ಯಲಗೋಡದಲ್ಲಿ ಬೆಳ್ಳಂ ಬೆಳಿಗ್ಗೆಯೇ ಜೆಸಿಬಿ ಸದ್ದು.
ಯಲಗೋಡ ಅ.26

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದಲ್ಲಿ ಬಸ್ ನಿಲ್ದಾಣ ದಿಂದ ತಾಂಡಾಕ್ಕೆ ಹೋಗುವ ರಸ್ತೆಯನ್ನು ಒತ್ತುವರಿ ಮಾಡಿ ಚರಂಡಿ ಮೇಲೆ ಮನೆ ಹಾಗೂ ಅಂಗಡಿಗಳನ್ನು ಕಟ್ಟಿದ್ದಾರೆ, ಬಸ್ ಹಾಗೂ ಇನ್ನಿತರ ವಾಹನಗಳಿಗೆ, ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಿತ್ತು, ಆದರೆ ಗ್ರಾಮ ಪಂಚಾಯತಿ ಯವರು ಮೂರು ಸಲ ನೋಟಿಸ್ ನೀಡಿದರು,

ಚರಂಡಿ ಮೇಲಿನ ಅಂಗಡಿಯವರು ಹಾಗೂ ಮನೆ ಯವರು ತಗೆದಿಲ್ಲ, ಇಂದು ಬೆಳ್ಳಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ. ಶಿವಾನಂದ ಹಡಪದ, ಹಾಗೂ ಅವರ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರಾದ, ಮಹಮದ್ ರಪೀಕ್ ಕಣಮೇಶ್ವರ, ಸದಸ್ಯರಾದ ಹುಸೇನ್ ತಳ್ಳೋಳ್ಳಿ, ರಾಜಪಟೇಲ್ ಕಣಮೇಶ್ವರ, ಗುರುನಾಥ ರಾಠೋಡ ಮಶ್ಯಾಕ ನಧಾಪ್ ಗ್ರಾಮದ ಮುಖಂಡರಾದ, ದೇವೇಂದ್ರ ಮಾದರ, ಮಾಂತೇಶ, ಕೊಟನೂರ, ಮಾಂತೇಶ ತಳ್ಳೋಳ್ಳಿ, ಲಾಲಸಿಂಗ್, ಚವ್ಯಾಣ, ಸಂತೋಷ ರಾಠೋಡ ಪರಸುರಾಮ ರಾಠೋಡ ಹಾಗೂ ಸಾರ್ವಜನಿಕರು ಮತ್ತು ಕಲಕೇರಿ ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ,

ಚರಂಡಿ ಮೇಲಿನ ಎಲ್ಲಾ ಅಂಗಡಿಗಳು, ಮನೆಗಳು, ಜೆಸಿಬಿ ಮುಖಾಂತರ ತೆಗೆದು ಹಾಕಿದರು, ಗ್ರಾಮದ ಬಸ್ ನಿಲ್ದಾಣ ಹತ್ತಿರ ಹೆಣ್ಣು ಮಕ್ಕಳಿಗೆ ಕೂಡಲಿಕ್ಕೆ ಜಾಗ ಇಲ್ಲದಂತೆ ಆಗಿತ್ತು, ಗ್ರಾಮ ಪಂಚಾಯತಿ ಯವರು ಇದು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದರು, ಇನ್ನೂ ಮುಂದೆ ಗ್ರಾಮದಲ್ಲಿನ ಎಲ್ಲಾ ರಸ್ತೆಗಳನ್ನು ಒತ್ತುವರಿ ಮಾಡಿದವರಿಗೆ, ಇದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಭಿವೃದ್ಧಿ ಅಧಿಕಾರಿಗಳು ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ