ಶತಾಯುಷಿ ಸೂಲಗಿತ್ತಿ ತಳುಕಿನ – ತಿಮ್ಮಕ್ಕ ನಿಧನ.
ಕಾಲುವೆಹಳ್ಳಿ ಆ.11

ಚಳ್ಳಕೆರೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದ ಸಾವಿರಾರು ಸಹಜ ಹೆರಿಗೆ ಮಾಡಿಸಿ ಖ್ಯಾತಿ ಗಳಿಸಿದ್ದ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕ (104 ವರ್ಷ) ಸೋಮವಾರ ರಾತ್ರಿ ತಮ್ಮ ಸ್ವ ಗೃಹದಲ್ಲಿ ನಿಧನರಾದರು.

ಅವರು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ತಿಮ್ಮಕ್ಕರ ಪಾರ್ಥಿವ ಶರೀರವನ್ನು ಗ್ರಾಮದ ಸಾರ್ವಜನಿಕ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ಅಜ್ಜಿಯ ಸ್ವಂತ ಸೂರಿನ ಕನಸು ಕನಸಾಗಿಯೇ ಉಳಿಯಿತು ಎಂದು ವರದಿಯಾಗಿದೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
