RRR : ಐತಿಹಾಸಿಕ “ಗೋಲ್ಡನ್ ಗ್ಲೋಬ್” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ RRR ನ ” ನಾಟು ನಾಟು ” ಸಾಂಗ್…!
ರಾಜಮೌಳಿ ನಿರ್ದೇಶನದ RRR ಸಿನಿಮಾದ “ನಾಟು ನಾಟು” ಹಾಡು ಇದೀಗ ಅಮೆರಿಕದ ಪ್ರತಿಷ್ಠಿತ “ಗೋಲ್ಡನ್ ಗ್ಲೋಬ್ ಪ್ರಶಸ್ತಿ”ಯನ್ನು ಮುಡಿಗೇರಿಸಿಕೊಂಡಿದೆ.ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿದ್ದ RRR ಚಿತ್ರ “ನಾಟು ನಾಟು” ಹಾಡಿಗಾಗಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಗೆದ್ದುಕೊಂಡಿದೆ.ಈ ಹಾಡು 1920 ರ ಬ್ರಿಟೀಷ್ ಆಕ್ರಮಿತ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಅವರು ಆಂಗ್ಲರ ವಿರುದ್ಧ ಸಿಡಿದೆದ್ದ ಕಥೆಯನ್ನಾಧರಿಸಿ RRR ಸಿನಿಮಾ ಮಾಡಲಾಗಿದೆ.
ಆದರೆ, ಇಂಗ್ಲಿಷ್ ಅಲ್ಲದ ಭಾಷಾ ಚಲನಚಿತ್ರ ಪ್ರಶಸ್ತಿಯನ್ನ ಪಡೆಯಲು ಆಗಲಿಲ್ಲ. ಈ ವಿಭಾಗದಲ್ಲಿ ಅರ್ಜೆಂಟೈನಾದ “ಅರ್ಜೆಂಟೀನಾ, 1985”. ಸಿನಿಮಾ ಪಡೆದುಕೊಂಡಿದೆ. ಈ ಚಲನಚಿತ್ರವು 1985 ರ ಟ್ರಯಲ್ ಆಫ್ ದಿ ಜುಂಟಾಸ್‌ನ ಸುತ್ತಲಿನ ನೈಜ ಘಟನೆಗಳನ್ನು ಆಧರಿಸಿದೆ, ಇದು ಅರ್ಜೆಂಟೀನಾದ ಕೊನೆಯ ನಾಗರಿಕ-ಮಿಲಿಟರಿ ಸರ್ವಾಧಿಕಾರದ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸಿತು.
ಸಮಾರಂಭದಲ್ಲಿ ಹಾಜರಿದ್ದ ರಾಜಮೌಳಿ, ಜೂ.ಎನ್‍ಟಿಆರ್, ರಾಮಚರಣ್ ಹಾಗೂ ಅವರ ಪತ್ನಿ ಉಪಾಸನಾ ಕಾಮಿನೇನಿ ಮತ್ತಿತರರು ಪ್ರಶಸ್ತಿ ಸ್ವೀಕರಿಸಿದರು.
ಹಲವು ಭಾಷೆಗಳಲ್ಲಿ ಬಿಡುಗಡೆಯಾದ RRR ಚಿತ್ರ ಜಾಗತಿಕವಾಗಿ 1200 ಕೋಟಿ ರೂ.ಗಳ ಆದಾಯ ಗಳಿಸಿತ್ತು. ಮಾತ್ರವಲ್ಲ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ ರಾಜಮೌಳಿ ಅವರಿಗೆ ಒಲಿದು ಬಂದಿತ್ತು.