ವಿಧಾನ ಸಭಾ ಕ್ಷೇತ್ರಕ್ಕೆ ₹8.75 ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ – ನೀಡಿದ ಎನ್.ವೈ ಗೋಪಾಲಕೃಷ್ಣ ಶಾಸಕರು.
ಮೊಳಕಾಲ್ಮೂರು ಆ.12

ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಜನಪ್ರಿಯ ಶಾಸಕರಾದ ಶ್ರೀ ಎನ್.ವೈ ಗೋಪಾಲಕೃಷ್ಣ ಅವರ ಪ್ರಯತ್ನದ ಫಲವಾಗಿ ಕ್ಷೇತ್ರದ ವಿವಿಧ ಗ್ರಾಮಗಳ ರಸ್ತೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಒಟ್ಟು ₹8.75 ಕೋಟಿ ಅನುದಾನದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಮನೆಕೋಟೆ – ಬಂಜಿಗೆರೆ ರಸ್ತೆ ಅಭಿವೃದ್ಧಿ – ₹3.50 ಕೋಟಿ
ಗೌರಸಮುದ್ರ – ತುಮಲ್ಲು ರಸ್ತೆ ಅಭಿವೃದ್ಧಿ – ₹1.50 ಕೋಟಿ
ಹಿರೇಹಳ್ಳಿ – ಗೌರಸಮುದ್ರ ರಸ್ತೆ ಅಭಿವೃದ್ಧಿ – ₹2.00 ಕೋಟಿ

NH-150A – ಚಿಕ್ಕಹಳ್ಳಿ ರಸ್ತೆ ಅಭಿವೃದ್ಧಿ – ₹1.50 ಕೋಟಿ
ಹಿರೇಹಳ್ಳಿ ಹಾಗೂ ಕಾಕಿಬೋರನಟ್ಟಿ ಗ್ರಾಮಗಳಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ – ₹25 ಲಕ್ಷ
ಜನರ ಸುಗಮ ಸಂಚಾರ, ಗ್ರಾಮೀಣ ಸಂಪರ್ಕ ಮತ್ತು ಕ್ಷೇತ್ರದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಈ ಕಾಮಗಾರಿಗಳು ಮತ್ತಷ್ಟು ವೇಗ ನೀಡಲಿವೆ.
ಅಭಿವೃದ್ಧಿಯೇ ಗುರಿ – ಜನ ಸೇವೆಯೇ ಸಂಕಲ್ಪ. ಮೊಳಕಾಲ್ಮೂರು ಕ್ಷೇತ್ರದ ಅಭಿವೃದ್ಧಿಗೆ ಎನ್.ವೈ ಗೋಪಾಲಕೃಷ್ಣ ಅವರ ನಿರಂತರ ಶ್ರಮ ಮುಂದುವರಿಯಲಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ ಎಚ್ ಮೀನಕೆರಿ ಹೊಂಬಾಳೆ ಮೊಳಕಾಲ್ಮುರು

