ಮಹಾ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿ ಮಹಾ ಪುರಾಣ ಕಾರ್ಯಕ್ರಮ.
ಕಲಕೇರಿ ಮಾರ್ಚ್.21

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಮಹಾ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿ ಮಹಾಪುರಾಣ ಕಾರ್ಯಕ್ರಮದಲ್ಲಿ ಷ.ಬ್ರ.ಸಿದ್ದರಾಮ ಶಿವಾಚಾರ್ಯರು ಶ್ರೀ ಗುರು ಮರುಳಾರಾದ್ಯ ಸಂಸ್ಥಾನ ಹಿರೇಮಠ. ಡಾ. ಪ್ರಭುಗೌಡ ಲಿಂಗದಳ್ಳಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಇವರು ಸಂದರ್ಭದಲ್ಲಿ ಎಲ್ಲಾ ಭಕ್ತರಿಗೆ ಬಹಳ ಚೆನ್ನಾಗಿ ಮನುಷ್ಯ ಇರುವುದು ಕೇವಲ ನಾಲ್ಕು ದಿವಸ ಮಾತ್ರ ಅದಕ್ಕೆ ಎಲ್ಲರನ್ನೂ ಪ್ರೀತಿಯಿಂದ ಕಾಣಿರಿ ಎಂದರು. ಒಳ್ಳೆ ಪುರಾಣ ಪ್ರವಚನವನ್ನು ಕೇಳಿ ಗುರುಗಳು ಹೇಳಿದಂತ ಮಾರ್ಗದಲ್ಲಿ ನಾವು ನೀವು ನಡೆಯಬೇಕೆಂದು ಈಗಿನ ಕಾಲದಲ್ಲಿ ಮನುಷ್ಯನಿಗೆ ಕಾಯಿಲೆಗಳು ಯಾವ ರೀತಿ ಬರುತ್ತೆ ಎಂಬುವುದು ಯಾರಿಗೆ ತಿಳಿದಿಲ್ಲ ಅದಕ್ಕೋಸ್ಕರ ಬದುಕಿರುವಷ್ಟು ದಿವಸ ನಮ್ಮ ಮಕ್ಕಳನ್ನ ಪ್ರೀತಿಯಿಂದ ಮಾತನಾಡಿ ಮಕ್ಕಳ ಜೊತೆ ನಗುತ್ತಾ ಇರಬೇಕು ಎಂದು ತಮ್ಮ ಅನಿಸಿಕೆಗಳನ್ನು ಈ ಸಂದರ್ಭದಲ್ಲಿ ಇನ್ನೂ ಒಂದು ಮಾತನ್ನು ಎಲ್ಲಾ ತಂದೆ ತಾಯಿಗಳಿಗೆ ಮಕ್ಕಳಿಗೆ ಮೊದಲಿನ ಕಾಲದಲ್ಲಿ ಮನುಷ್ಯನಿಗೆ ಬಿಪಿ ಶುಗರ್ ಎಂಬುದು ಹಿಂದಿನ ಕಾಲದಲ್ಲಿ ಯಾರಿಗೆ ಗೊತ್ತಿದ್ದಿಲ್ಲ ಆದರೆ ಈಗಿನ ಕಾಲದಲ್ಲಿ ಮನುಷ್ಯನಿಗೆ ಬಿಪಿ ಶುಗರ್ ಹಲವಾರು ಕಾಯಿಲೆಗಳು ಬರುತ್ತವೆ.

ಆ ಕಾಯಿಲೆಗಳನ್ನು ದೂರ ಮಾಡಬೇಕು ಎಂಬುವುದೇ ನಮ್ಮ ನಿಮ್ಮ ಒಂದು ಆಸೆ ಅದಕ್ಕೆ ಒಳ್ಳೆ ಪದಾರ್ಥಗಳನ್ನು ನಾವು ಸೇವಿಸಬೇಕು ಎಂದು ಸಂದರ್ಭದಲ್ಲಿ ಎಲ್ಲಾ ತಾಯಿ ತಂದೆಗಳಿಗೆ ಮಕ್ಕಳಿಗೆ ಚೆನ್ನಾಗಿ ಪ್ರೀತಿಯಿಂದ ಬೆಳೆಸಬೇಕೆಂದು ಸಂದರ್ಭದಲ್ಲಿ ತಿಳಿಸಿದರು.ಷ.ಬ್ರ.ಅಭಿನವ ಮುನೀಂದ್ರ ಶಿವಾಚಾರ್ಯರು ಕಟ್ಟಿಮನಿ ಹಿರೇಮಠ. ಈ ಮಹಾಪುರಾಣದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಹಾ ಪುರಾಣವನ್ನು ಕೇಳಿ ಸೇವೆಯನ್ನು ಸಲ್ಲಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ