ಭೀಮಾ ಕೊರೆಗಾಂವ್ ವಿಜಯೋತ್ಸವ ಅಂಗವಾಗಿ ಚಿತ್ರದುರ್ಗದ,ಹೊಳಲ್ಕೆರೆಯಲ್ಲಿ DSS ರಾಜ್ಯಸಂಚಾಲಕರಾದ D.R. ಪಾಂಡುರಂಗಸ್ವಾಮಿ ಹಾಗೂ ಸದಸ್ಯರಿಂದ ಕಾರ್ಯಕ್ರಮ ಏರ್ಪಟ್ಟಿತ್ತು…..
ಚಿತ್ರದುರ್ಗ ( ಹೊಳಲ್ಕೆರೆ) :
ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ|| ಬಿ. ಕೃಷ್ಣಪ್ಪ ಸ್ಥಾಪಿತ ರಿ. ನಂ 386/20-21 ಹೊಳಲ್ಕೆರೆ ಶಾಖೆ,ವತಿಯಿಂದ 1/1/2023 ರಂದು ದಲಿತ ಸಂಘರ್ಷ ಸಮಿತಿ ವತಿಯಿಂದ ಭೀಮಾ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕರಾದ ಡಿ. ಆರ್. ಪಾಂಡುರಂಗ ಸ್ವಾಮಿ. ರಾಜ್ಯ ಮಹಿಳಾ ಸಮಿತಿ ಸದಸ್ಯರಾದ ಕೆರೆಯಾಗನಹಳ್ಳಿ ತಿಪ್ಪಮ್ಮ, ತಾಲೂಕು ಸಂಚಾಲಕರಾದ ದಂಡಿಗೇನಳ್ಳಿ ಆನಂದ ,ಪ್ರಸನ್ನ ಕುಮಾರ,ದಾಸಿಕಟ್ಟಿ, ರುದ್ರಪ್ಪ ನಾಗರಾಜ್, ತುಪ್ಪದಹಳ್ಳ ಸಾಗರ್ ಗಂಗಸಮುದ್ರ ಯಶವಂತ, ನಾಗರಾಜ್, ಸಂದೀಪ್, ಅಶೋಕ್ ಇತರರು ಈ ಕಾರ್ಯಕ್ರಮದಲ್ಲಿ ಭಾಗವಹಸಿದ್ದರು.
ಈ ಕುರಿತು DSS ರಾಜ್ಯಸಂಚಾಲಕರಾದ ಡಿ, ಆರ್ ಪಾಂಡುರಂಗ ಸ್ವಾಮಿ ” ಈ ದೇಶದಲ್ಲಿ ಸಮಾನತೆಗಾಗಿ, ಸ್ವಾಭಿಮಾನಕ್ಕಾಗಿ ,ನೆಮ್ಮದಿಯಿಂದ ಸಾರ್ವಜನಿಕವಾಗಿ ಬದುಕಲ್ಲಿಕೆ ನಮಗೂ ಒಂದು ಅವಕಾಶ ಬೇಕು ಎಂದು ನಡೆದಿರುವ ಅತ್ಯಂತ ಮಾನವೀಯ ಕಳಕಳಿ ಇರುವಂತ ಯುದ್ಧ “ ಎಂದು ಮೆಚ್ಚುಗೆಯ ಮಾತನ್ನು ಅವರು ಅಲ್ಲಿಯ ಜನರಿಗೆ ಯುದ್ಧದ ಉದ್ದೇಶವನ್ನು ಅಚ್ಚುಕಟ್ಟಾಗಿ ಹೇಳಿದರು. ಅಲ್ಲದೆ ಅವರು ‘ ಈ ದೇಶದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಆಸ್ತಿಗಾಗಿ, ಹೆಣ್ಣಿಗಾಗಿ, ಹೊನ್ನಿಗಾಗಿ ಯುದ್ಧ ಮಾಡಿರುವುದನ್ನು ಕೇಳಿರುತ್ತೇವೆ,ನೋಡಿರುತ್ತೇವೆ ಅದರೆ ಸ್ವಾಭಿಮಾನದ ಬದುಕಿಗಾಗಿ ನಾವೂ ಮನುಷ್ಯರು ನಮ್ಮನು ಪ್ರೀತಿಯಿಂದ ಕಾಣಿರಿ ಎಂದು, ಬೇಡಿಕೆ ಇಟ್ಟು , ಸ್ವಾಭಿಮಾನಕ್ಕಾಗಿ ನಡೆದಂತಹ ಅಮಾನವೀಯ ಹೋರಾಟ ಇದಾಗಿದೆ ‘ ಎಂದು ಭೀಮಾ ಕೂರೆಗಾಂವ್ ವಿಜಯೋತ್ಸವದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.