ಯಕ್ಷರು ಬರುತ್ತಿದ್ದಾರೆಯೇ?ಉಡುಪಿ ಜಿಲ್ಲೆಯಾದ್ಯಂತ ಇಂತಹ ಅಕ್ರಮ ಫ್ಯಾಕ್ಟರಿಗಳ ಜಾಲ ವಿಸ್ತರಿಸುತ್ತಿರುವ ಬೆನ್ನಲ್ಲೇ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ, ನಾಗಲಕ್ಷ್ಮಿ ಚೌಧರಿ ಅವರ ಈ “ಖಡಕ್ ನಡೆ” ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ? ಅಕ್ರಮ ಎಸಗಿದವರಿಗೆ ಕಾನೂನಿನ ಬಿಸಿ ಮುಟ್ಟಿಸಲಿದ್ದಾರೆಯೇ? ಎಂಬುದನ್ನು ಸಾರ್ವಜನಿಕರು ಈಗಷ್ಟೇ ಕಾದು ನೋಡ ಬೇಕಾಗಿದೆ.
📰 ವರದಿ :ಆರತಿ ಗಿಳಿಯಾರು ರಾಮನಗರ ನ್ಯೂಸ್ ಕನ್ನಡ, ದಿನ ಪತ್ರಿಕೆ ಉಡುಪಿ ಜಿಲ್ಲೆ.
