‘ಟಿ. ವಾಸುದೇವ ನಾಯಕ್ & ಕಂ.’ ತೆಕ್ಕಟ್ಟೆ ,ನಂಬಿಕೆಯ ಬೆಸುಗೆಯಲ್ಲಿ ಮೂಡಿ ಬಂದ – ಸಗಟು ವ್ಯಾಪಾರದ ಭದ್ರಕೋಟೆ..!
ತೆಕ್ಕಟ್ಟೆ ಜು.24
ಪ್ರಮುಖ ಉತ್ಪನ್ನಗಳು:-
ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ ಹಾಗೂ ಸಕಲ ಬೇಳೆ ಕಾಳುಗಳ ಸಗಟು ಭಂಡಾರ.
ವಿಳಾಸ:-
ಗ್ರೇಸ್ ಹೋಲ್ ಹಾಲ್ ಎದುರು, ತೆಕ್ಕಟ್ಟೆ.
ತೆಕ್ಕಟ್ಟೆ:-
ಬದುಕು ಅಂದ್ರೆನೇ ಹಾಗೇ ಕಣ್ರೀ… ಹಳ್ಳಿಯ ಮೂಲೆ-ಮೂಲೆಗಳಲ್ಲೂ ಬದುಕಿನ ಬಂಡಿಯನ್ನು ಎಳೆಯಲು ಬೆವರು ಸುರಿಸುವ ಮನುಷ್ಯರು ಇದ್ದಾರೆ. ಅಂತಹವರ ನಡುವೆ, ವ್ಯಾಪಾರ ಅಂದ್ರೆ ಬರೀ ಲಾಭವಲ್ಲ, ಗ್ರಾಹಕರ ನಂಬಿಕೆ ಅಂತ ನಂಬಿ ನಡೆದುಕೊಳ್ಳುವ ಕೆಲವು ಹೆಸರುಗಳಿರುತ್ತವೆ. ತೆಕ್ಕಟ್ಟೆಯ ಮಣ್ಣಿನಲ್ಲಿ ಅಂತಹದ್ದೇ ಒಂದು ವಿಶ್ವಾಸಾರ್ಹತೆಯ ಹೆಸರು—’ಟಿ. ವಾಸುದೇವ ನಾಯಕ್ & ಕಂ.’
ಕಾಲ ಬದಲಾಗಿದೆ, ವ್ಯಾಪಾರದ ಧಾಟಿ ಬದಲಾಗಿದೆ. ಆದ್ರೆ, ಗುಣಮಟ್ಟದಲ್ಲಿ ಕವಿ-ಕಲ್ಪನೆಗೂ ಜಗ್ಗದ, ಬೆಲೆಯಲ್ಲಿ ಗ್ರಾಹಕರ ಜೇಬಿಗೆ ಭಾರವಾಗದ ಪ್ರಾಮಾಣಿಕ ವ್ಯಾಪಾರದ ದಾರಿ ಹಿಡಿದಿದೆ ಈ ಸಂಸ್ಥೆ.
ಇಲ್ಲಿ ಬಾಗಿಲು ತೆರೆದರೆ ಸಾಕು, ಹಳ್ಳಿಯ ಸಣ್ಣಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ಮಟ್ಟದ ವ್ಯಾಪಾರಿಗಳವರೆಗೆ ಎಲ್ಲರಿಗೂ ಬೇಕಾದ್ದು ಸಿಗುತ್ತದೆ. ದಿನಸಿ ಅಂದ್ರೆ ಬರೀ ತಿನಿಸಲ್ಲ, ಅದೊಂದು ನಂಬಿಕೆ. ಅಂತಹ ನಂಬಿಕೆಗೆ ತಕ್ಕಂತೆ ಅತ್ಯುತ್ತಮ ಗುಣಮಟ್ಟದ ಅಕ್ಕಿ, ನಾಲಿಗೆಗೆ ಇಷ್ಟವಾಗುವ ಸಕ್ಕರೆ, ಅಡುಗೆಯ ಘಮ ಹೆಚ್ಚಿಸುವ ಅಡುಗೆ ಎಣ್ಣೆ ಮತ್ತು ಬಗೆಬಗೆಯ ಬೇಳೆಕಾಳುಗಳು ಇಲ್ಲಿ ಸಗಟು ದರದಲ್ಲಿ ಮುಕ್ತವಾಗಿ ಲಭ್ಯವಿವೆ.
ವ್ಯಾಪಾರ ಅಂದ್ರೆ ಕೇವಲ ನೋಟುಗಳ ಎಣಿಕೆಯಲ್ಲ; ಅದು ಜನರ ಮನಸ್ಸು ಗೆಲ್ಲುವ ಕಲೆ. ತೆಕ್ಕಟ್ಟೆಯ ಗ್ರೇಸ್ ಹೋಲ್ ಹಾಲ್ ಎದುರು ಗಟ್ಟಿಯಾಗಿ ಬೇರೂರಿರುವ ಈ ಸಂಸ್ಥೆ, ದೀರ್ಘಕಾಲದಿಂದ ಜನರ ನಂಬಿಕೆಯನ್ನು ಉಳಿಸಿ ಕೊಂಡು ಬಂದಿದೆ.
ನಿಮಗೂ ಒಳ್ಳೆಯ ಸರಕು ಬೇಕೆ? ವ್ಯಾಪಾರದಲ್ಲಿ ಲಾಭದ ದಾರಿ ಹಿಡಿಯಬೇಕೆ? ಹಾಗಾದರೆ ಒಮ್ಮೆ ತೆಕ್ಕಟ್ಟೆಯ ಈ ನಂಬಿಕೆಯ ಅಂಗಡಿಗೆ ಹೆಜ್ಜೆ ಹಾಕಿ. ಸಂಸ್ಥೆಯ ಹೊಸ್ತಿಲು ನಿಮಗಾಗಿ ಸದಾ ತೆರೆದಿದೆ!📰
✒️ವರದಿ:ಆರತಿ.ಗಿಳಿಯಾರು,ಉಡುಪಿ✒️

