ಶರಣಾಗತಿಯ ಮೂಲಕ ಭಗವಂತನ ಪರಂಧಾಮವನ್ನು ಪಡೆಯಬಹುದು – ಶ್ರೀಮತಿ ಪುಷ್ಪಲತಾ ವಿಜಯ್.

ಚಳ್ಳಕೆರೆ ಆ.12

ಶರಣಾಗತಿಯ ಮೂಲಕ ಭಗವಂತನ ಪರಂಧಾಮವನ್ನು ಸೇರಬಹುದೆಂದು ಶ್ರೀಕೃಷ್ಣ ಪುರುಷೋತ್ತಮ ಯೋಗದ ಆರನೇ ಶ್ಲೋಕದ ಮೂಲಕ ಅರ್ಜುನನಿಗೆ ಸಾಂಕೇತಿಕವಾಗಿ ಹೇಳುವ ಮೂಲಕ ಎಲ್ಲಾ ಮನುಷ್ಯರಿಗೆ ತಿಳಿಸುತ್ತಾನೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಪುಷ್ಪಲತಾ ವಿಜಯ್ ತಿಳಿಸಿದರು.

ತ್ಯಾಗರಾಜ ನಗರದ ತಮ್ಮ ನಿರಂಜನ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು “ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ಯೋಗದ ಆರನೇ ಶ್ಲೋಕದ ಪಠಣ-ಅರ್ಥ-ವಿವರಣೆ” ನೀಡುತ್ತ ಮಾತನಾಡಿದರು.

ಇಡೀ ಜಗತ್ತು ಭಗವಂತನ ಸ್ವತ್ತು, ಆಧ್ಯಾತ್ಮಿಕ ಜಗತ್ತಿನಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳ ಬೆಳಕು ಅವಶ್ಯಕತೆಯಿಲ್ಲ. ಆಧ್ಯಾತ್ಮಿಕ ಜಗತ್ತನ್ನು ಪರಮ ಪ್ರಭುವಿನ ಅಂತರಂಗದ ಶಕ್ತಿ ಬೆಳಗುತ್ತದೆ ಎಂದು ಹೇಳಿದರು.

ಸತ್ಸಂಗದಲ್ಲಿ ಹೆಚ್ ಲಕ್ಷ್ಮೀದೇವಮ್ಮ, ಪ್ರೇಮಾ, ಗೀತಾ ನಾಗರಾಜ್, ಪ್ರಮೀಳಾ, ಗೀತಾ ಪ್ರಕಾಶ್, ವಿಜಯಾಗುರು, ಲಕ್ಷ್ಮೀ ಸುರೇಶ್, ಯತೀಶ್ ಎಂ ಸಿದ್ದಾಪುರ, ವಿಜಯಲಕ್ಷ್ಮೀ, ನಂದಿನಿ, ಸರಸ್ವತಿ ನಾಗರಾಜ್, ದ್ರಾಕ್ಷಾಯಣಿ, ವನಜಾ, ಸವಿತಾ ತಿಪ್ಪೇರುದ್ರಪ್ಪ, ಮಂಗಳಮ್ಮ,ಶೋಭಾ ಜಗದೀಶ್, ಸವಿತಾ, ಅನಂತಮ್ಮ, ಶಿಲ್ಪಾ, ಸತ್ಯಮ್ಮ, ಸರೋಜಾ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button