ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎಸ್‌.ಡಿ.ಎಂ.ಸಿ ಅಧ್ಯಕ್ಷರಾಗಿ – ಚಿಕಟ್ನಿಕೊಲ್ ರಾಮೇಶ ನಾಯಕ.

ದದ್ದಲ್ ಜು.24

ಮಾನ್ವಿ ತಾಲೂಕಿನ ದದ್ದಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಗುರುವಾರ ನಡೆಯಿತು.

ಈ ಸಂಬಂಧ ಶಾಲೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಪಾಲಕರು, ಶಿಕ್ಷಣ ಪ್ರೇಮಿಗಳು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿ ಚರ್ಚೆ ನಡೆಸಿದ ಬಳಿಕ ಚೀಟಿ ಆಯ್ಕೆ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ಚೀಟಿ ಆಯ್ಕೆ ಪ್ರಕ್ರಿಯೆಯಲ್ಲಿ ಚಿಕಟ್ನಿಕೊಲ್ ರಾಮೇಶ ನಾಯಕ ಅಧ್ಯಕ್ಷರಾಗಿ ಹಾಗೂ ನೀಲಮ್ಮ ಗಂಡ, ಕಾವಲಿ ಈರಣ್ಣ ನಾಯಕ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು ಎಂದು ಶಾಲೆಯ ಮುಖ್ಯಗುರು ದತ್ತಪ್ಪ ಅಲ್ಕೂರು ತಿಳಿಸಿದ್ದಾರೆ.

ಸದಸ್ಯರಾಗಿ ಸಣ್ಣ ವೀರೇಶ ಮದಕಲ್, ಗೌಡ್ರು ಮಾರೆಣ್ಣ, ಮದ್ರಿ ರಾಮಯ್ಯ, ತಳವಾರ ಮೊಟ್ಲು ರಾಮ್, ಮದ್ರಿ ಸಣ್ಣ ಈರಪ್ಪ, ಕಾವಲಿ ತಿಮ್ಮಪ್ಪ, ಸೀಕಲ್ ಯಾಕಪ್ಪ, ಎರೇಡ್ಡಿ ಹನುಮೇಶ, ಕಾವಲಿ ಹನುಮೇಶ, ಗೌಡ್ರು ಮಹಾದೇವ, ಅಗಸರ ಮಹಾದೇವ, ಮದ್ರಿ ಈರಪ್ಪ, ಸಾಧು ಹನುಮೇಶ, ಅಡಿವೇಶ ಮೊಟ್ಲು, ಹನುಮಯ್ಯ ಮೊಟ್ಲು ಹಾಗೂ ಎರೇಡ್ಡಿ ಮುದುಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹಿರಿಯ ಶಿಕ್ಷಕರಾದ ರಾಮೇಶ ದೇಸಾಯಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದೇವೇಶ ನಾಯಕ ಜೈ, ವರದಿಗಾರ ಈರಪ್ಪ ದದ್ದಲ್, ದೊಡ್ಡ ದೇವಣ್ಣ, ಕಾವಲಿ ರಂಗಪ್ಪ, ದಸರಾ ಶಿವಪ್ಪ, ಶಾಲೆಯ ಮುಖ್ಯಗುರು ದತ್ತಪ್ಪ ಅಲ್ಕೂರು, ಹಿರಿಯ ಶಿಕ್ಷಕ ರಾಮೇಶ ದೇಸಾಯಿ, ಸಹ ಶಿಕ್ಷಕರಾದ ಮದ್ರಿ ಹನಮಂತ್ರಾಯ ದದ್ದಲ್, ಕೊರುವಯ್ಯ ಕೊರವಿ, ಸಹ ಶಿಕ್ಷಕಿ ಸಾವಿತ್ರಿ ದದ್ದಲ್, ಅಡುಗೆ ಸಿಬ್ಬಂದಿ, ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button