ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನಾ ದಿನದ ಸ್ಮರಣಾರ್ಥ;ಉಚಿತ ಆರೋಗ್ಯ ತಪಾಸಣೆ…..!
ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನಾ ದಿನದ ಸ್ಮರಣಾರ್ಥ ಅಂಗವಾಗಿ ಉಚಿತ ಆರೋಗ್ಯ ಸೇವಾ ಸೌಲಭ್ಯವನ್ನು ಪಡೆದುಕೊಳ್ಳಲು ಮೆಡಿಕಲ್ ಕಾಲೇಜ್ ಪ್ರಕಟಣೆ ಹೊರಡಿಸಿದೆ
ಬಾಗಲಕೋಟೆ (ಫೆ.23) :
ನಗರದ ಬಿ.ವಿ.ವಿ.ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ ಆರಂಭಿಸಲಾದ ಉಚಿತ ಮತ್ತು ರಿಯಾಯಿತಿ ದರದ ಶಸ್ತ್ರಚಿಕಿತ್ಸಾ ಸೌಲಭ್ಯ ಮಾರ್ಚ್ 3 ರಂದು ಕೊನೆಗೊಳ್ಳಲಿದೆ. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನಾ ದಿನದ ಸ್ಮರಣಾರ್ಥ ಈ ಆರೋಗ್ಯ ಸೇವಾ ಸೌಲಭ್ಯವನ್ನು ಆರಂಭಿಸಲಾಗಿತ್ತು. ಹೊರರೋಗಿಗಳಿಗೆ: ನೋಂದಣಿ, ಸಾಮಾನ್ಯ ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆ, ಇ.ಸಿ.ಜಿ (ಮೊದಲನೆಯದು) ಸೇವೆಗಳು ಉಚಿತವಾಗಿವೆ. ಅಲ್ಪಾಸೌಂಡ್, ಎಕ್ಸ್-ರೇ, ಮೆಮೊಗ್ರಾಫಿ, ಇ.ಸಿ.ಜಿ ಎರಡನೆಯದು, ಇತರೆ ವಿಶೇಷ ರಕ್ತಪರೀಕ್ಷೆಗಳನ್ನು ಪ್ರತಿಶತ 50 ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.
- ಒಳರೋಗಿಗಳಿಗೆ :
ಜನರಲ್ ವಾರ್ಡ್, ಶಸ್ತ್ರಚಿಕಿತ್ಸೆ (ಹೆರಿಗೆ ಸಹಿತ), ಸಾಮಾನ್ಯ ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆ, ಅಲ್ಟಾಸೌಂಡ್ (OBG, ಇ.ಸಿ.ಜಿ (ಮೊದಲನೆಯದು) ಸೇವೆಗಳು ಉಚಿತವಾಗಿವೆ. ಅಲ್ಪಾಸೌಂಡ್ ಇತರೆ ವಿಭಾಗ, X-RAY, ಮೆಮೊಗ್ರಾಫಿ, E.C.G ಎರಡನೆಯದು, ಇತರೆ ವಿಶೇಷ ರಕ್ತಪರೀಕ್ಷೆಗಳನ್ನು ಪ್ರತಿಶತ 50 ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.
ಔಷಧಿ ಮತ್ತು ಶಸ್ತ್ರಚಿಕಿತ್ಸಾ ಸಾಮಗ್ರಿಗಳ ವೆಚ್ಚವನ್ನಷ್ಟೇ ರೋಗಿಗಳು ಭರಿಸಿ ಈ ಉಚಿತ ಚಿಕಿತ್ಸಾ ಸೌಲಭ್ಯವನ್ನು ಪಡೆಯಬಹುದು. ಸುಪರ್ ಸ್ಪೆಷಾಲಿಟಿ, M.R.I ,C.T. ಸ್ಕ್ಯಾನ್, ಐ.ಸಿ.ಯು, ಬ್ಲಡ್ ಬ್ಯಾಂಕ್ ಸೇವೆಗಳಿಗೆ ರಿಯಾಯಿತಿ ಇರುವುದಿಲ್ಲ. ಸಾರ್ವಜನಿಕರು ಈ ಸೇವಾ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.