ಎಡಗೈ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ವಿವಿಧ ದಲಿತಪರ ಸಂಘಟನೆಗಳಿಂದ ಒತ್ತಾಯ.
ಕೊಟ್ಟೂರು ಮೇ.16

ಕೊಟ್ಟೂರು 2023 ನೇ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆದುಕೊಳ್ಳುವ ಮೂಲಕ ಸರ್ಕಾರ ರಚನೆ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರವು ಉಪಮುಖ್ಯಮಂತ್ರಿ ಸ್ಥಾನವು ಎಡಗೈ ಸಮುದಾಯಕ್ಕೆ ನೀಡುವಂತೆ ಕೊಟ್ಟೂರಿನ ದಲಿತಪರ ಸಂಘಟನೆಗಳು ಅವಳಿ ಜಿಲ್ಲೆಗಳಾದ ಬಳ್ಳಾರಿ ವಿಜಯನಗರ ಜಿಲ್ಲೆಯ ವಿವಿಧ ದಲಿತ ಪರ ಸಂಘಟನೆಗಳಿಂದ ಒತ್ತಾಯ ಆಗ್ರಹಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಡಿಎಸ್ಎಸ್ ತಾಲೂಕುಧ್ಯಕ್ಷರಾದ ಟಿ. ಹನುಮಂತಪ್ಪ ವಕೀಲರು ಮಾತನಾಡಿ ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ ಎಡಗೈ ಸಮುದಾಯ ಮುಧೋಳ ಮತಕ್ಷೇತ್ರದ ಶಾಸಕರಾಗಿರುವ ರಾಮಪ್ಪ ಬಾಳಪ್ಪ ತಿಮ್ಮಾಪುರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಅವಳಿ ಜಿಲ್ಲೆಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳು ಆಗ್ರಹಿಸಿದ್ದರು. ದಲಿತ ಮುಖಂಡರಾದ ಪಟ್ಟಣ ಪಂಚಾಯತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬುಗ್ಗಳ್ಳಿ ಕೊಟ್ರೇಶ್, ಮಾತನಾಡಿ ಹಿಂದುಳಿದ ದಲಿತ ಸಮುದಾಯಕ್ಕೆ ಸಮಾನವಾದ ಸ್ಥಾನಮಾನ ನೀಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಲಾಗುವುದು ಎಂದು ಹೇಳಿದರು ಈ ಸಂದರ್ಭದಲ್ಲಿ ಟೀ ಮೈಲಪ್ಪ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಎನ್ ಎಸ್ ಯು ಐ ಕಾರ್ಯದರ್ಶಿ ಕೆ ತಿಪ್ಪೇಸ್ವಾಮಿ ಹೊಸಮನಿ, ಪರಶುರಾಮ್.ಬೇವೂರ್ ಕೊಟ್ರೇಶ್, ಟಿ ಸುರೇಶ್, ಅಜ್ಜಯ್ಯ.ಜಿ ಕೊಟ್ರೇಶ್, ಕಂದಗಲ್ ಕೊಲ್ಲಾರಿ, ಆರ್. ಅಂಬರೀಶ್, ಬದ್ರಿ . ರಾಮಣ್ಣ.ಹಾಗೂ ಡಿಎಸ್ಎಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.ತಾಲೂಕ ವರದಿಗಾರರು: ಪ್ರದೀಪ್.ಕುಮಾರ್.C ಕೊಟ್ಟೂರು