“ಬಾ ಮಗು ಶಾಲೆಗೆ ಭಾರತ ರತ್ನನಾಗು”…..

ಮನೆಯ ಮೊದಲ ಪಾಠ ಶಾಲೆಯು
ಗುರಕುಲವೇ ನಿನ್ನ ಏಳ್ಗೆಯ ನೆಲೆಗೆ ಬೆಲೆಯು
ಬಾ ಮಗು ಅರಿವಿನ ದೀಪ ಜಗವ ಬೆಳಗಲು
ಧರ್ಮ ಚಕ್ರವ ಹಿಡಿದು ಪರಕ್ರಮಿ ಆಗು
ನೀತಿ ಕಥೆಗಳು ಕೇಳು ವೀರ ಶೂರನಾಗು
ಗುರುಗಳ ಆಜ್ಞೆ ಪಾಲಿಸಿ ವಿಶ್ವ ಮೆಚ್ಚಿಗೆ ಗಳಿಸು
ಅನ್ನ ಸಾರ ತತ್ತಿ ಪುಷ್ಠಿ ಸೇವಿಸು
ಆರೋಗ್ಯವಂತನಾಗು
ಸಮವಸ್ತ್ರ ಗೆಳೆಯರ ಜೋತೆ ಸಮನಾತೆಯ
ಸಾರು
ದಿನಪ್ರತಿಯು ನವ ನವ ಜ್ಞಾನ ಕಲಿತು ನಾಡ
ಬೆಳಗು
ನಾಡ ನುಡಿ ಕಲಿತು ದೇಶ ಸೇವೆಗೆ ಸಿದ್ಧನಾಗು
ತಾಯಿ ತಂದೆಯರ ಸೇವೆ ಮಾಡಿ ಪಾವನಾಗು
ಶಾಲೆ ಕಲಿತ ಮಕ್ಕಳು ಸಂಸ್ಕಾರ ಸಂಸ್ಕೃತಿ
ರಕ್ಷಿಪರು
ಭಾರತ ಮಾತೆಯ ಸುಪುತ್ರರನಾಗಿ ವಿಶ್ವ
ರತ್ನನಾಗು
ನಮ್ಮ ಶಾಲೆ ನಮ್ಮ ಹೆಮ್ಮೆ ಗುರುವಿಗೆ ವಂದಿಸು
ಅಕ್ಷರ ಕಲಿತ ಮಗು ವಿಶ್ವದೆಲ್ಲೆಡೆ
ಪ್ರಜವಲಿಸುವುದು
ಸರಕಾರಿ ಶಾಲೆ ನಿಜ ದೇಗುಲದಲಿ ಕಲಿತು
ಭಾರತ ರತ್ನನಾಗು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ
