ಎಸ್ ಚೌಡಪ್ಪ ಕೂಡ್ಲಿಗಿ ನಿಧನ ವಾರ್ತೆ

ವಿಜಯನಗರ : ಮಾರ್ಚ್ 25
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಡಾ॥ಬಿ.ಆರ್.ಅಂಬೇಡ್ಕರ್ ನಗರ ವಾಸಿ, ಹಾಗೂ ದಲಿತ ಸಮಾಜದ ಹಿರಿಯರಾದ ಚೌಡಪ್ಪ(80). ಮಾ25ರಂದು ಮಧ್ಯಾಹ್ನ ನಿಧನರಾಗಿದ್ದು, ಅವರು ಹಲವು ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತಿದ್ದರು. ಅವರು 4 ಜನ ಗಂಡುಮಕ್ಕಳು ಒಬ್ಬರು ಹೆಣ್ಣು ಮಕ್ಕಳನ್ನು, ಹಾಗೂ ಅಪಾರ ಬಂಧು ಬಳಗವನ್ನು ಹೊಂದಿದ್ದವರು. ಇವರ ಪುತ್ರರಾದ ಎಸ್.ದುರುಗೇಶ ರವರು, ದಲಿತ ಸಂಘರ್ಷ ಸಮಿತಿ ವಿಜಯನಗರ ಜಿಲ್ಲಾ ಸಂಚಾಲಕರಾಗಿದ್ದಾರೆ. ಮೃತರ ಸೊಸೆ ಶ್ರೀಮತಿ ರೇಣುಕಮ್ಮ ದುರುಗೇಶರವರು, ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷರಾಗಿದ್ದಾರೆ.
ಅಂತ್ಯಕ್ರಿಯೆ:ಮೃತರ ಅಂತ್ಯಕ್ರಿಯೆ ಮಾ26ರಂದು ಮಧ್ಯಾಹ್ನ12ಗಂಟೆಗೆ,ಪಟ್ಟಣದ ಶಾಂತಿವನದಲ್ಲಿ ನೆರವೇರಲಿದೆ.
ಸಂತಾಪ: ಚೌಡಪ್ಪರವರ ಅಗಲಿಕೆಗೆ ಪಟ್ಟಣ ಸೇರಿದಂತೆ ತಾಲೂಕಿನ, ದಲಿತ ಸಮಾಜ ಸೇರಿದಂತೆ ವಿವಿದ ಸಮುದಾಯವರು,ವಿವಿದ ಜನಪ್ರತಿನಿಧಿಗಳು, ದಲಿತ ಸಂಘರ್ಷ ಸಮಿತಿ ಸೇರಿದಂತೆ, ವಿವಿದ ಸಂಘ- ಸಂಸ್ಥೆಗಳ ಪದಾಧಿಕಾರಿಗಳು. ನಾಗರೀಕರು ಸಂತಾಪ ವ್ಯೆಕ್ತಪಡಿಸಿದ್ದಾರೆ.
ವಿಜಯನಗರ ಜಿಲ್ಲಾ : ವರದಿಗಾರರು ರಾಘವೇಂದ್ರ ಸಾಲಮನಿ