ದಾಸ ಶ್ರೇಷ್ಠ ಕನಕದಾಸರು…..

ಭಕ್ತಿ ಭಾವಕೆ ಅಜರಾಮರದ ಹೆಸರುಕನ್ನಡ ಭಾಷೆಯ ವಿಶಿಷ್ಟ ಕೀರ್ತನೆಕಾರರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು ಕಾಗಿನೆಲೆಯ ವಾಸಿ ನಮ್ಮ ಶ್ರೀ ಕನಕದಾಸರುಹಾವೇರಿ ಜಿಲ್ಲೆ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಬೀರಪ್ಪನಾಯಕವಿಜಯನಗರ ಸಾಮ್ರಾಜ್ಯದ ಗಂಡೆದೆಯ ದಂಡನಾಯಕತಿರುಪತಿ ತಿಮ್ಮಪ್ಪನ ಆಶೀರ್ವಾದದ ಕುಲದೀಪಕಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿಉಡುಪಿಯ ಕನಕನ ಕಿಂಡಿಯ ರುವಾರಿಯಾಗಿಕೃಷ್ಣನ ಪ್ರೀತಿಯ ಭಕ್ತನಾದರು ಲೋಕ ಕಲ್ಯಾಣಕ್ಕಾಗಿಜಾತಿ ಪದ್ಧತಿಯ ತಾರತಮ್ಯಗಳ ತಿರಸ್ಕರಿಸಿದರು ಮನುಕುಲಕ್ಕಾಗಿಕಾಗಿನೆಲೆ ಆದಿಕೇಶವರಾಯರ ಅಂಕಿತದಲಿಕೀರ್ತನೆಗಳ ರಚಿಸಿ ಹಾಡಿದರು ಕೃಷ್ಣನ ಸ್ಮರಣೆಯಲಿಮೋಹನ ತರಂಗಿಣಿ ನಳಚರಿತ್ರೆ ಕೃತಿಗಳಲಿಹಲವು ವೈಶಿಷ್ಟತೆಗಳು ತಲೆಯೆತ್ತಿವೆ ಪುಟಗಳಲಿಮಾಡಿದರು ಸತತವಾಗಿ ಶ್ರೀ ಕೃಷ್ಣನ ಭಕ್ತಿಯುನಾಡಿನೆಲ್ಲಡೆ ಹಬ್ಬಿದೆ ಕನಕದಾಸರ ಕೀರ್ತಿಯುಎತ್ತ ನೋಡಿದೆತ್ತ ಸ್ಥಾಪಿಸಲಾಗಿದೆ ನಿಮ್ಮ ಮೂರ್ತಿಯುಹುಟ್ಟಿ ಬರಲಿ ದಾಸ ಶ್ರೇಷ್ಠ ಕನಕದಾಸರು ಮನೆ ಮನೆಯಲ್ಲಿಯು

ಶ್ರೀ ಮುತ್ತು.ಯ.ವಡ್ಡರ

( ಶಿಕ್ಷಕರು, ಹಿರೇಮಾಗಿ )

ಬಾಗಲಕೋಟ

Mob-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button