ಬಿಸಿಲನ್ನದೆ ಸುಡು ಬಿಸಿಲಿನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜಯ ಘೋಷಣೆಗಳೊಂದಿಗೆ ಮೆರವಣಿಗೆ ಮೂಲಕ ಹರ್ಷೋದ್ಗಾರ ನಡುವೆ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಲೋಕೇಶ್ ವಿನಾಯಕ
ಕೂಡ್ಲಿಗಿ ಏ.19

ವಿಜಯನಗರ ಜಿಲ್ಲೆ ಕೂಡ್ಲಿಗಿ 96 ವಿಧಾನಸಭಾ ಕ್ಷೇತ್ರದ ಆಡಳಿತ ಸೌಧದಲ್ಲಿ ಇಂದು ಬಿಜೆಪಿ ಅಭ್ಯರ್ಥಿಯಾದ ಅಂತಹ ಲೋಕೇಶ್ ವಿ ನಾಯಕ್ ಅವರು ತಮ್ಮ ಬೆಂಬಲಿಗರೊಂದಿಗೆ ಸಮಯ 11:30 ಸಮಯದಲ್ಲಿ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳಾದ ಈರಣ್ಣ ಬೀರದಾರ್ ಇವರಿಗೆ ನಾಮಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಚನ್ನಬಸನಗೌಡ ಹಾಗೂ ಬಿಜೆಪಿಯ ಜಿಲ್ಲಾ ಕಾರ್ಯದರ್ಶಿಯಾದ ಸೂರ್ಯ ಪಾಪಣ್ಣ ಮತ್ತು ಸೂಚಕರಾದ ಕುರುಬರು ಬಸಣ್ಣ ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಕಾನಮಡಗು ತಿಪ್ಪೇಸ್ವಾಮಿ ಹಾಗೂ ಗುಳಗಿ ವೀರೇಂದ್ರ ಮತ್ತು ಸಿಬ್ಬಂದಿ ವರ್ಗದವರು ಇದ್ದರು ನಂತರ ನಾಮಪತ್ರವನ್ನು ಸಲ್ಲಿಸಿ ಮರುಕ್ಷಣದಲ್ಲಿ ಜನ ಸಾಗರದಂತೆ ಹರಿದು ಬಂದಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ ಅಂಬೇಡ್ಕರ್ ಸರ್ಕಲ್ ನಿಂದ ಮೆರವಣಿಗೆ ಮೂಲಕ ಕೊತ್ತಲ ಆಂಜನೇಯ ದೇವಸ್ಥಾನದ ಕಡೆ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ಸಾವಿರಾರು ಜನಗಳ ಮಧ್ಯೆ ಲೋಕೇಶ್ ವಿ ನಾಯಕ್ ಇವರ ಅಭಿಮಾನಿಗಳು ಸುಡು ಬಿಸಿಲಿನಲ್ಲೇ ಗೆಲುವಿನ ಜಯ ಘೋಷಣೆಗಳನ್ನು ಕೂಗುದರೊಂದಿಗೆ ಮೆರವಣಿಗೆ ಯಶಸ್ವಿಯಾಗಿ ಸಾಗಿತು.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ.