ಸುಶ್ರುತ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ – ಆರೋಗ್ಯ ತಪಾಸಣಾ ಶಿಬಿರ.
ಚಿತ್ರದುರ್ಗ ಮೇ.23

ಚಿತ್ರದುರ್ಗದಲ್ಲಿ ಆಯುರ್ವೇದ ಚಿಕಿತ್ಸಾ ಸೇವೆಗಳು ಲಭ್ಯವಿದ್ದು, ಬೆಳಗ್ಗೆ 7.00 ರಿಂದ ರಾತ್ರಿ 9.00 ರ ವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆ ತರುವನೂರು ರಸ್ತೆ, ರೇವತಿ ಲಾಡ್ಜ್ ಹತ್ತಿರ, ಕಿರಣ್ ಡಯಾಗ್ನೋಸ್ಟಿಕ್ ಪಕ್ಕ, ಚಿತ್ರದುರ್ಗದಲ್ಲಿದೆ.
ಇಲ್ಲಿ ಪಂಚಕರ್ಮ, ರಕ್ತಮೋಕ್ಷಣ ಚಿಕಿತ್ಸೆ, ಕ್ಷಾರಸೂತ್ರ ಚಿಕಿತ್ಸೆ, ವಾತ, ಪಿತ್ತ ಹಾಗೂ ಕಫ ದೋಷ ಚಿಕಿತ್ಸ, ಅಲರ್ಜಿ ಮತ್ತು ಅಸ್ತಮಾ, ಸಂಧಿವಾತ, ಚರ್ಮ ರೋಗಗಳು, ಮೂಳೆ ಹಾಗೂ ಕೀಲು ಸಮಸ್ಯೆಗಳು, ಕಿಡ್ನಿ ಮತ್ತು ಪಿತ್ತಕೋಶದ ಕಲ್ಲುಗಳು, ಮೂಲವ್ಯಾಧಿ, ಗುದಭ್ರಂಶ, ಮಾಂಸದ ಗಂಟುಗಳು, ವೆರಿಕೋಸ್ ವೇನ್ಸ್, ಹೊಟ್ಟೆ ಹುಣ್ಣು, ಅಜೀರ್ಣ ಹಾಗೂ ಗುದ ರೋಗಗಳು, ಮೂತ್ರ ರೋಗಗಳು, ಸೊಂಟ ಮತ್ತು ಕುತ್ತಿಗೆ ನೋವು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ವಿಶೇಷ ಆಯುರ್ವೇದ ತಪಾಸಣಾ ಶಿಬಿರವು ದಿನಾಂಕ 25-05-2025 ರಿಂದ 30-06-2026 ರವರೆಗೆ ನಡೆಯಲಿದ್ದು, ಬೆಳಗ್ಗೆ 9.00 ರಿಂದ ರಾತ್ರಿ 9.00 ರವರೆಗೆ ಉಚಿತ ತಪಾಸಣೆ ಸೌಲಭ್ಯ ಲಭ್ಯವಿರುತ್ತದೆ.
ಈ ಶಿಬಿರದಲ್ಲಿ ತಪಾಸಣೆ ಹಾಗೂ ಸಲಹೆಗಳನ್ನು ಅನುಭವೀ ವೈದ್ಯರಾದ ಡಾ, ನವೀನ್ ಬಿ. ಸಜ್ಜನ್ (M.S. Ayu) ಹಾಗೂ ಡಾ, ಜಗದೀಶ್ ಎಲ್. (M.D. Ayu) ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8971002744 ಹಾಗೂ 9513908555 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

