ಕೂಲಿಕಾರರು ಉದ್ಯೋಗ ಅರಸಿ ವಲಸೆ ಹೋಗುವ ಅಗತ್ಯವಿಲ್ಲ – ತಾಲೂಕ ಪಂಚಾಯತಿ ಇ.ಓ ರಾಮು ಅಗ್ನಿ ಹೇಳಿದರು.

ಆಲಮೇಲ ಜು.24

ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ದೃಷ್ಟಿಯಿಂದ ಮತ್ತಷ್ಟು ಅನುಕೂಲವಾಗುವ ರೀತಿಯಲ್ಲಿ ಮಾರ್ಪಾಡು ಮಾಡಿ ವಿಬಿಜಿ ರಾಮ್ ಜಿ ಯೋಜನೆಯನ್ನು ಜಾರಿ ಗೊಳಿಸಲಾಗಿದ್ದು ಅದರ ಉಪಯೋಗವನ್ನು ಸಾರ್ವಜನಿಕರು ಪಡೆದು ಕೊಳ್ಳಬೇಕೆಂದು ಸಿಂದಗಿ ತಾಲೂಕು ಪಂಚಾಯತ್ ಇಓ ರಾಮು ಜಿ ಅಗ್ನಿ ಹೇಳಿದರು.

ಅವರು ತಾಲೂಕಿನ ಮಲಘಾಣ ಗ್ರಾಮ ಪಂಚಾಯತ ವ್ಯಾಪ್ತಿಯ ಮಲಘಾಣ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕಾ ಮಿಷನ್(ಗ್ರಾಮೀಣ) ಕಾಯ್ದೆ 2025 ಯೋಜನೆಯ ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ ಜನಜಾಗೃತಿ ಅಭಿಯಾನ ಕೈಗೊಂಡು ಕಾರ್ಯಕ್ರಮ ಉದ್ದೇಶೀಸಿ ಮಾತನಾಡುತ್ತಿದ್ದರು.

ಜುಲೈ -1 ರಿಂದ ನರೇಗಾ ಯೋಜನೆ ಬದಲಾಗಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮೀಷನ್ ಗ್ರಾಮೀಣ ಕಾಯ್ದೆ ಯೋಜನೆ ಜಾರಿಗೆ ಬಂದಿದೆ ಇದರ ಅನ್ವಯ ಹೊಸ ಕೂಲಿ ದರ 370.ರೂ ರಿಂದ 382.ರೂ ಗೆ ಹೆಚ್ಚಿಸಲಾಗಿದೆ ಹಾಗೂ ಮಾವನ ದಿನಗಳನ್ನು 100 ರಿಂದ 125 ಕ್ಕೆ ಹೆಚ್ಚಿಸಲಾಗಿದೆ.

ಆದ್ದರಿಂದ ಕೂಲಿಕಾರರು ವಲಸೆ ಹೋಗದೆ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗವನ್ನು ಪಡೆಯುವ ಹಕ್ಕನ್ನು ಹೊಂದಿರುವ ಕುರಿತು ಮಾಹಿತಿ ನೀಡಿದರು ಅಕುಶಲ ಕೆಲಸ ಮಾಡಲು ಬಯಸುವ ಕೂಲಿಕಾರರು ಉದ್ಯೋಗ ಚೀಟಿ ಪಡೆದು ಕೊಂಡಿದ್ದಲ್ಲಿ ನಮೂನೆ 6 ರಲ್ಲಿ ತಮ್ಮ ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸ ಬೇಕಾಗುತ್ತದೆ.

ಮುಂದುವರೆದು 318 ಅನುಮೋದಿತ ಕಾಮಗಾರಿಗಳಲ್ಲಿ ತಮ್ಮ ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳ ಜೊತೆಗೆ ರೈತರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೂಡಾ ಅನುಷ್ಠಾನ ಗೊಳಿಸಲು ಅವಕಾಶವಿರುವುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಸವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕರಾದ ಬಸವರಾಜ ಹುಣಸಗಿ, ಕಾರ್ಯದರ್ಶಿಗಳಾದ ನೀಲಮ್ಮ ಬಿರಾದಾರ, ಗ್ರಾಮಕಾಯಕ ಮಿತ್ರ ಶ್ರೀಮತಿ ಭಾಗ್ಯಶ್ರೀ ಪರಗೊಂಡ, ರಾಜಶ್ರೀ ಹರಿಜನ ಸೇರಿದಂತೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಆರಿಫ್, ಶಂಕರ ಹಾಗೂ ಗ್ರಾಮಸ್ಥರು ಹಾಜರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button