ಜಂತು ನಾಶಕ ಮಾತ್ರೆ ಬಹು ಸುರಕ್ಷಿತ ಭಯ ಬೇಡ – ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ.
ಅಮೀನಗಡ ಆ.11

ಜಿಲ್ಲಾ ಆಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಿ.ಎಮ್ ಶ್ರೀ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನಾಚರಣೆ ಆಯೋಜಿಸಲಾಗಿತ್ತು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಎಮ್.ಎಮ್ ಸಜ್ಜನ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ ಶಾಲಾ ವಿದ್ಯಾರ್ಥಿಗಳಿಗೆ ಅಲ್ಬೆಂಡಾಜೋಲ್ ಮಾತ್ರೆ ವಿತರಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ.
ಮಾತನಾಡಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು ಜಂತು ಹುಳು ರಹಿತ ಮಕ್ಕಳು ಆರೋಗ್ಯವಂತ ಮಕ್ಕಳು ಎಂಬ ಘೋಷ ವಾಕ್ಯಯೊಂದಿಗೆ ಪ್ರತಿ ಆರು ತಿಂಗಳಿಗೊಮ್ಮೆ 2 ವರ್ಷದಿಂದ 19 ವರ್ಷದ ವಯೋ ಮಾನದ ವಿದ್ಯಾರ್ಥಿಗಳಿಗೆ ಶಾಲೆಯಿಂದ ಹೊರ ಉಳಿದವರಿಗೆ ಆರೋಗ್ಯ ಇಲಾಖೆಯಿಂದ ಜಂತು ನಾಶಕ ಮಾತ್ರೆ ಅಲ್ಡೆಂಡಾಜೋಲ್ 400 ಮೀಗ್ರಾಂ ಮಾತ್ರೆ ಉಚಿತವಾಗಿ ಎಲ್ಲಾ ಶಾಲೆ ಅಂಗನವಾಡಿ ಮಕ್ಕಳಿಗೆ ಊಟದ ನಂತರ ಚೀಪಿ ತಿನ್ನುಲು ಮಾತ್ರೆ ವಿತರಿಸಲಾಗುವುದು.
ಮಕ್ಕಳಲ್ಲಿ ಜಂತು ಹುಳು ಬಾಧೆಯಿಂದ ರಕ್ತ ಹೀನತೆ ಅಪೌಷ್ಠಿಕತೆ ಉಂಟಾಗುತ್ತದೆ. ಕೈಗಳ ಸ್ವಚ್ಛತೆ. ಶುದ್ಧ ನೀರು ಸೇವನೆ ತರಕಾರಿ ಹಣ್ಣು ನೀರಿನಿಂದ ತೊಳೆದು ಉಪಯೋಗಿಸುವುದು.
ಹಾಗೂ ಮನೆ ಸುತ್ತಮುತ್ತ ಪರಿಸರ ಸ್ವಚ್ಛತೆ ಆದ್ಯತೆ ನೀಡಬೇಕು. ಜಂತು ನಾಶಕ ಮಾತ್ರೆ ಸುರಕ್ಷಿತವಾಗಿದೆ ಭಯಬೇಡ ಎಲ್ಲರೂ ಊಟದ ನಂತರ ಸೇವಿಸಲು ತಿಳಿಸಿದರು.
ಮುಖ್ಯ ಶಿಕ್ಷಕ ಎಮ್ ಎಮ್ ಸಜ್ಜನ ಆರೋಗ್ಯ ಇಲಾಖೆಯ ವಿತರಿಸುವ ಮಾತ್ರ ಸೇವಿಸಿ ಆರೋಗ್ಯವನ್ನು ಕಾಪಾಡಿ ಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿ ಎಸ್ ಕೊಲ್ಕಾರ, ಶಾಲಾ ಗುರು ಮಾತೆಯರಾದ ಎಸ್ ಎಸ್ ಲಮಾಣಿ, ಆರ್ ಎಮ್ ಎಮ್ಮಿ, ವಿ ವಿ ಕಂದಕೂರ, ಐ ಬಿ ಬಾಪೂರ, ಹಾಗೂ ಆಶಾ ಕಾರ್ಯಕರ್ತೆಯರು ಶಾಲಾ ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು ಎಂದು ವರದಿಯಾಗಿದೆ.
