20ಕೋಟಿ ರೂ ಗಳ ಅನುದಾನದಲ್ಲಿ ಚೆಕ್ ಡ್ಯಾಮ್ ಕಮ್ ಬ್ರಿಡ್ಜ್ ಕಾಮಗಾರಿಗಳಿಗೆ ಶಂಕಸ್ಥಾಪನೆ ಮಾಡಿದ ಶಾಸಕ ಡಿ ಎಸ್ ಸುರೇಶ್
ತರೀಕೆರೆ – ನಾಗಣ್ಣ ಅಣೆಕಟ್ಟೆಯಿಂದ ಕಲ್ಲತ್ತಿ ಹಳ್ಳಕ್ಕೆ ಸೇರುವ ಕಾಲುವೆಗೆ ಆರು ಕಡೆ ಚೆಕ್ ಡ್ಯಾಮುಗಳನ್ನು ಹಾಗೂ ಎರಡು ಕಡೆ ಚೆಕ್ ಡ್ಯಾಮ್ ಕಮ್ ಬ್ರಿಡ್ಜ್ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಿದ್ದೇನೆ ಎಂದು ಶಾಸಕ ಡಿಎಸ್ ಸುರೇಶ್ ರವರು ದೊಡ್ಡ ಲಿಂಗೇನಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯವರು ಏರ್ಪಡಿಸಿದ್ದ ಕಾಮಗಾರಿಗಳಿಗೆ, ಗುದ್ದಲಿ ಪೂಜೆ ಮಾಡಿ ಮಾತನಾಡಿದರು.

ಈ ಭಾಗದ ರೈತರಿಗೆ ಕಲ್ಲತ್ತಿಗಿರಿಯ ನೀರು ಬಿಟ್ಟರೆ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವುದನ್ನು ಕಂಡು ಶಾಶ್ವತವಾಗಿ ಎಲ್ಲಾ ತೋಟ ತುಟಿಕೆಗಳಿಗೆ ರೈತರಿಗೆ ಕೊಳವೆ ಬಾವಿಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇನೆ. ಸಿದ್ದಾಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಕೆಂಚಾಪುರ ಗೇಟ್ನಲ್ಲಿ ಅಂಗನವಾಡಿ ಕೇಂದ್ರವನ್ನು ಉದ್ಘಾಟನೆ ಮಾಡಿರುತ್ತೇನೆ. ಮತ್ತು ಬಸ್ಸು ತಂದು ದಾನವನ್ನು ನಿರ್ಮಾಣ ಮಾಡಿಸಿರುತ್ತೇನೆ. ಆದಿಕೆರೆ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡವನ್ನು, ಕರುಕುಚ್ಚಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟನೆ ಮಾಡಿರುತ್ತೇನೆ.

ಇದೇ ಸಂದರ್ಭದಲ್ಲಿ ಬರಗೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿರುತ್ತೇನೆ. ಜಿಲ್ಲೆಯಲ್ಲಿಯೇ ತರೀಕೆರೆ ಭಾಗಕ್ಕೆ ಪಾಲಿಟೆಕ್ನಿಕ್ ಕಾಲೇಜು ಇರುವುದಿಲ್ಲ ಆದ ಕಾರಣ ಬಾವಿಕೆರೆ ಗ್ರಾಮದಲ್ಲಿ ಸುಸಜ್ಜಿತವಾದ ಪಾಲಿಟೆಕ್ನಿಕ್ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿ ಸಮುದಾಯ ಭವನದ ಕಟ್ಟಡಕ್ಕೆ ಗುದ್ದಲಿ ಪೂಜೆಯನ್ನು ನೆರೆವೇರಿಸುತ್ತೇನೆ. ಹುಟ್ಟು 60 ಕೋಟಿ ರೂ ವೆಚ್ಚದಲ್ಲಿ ತರೀಕೆರೆ ತಾಲೂಕಿನಾದ್ಯಂತ ಅಭಿವೃದ್ಧಿ ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಮಾಡಿರುತ್ತೇನೆ ಕ್ಷೇತ್ರಾದ್ಯಂತ ಭದ್ರಾ ಜಲಾಶಯದಿಂದ ಜಲಜೀವನ್ ಮಿಷನ್ ಯೋಜನೆ ಅಡಿ 625 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಕಾಮಗಾರಿ ಮಾನ್ಯ ಮುಖ್ಯಮಂತ್ರಿಗಳು ನೆರವೇರಿಸಿರುತ್ತಾರೆ. ಪ್ರತಿ ಹಳ್ಳಿ ಹಳ್ಳಿಯಲ್ಲಿಯೂ ಸಹ ಸಿಸಿ ರಸ್ತೆಗಳನ್ನು ಮಾಡಿಸಿರುತ್ತೇನೆ.

ಮತ್ತು ಸ್ವಚ್ಛ ಭಾರತ ಯೋಜನೆ ಯಡಿ ಎಲ್ಲಾ ಗ್ರಾಮಗಳಲ್ಲಿಯೂ ಶೌಚಾಲಯ ನಿರ್ಮಾಣಗಳನ್ನು ಮಾಡಿಸಿರುತ್ತೇನೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಘನ ತ್ಯಾಜ್ಯ ವಸ್ತುವಿನ ವಿಲೇವಾರಿ ಘಟಕಗಳನ್ನು ಮಾಡಲಾಗಿದೆ, ಡಿಸಿಸಿ ಬ್ಯಾಂಕ್ ನಿಂದ ತರೀಕೆರೆಯ 5 ಸಹಕಾರಿ ಸಂಘಗಳಿಗೆ ಹತ್ತು ಕೋಟಿ ಸಾಲ ಕೊಟ್ಟಿರುತ್ತೇವೆ, 127 ಸಹಕಾರಿ ಸಂಘಗಳಿಗೆ ಸಮಾನವಾಗಿ 192 ಕೋಟಿ ಹಣವನ್ನು ರೈತರಿಗೆ ಸಾಲ ಕೊಟ್ಟಿರುತ್ತೇವೆ.ಹಾಗೂ ಸಮಗ್ರ ಶಿಕ್ಷಣ,ಆರೋಗ್ಯ,ನೀರಾವರಿಗೆ ಮತ್ತು ಮೂಲಭೂತ ಸೌಕರ್ಯಗಳಿಗೆ, ಆದ್ಯತೆ ನೀಡಿದ್ದೇವೆ.ಜಾತ್ಯಾತೀತ ಪಕ್ಷತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ, ಆದ್ದರಿಂದ ಎಲ್ಲರೂ ಆಶೀರ್ವದಿಸಿ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಟಿಎಲ್ ರಮೇಶ್, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಕೆ ಆರ್ ಆನಂದಪ್ಪ, ಬಿಸಿಸಿ ಬ್ಯಾಂಕಿನ ನಿರ್ದೇಶಕರಾದ ಗಿರೀಶ್ ಚವನ್, ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾರತೀಯ ನರಸಿಂಹ, ಬಿಜೆಪಿ ಪಕ್ಷದ ಮುಖಂಡರಾದ ಗುಳ್ಳದಮನೆ ವಸಂತಕುಮಾರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಕೆಂಚೇಗೌಡ, ಸುಣ್ಣದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಂತಾಮಣಿ, ಬಾವಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಶೇಖರ ಬಾಬು,
ಸಮಾಜ ಸೇವಕರಾದ ಮೂಡಲಗಿರಿಯಪ್ಪ,ರಾಜೇಶ್ ಬಾಬು, ಗ್ರಾಮ ಪಂಚಾಯತಿ ಸದಸ್ಯರಾದ ಭದ್ರಪ್ಪ, ಬರಗೇನಹಳ್ಳಿ ಗ್ರಾಮ ಪಂಚಾಯಿತಿ ಪ್ರಭಾರಿ ಅಧ್ಯಕ್ಷರಾದ ಮುನಿರಾಜು, ಸದಸ್ಯರಾದ ದಿನೇಶ್, ಚೇತನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಶೇಖರ್, ಕರಕುಚ್ಚಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರತ್ನಮ್ಮ, ಸದಸ್ಯರಾದ ಶಾಂತಿಬಾಯಿ ಪ್ರಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರೇಣುಕಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ರಾದ ಹರೀಶ್ ಕುಮಾರ್, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್ ತರೀಕೆರೆ