ರಷ್ಯಾ ಉಕ್ರೇನ್ ಯುದ್ಧ : ಅಮೆರಿಕ,ಜರ್ಮನಿ ಉಕ್ರೇನ್ ಪರ ನಿಂತ ಬೆನ್ನಲ್ಲೇ ರಷ್ಯಾ ವಾರ್ ;11 ಜನರ ಸಾವು…!
ಉಕ್ರೇನ್ನ ವಿದ್ಯುತ್ ವಿತರಣಾ ಜಾಲವನ್ನು ಗುರಿಯಾಗಿಸಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ.
ಕೀವ್ ( ಜ.27):
ಉಕ್ರೇನ್ನ ವಿದ್ಯುತ್ ವಿತರಣಾ ಜಾಲವನ್ನು ಗುರಿಯಾಗಿಸಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಕೀವ್ ಸೇರಿದಂತೆ ಹಲವು ನಗರಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಚಳಿಗಾಲ ತೀವ್ರಗೊಂಡಿರುವುದರಿಂದ ತಾಪಮಾನ ಶೂನ್ಯದ ಸಮೀಪಕ್ಕೆ ಬಂದಿರುವುದರಿಂದ ಉಕ್ರೇನ್ನ ಜನರ ಜೀವನ ಅಸ್ತವ್ಯಸ್ತಗೊಂಡಿದೆ.
ಜರ್ಮನಿ ಮತ್ತು ಅದರ ನ್ಯಾಟೊ ಮಿತ್ರರಾಷ್ಟ್ರಗಳಿಂದ ಇದೀಗ ಉಕ್ರೇನ್ಗೆ ಯುದ್ಧಟ್ಯಾಂಕ್ಗಳೂ ಸೇರಿದಂತೆ ದೊಡ್ಡಮಟ್ಟದ ನೆರವು ಹರಿದುಬರಲು ದಿಡ್ಡಿಬಾಗಿಲು ತೆರೆದಂತೆ ಆಗಿದೆ. ಅಮೆರಿಕ, ಜರ್ಮನಿ ಉಕ್ರೇನ್ ಗೆ ಯುದ್ದ ಟ್ಯಾoಕರ್ ಕೊಡುವುದಾಗಿ ಹೇಳಿದ ಬೆನ್ನಲ್ಲೇ ರಷ್ಯಾ ದಾಳಿ ಮಾಡಿದೆ,ಉಕ್ರೇನ್ಗೆ ನೆರವು ಕೊಡುವುದನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ರಷ್ಯಾ, ಯುದ್ಧಟ್ಯಾಂಕ್ ನೀಡುವ ಯಾವುದೇ ದೇಶವು ತನ್ನ ವಿರುದ್ಧ ಯುದ್ಧ ಸಾರಿದಂತೆ ಎಂದು ಘೋಷಿಸಿದೆ. ಈ ಘೋಷಣೆಯ ಬೆನ್ನಿಗೇ ಉಕ್ರೇನ್ ವಿರುದ್ಧ ಕ್ಷಿಪಣಿ ದಾಳಿಯನ್ನು ತೀವ್ರಗೊಳಿಸಿದೆ.
ಯುದ್ಧಟ್ಯಾಂಕ್ಗಳನ್ನು ನೀಡಲು ಮುಂದೆ ಬಂದಿರುವ ಜರ್ಮನಿ ಮತ್ತು ಅಮೆರಿಕ ನಿರ್ಧಾರವನ್ನು ಉಕ್ರೇನ್ ಜನತೆ ಸ್ವಾಗತಿಸಿದ್ದಾರೆ. ‘ಇಂಥದ್ದೊಂದು ನಿರ್ಧಾರವನ್ನು ಈ ಮೊದಲೇ ತೆಗೆದುಕೊಳ್ಳಬೇಕಿತ್ತು. ನಮ್ಮ ದೇಶಕ್ಕೆ ಇನ್ನಷ್ಟು ನೆರವಿನ ಅಗತ್ಯವಿದೆ’ ಎಂದು ಉಕ್ರೇನ್ನ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಹಾರಿಸಿದ ಸುಮಾರು 55 ಕ್ಷಿಪಣಿಗಳಲ್ಲಿ 47 ಕ್ಷಿಪಣಿಗಳನ್ನು ಉಕ್ರೇನ್ ವಾಯುರಕ್ಷಣಾ ವ್ಯವಸ್ಥೆಯು ಮಾರ್ಗಮಧ್ಯೆಯೇ ನಾಶಪಡಿಸಿವೆ. ಆದರೂ ಉಕ್ರೇನ್ನ ವಿವಿಧೆಡೆ ಭೂಸ್ಪರ್ಶ ಮಾಡಲು ಸಾಧ್ಯವಾದ ಕ್ಷಿಪಣಿಗಳು ಮಾತ್ರ ಸ್ಫೋಟಿಸಿ, 11 ಮಂದಿ ಮೃತಪಟ್ಟಿದ್ದಾರೆ.
ಉಕ್ರೇನ್ನ ವಿವಿಧೆಡೆ ರಷ್ಯಾದ ಕ್ಷಿಪಣಿಗಳ ಅವಶೇಷಗಳನ್ನು ಜನರು ಪ್ರದರ್ಶನಕ್ಕಿಟ್ಟಿದ್ದಾರೆ. ಉಕ್ರೇನ್ನ ವಿದ್ಯುತ್ ಉತ್ಪಾದನೆ ಮತ್ತು ವಿತರಣಾ ಜಾಲಗಳನ್ನು ಗುರಿಯಾಗಿಸಿ ರಷ್ಯಾ ದಾಳಿ ನಡೆಸುತ್ತಿರುವುದರಿಂದ ಇಂಧನ ಪೂರೈಕೆ ಸ್ಥಗಿತಗೊಳ್ಳುವ ಅಪಾಯ ಎದುರಾಗಿದೆ ಎಂದು ಉಕ್ರೇನ್ ಇಂಧನ ಸಚಿವ ಜರ್ಮನ್ ಗಲುಶೆಕೆಂಕೊ(German gelushekenko) ಹೇಳಿದ್ದಾರೆ.