ವಿದ್ಯಾರ್ಥಿಗಳು ಚಾರಿತ್ರ್ಯ ಸಂಪನ್ನರಾಗಬೇಕು – ಸ್ವಾಮಿ ಸೌಖ್ಯಾನಂದಜೀ.
ಚಳ್ಳಕೆರೆ ಜು.23

ವ್ಯಕ್ತಿಯ ವ್ಯಕ್ತಿತ್ವಕ್ಕೆ ಸದಾ ಬೆಳಕು ನೀಡುವ ಚಾರಿತ್ರ್ಯ ವಂತಿಕೆಯನ್ನು ವಿದ್ಯಾರ್ಥಿಗಳು ಬೆಳೆಸಿ ಕೊಳ್ಳಬೇಕು ಎಂದು ಬೆಂಗಳೂರಿನ ಬಸವನ ಗುಡಿಯ ಶ್ರೀರಾಮಕೃಷ್ಣ ಮಠದ ಸ್ವಾಮಿ ಸೌಖ್ಯಾನಂದಜೀ ಮಹಾರಾಜ್ ತಿಳಿಸಿದರು.

ತ್ಯಾಗರಾಜ ನಗರದ ಬಾಪೂಜಿ ಆಯುರ್ವೇದ ಕಾಲೇಜಿನಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಚಾರಿತ್ರ್ಯ ನಿರ್ಮಾಣ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು. ಶ್ರೀರಾಮಕೃಷ್ಣ ಪರಮ ಹಂಸರು,ಬುದ್ಧ, ಬಸವ, ಗಾಂಧಿ, ಸ್ವಾಮಿ ವಿವೇಕಾನಂದರ ಚಾರಿತ್ರ್ಯವಂತ ವ್ಯಕ್ತಿತ್ವಗಳು ನಮಗೆ ಆದರ್ಶವಾಗಬೇಕು ಎಂದು ಅವರು ಹೇಳಿದರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ, ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ ಬಸವರಾಜಪ್ಪ ,ಡಾ.ಸುನೀತಾ, ಹರಿಕೇಶವ, ನರೇಂದ್ರ, ರಂಗನಾಥ, ಯತೀಶ್ ಎಂ ಸಿದ್ದಾಪುರ, ಹೃತಿಕ್, ಸಂಜನಾ, ಮಾನಸ,ಕಿರಣ್, ಸಾಯಿಸ್ಪೂರ್ತಿ ಸೇರಿದಂತೆ ಕಾಲೇಜಿನ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

