ನವವಿಧ ಭಕ್ತಿಯ ಅನುಷ್ಠಾನದಿಂದ ಭಗವಂತನ ಅನುಗ್ರಹ ಸಾಧ್ಯ – ಸ್ವಾಮಿ ಬೋಧಸ್ವರೂಪಾನಂದಜೀ ಅಭಿಮತ.
ಚಳ್ಳಕೆರೆ ಜು.24

ಶ್ರೀಮದ್ ಭಾಗವತದಲ್ಲಿ ಬರುವ ನವವಿಧ ಭಕ್ತಿಯ ಅನುಷ್ಠಾನದಿಂದ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದು ಹಲಸೂರಿನ ಶ್ರೀರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಬೋಧಸ್ವರೂಪಾನಂದಜೀ ಅಭಿಪ್ರಾಯ ಪಟ್ಟರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮದ ಎರಡನೇ ದಿನದ ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ ಅವರು “ನವವಿಧ ಭಕ್ತಿ” ಎಂಬ ವಿಷಯವಾಗಿ ಪ್ರವಚನ ನೀಡುತ್ತ ಮಾತನಾಡಿದರು.

ಶ್ರವಣ, ಕೀರ್ತನ, ಸ್ಮರಣಾ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ, ಆತ್ಮನಿವೇದನೆಯ ಭಕ್ತಿಯ ಸಮರ್ಪಣೆಯ ಮೂಲಕ ಭಗವಂತನನ್ನು ತಲುಪಬಹುದು ಎಂದು ಅವರು ಒಂಭತ್ತು ರೀತಿಯ ಭಕ್ತಿಗಳನ್ನು ಉದಾಹರಣೆ ಸಹಿತ ವಿವರಿಸಿದರು.

ಇದೇ ಸಂದರ್ಭದಲ್ಲಿ ಪೂಜ್ಯರು ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಹತ್ತು ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀಶಾರದಾಶ್ರಮದಿಂದ ನೀಡಲಾಗುವ “ವಿದ್ಯಾರ್ಥಿ ವೇತನ”ವನ್ನು ವಿತರಿಸಿ ಆಶೀರ್ವಾದಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಭಜನೆ, ಕುಮಾರಿ ವೀಣಾ ಅವರಿಂದ ಶ್ರೀಕೃಷ್ಣನಿಗೆ ಹಾಗೂ ದಿವ್ಯತ್ರಯರಿಗೆ ಆರತಿ, ಬಿ ಸುಮನಾ ಕೋಟೇಶ್ವರ ಅವರಿಂದ ಸ್ವಾಗತ-ಪರಿಚಯ, ಮಾತಾಜೀ ತ್ಯಾಗಮಯೀ ಅವರಿಂದ ವಂದನಾರ್ಪಣೆ, ಅನ್ನಪ್ರಸಾದ ವಿನಿಯೋಗ ನಡೆಯಿತು.

ಸಪ್ತಾಹ ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ, ಪ್ರೇಮಾ, ವನಜಾಕ್ಷಿ,ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ,ಜಿ ಯಶೋಧಾ, ಮಂಜುಳಾ, ಸುಧಾಮಣಿ, ಕವಿತಾ, ಅಂಬುಜಾ, ಡಾ, ಸುನೀತಾ, ಸಂತೋಷ್, ಮಾನ್ಯ, ಹೃತಿಕ್, ಪುಷ್ಪಲತಾ, ವೀಣಾ, ನಾಗೇಶ್, ಪ್ರವಲ್ಲಿಕಾ, ಚೆನ್ನಕೇಶವ, ಲಕ್ಷ್ಮೀ, ನಾಗರತ್ನಮ್ಮ, ಲೋಕಮಾನ್ಯ, ರಶ್ಮಿ ಪಂಡಿತಾರಾಧ್ಯ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

