ಮೊಳಕಾಲ್ಮೂರು ಪಟ್ಟಣದ ಜನಗಳಿಗೆ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ತಂಡದೊಂದಿಗೆ ಭೆಟ್ಟಿಕೊಟ್ಟು ವಾಸ್ತವ ಸ್ಥಿತಿಗತಿಯ ಬಗ್ಗೆ ತಿಳಿಸಿ ಬಗೆಹರಿಸಿದ ಶಾಸಕರು.
ಬೊಮ್ಮಲಿಂಗನಹಳ್ಳಿ ಜೂನ್.6

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಇಂದು ಬೋಮ್ಮಲಿಂಗನಹಳ್ಳಿ ಪಕ್ಕದ ರಂಗಯ್ಯನದುರ್ಗ ಜಲಾಶಯಕ್ಕೆ ತಾಲೂಕ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ತಹಸಿಲ್ದರಾದ ರೂಪ ಮೇಡಂ ತಾಲೂಕ್ ಪಂಚಾಯತಿ ಅಧಿಕಾರಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಕರೆದು ಎಲ್ಲಿ ಏನಾಗಿದೆ ಎಂಬುದನ್ನು ತಿಳಿದುಕೊಂಡು ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು ಖುದ್ದಾಗಿ ಜಾಗಕ್ಕೆ ಹೋಗಿ ಎನ್. ವೈ. ಗೋಪಾಲಕೃಷ್ಣ ಶಾಸಕರು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮೊಳಕಾಲ್ಮುರು ಪಟ್ಟಣದ ಜನಗಳಿಗೆ ರಂಗಯ್ಯನದುರ್ಗ ಜಲಾಶಯದಲ್ಲಿ ಬೇಕಾದಷ್ಟು ನೀರು ಇದ್ದು ಏಕೆ ನೀರಿನ ಅಡೆತಡೆ ಇರಬಹುದು ಎಂದು ಶಾಸಕರು ಭೇಟಿಕೊಟ್ಟು ಪೈಪ್ ಲೈನ್ ಮುಖಾಂತರ ಹೋಗುವ ನೀರನ್ನು ಎಲ್ಲಿ ಡ್ಯಾಮೇಜ್ ಆಗಿದೆ ಅದನ್ನು ಸರಿಪಡಿಸಿ ಮತ್ತೆ ಹೊಸ ಮೋಟಾರ್ ಬೇಕಾದರೆ ತಂದು ಹಾಕಿ ಮತ್ತು ಹಾನಗಲ್ ಹತ್ತಿರ ಫಿಲ್ಟರ್ ಆಗಿ ಹೋಗುವ ನೀರು ಶುದ್ಧವಾಗಿ ಫಿಲ್ಟರ್ ಮಾಡಿ ನೀರನ್ನು ಮೊಳಕಾಲ್ಮುರು ಪಟ್ಟಣಕ್ಕೆ ನೀರನ್ನು ಹರಿಸಬೇಕು ಎಂದು ಮಾನ್ಯ ಎನ್. ವೈ. ಗೋಪಾಲಕೃಷ್ಣ ಶಾಸಕರು ಖುದ್ದಾಗಿ ಜಲಾಶಯಕ್ಕೆ ಭೇಟ್ಟಿಕೊಟ್ಟು ಅಲ್ಲಿನ ಸಮಸ್ಯೆ ಬಗೆಹರಿಸಬೇಕೆಂದು ಅಧಿಕಾರಿಗಳಿಗೆ ತಿಲಿಸಿದರು. ಇದ್ದರೆ ಇರಬೇಕು ಇಂಥ ಶಾಸಕರು ಇರಬೇಕು.

ಬಡ ಜನಗಳ ಸಂಕಷ್ಟ ಮತ್ತು ಎಲ್ಲಾ ನಾಗರಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಇಲ್ಲಿನ ಹಿಂದೆ ಇರುವ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ ಹಿಂದೆ ಅಧಿಕಾರಿಗಳನ್ನು ಹೇಳೂರು ಇಲ್ಲ ಕೇಳೋರು ಇಲ್ಲ ಎಂಬ ಮೊಳಕಾಲ್ಮೂರು ತಾಲೂಕಿನಲ್ಲಿ ಪರಿಸ್ಥಿತಿ ಉದ್ಭವವಾಗಿತ್ತು ಆದರೆ ಈಗ ಮೊಳಕಾಲ್ಮೂರು ಕ್ಷೇತ್ರದ ಎನ್. ವೈ. ಗೋಪಾಲಕೃಷ್ಣ ಶಾಸಕರನ್ನು ಕ್ಷೇತ್ರದ ಮತದಾರರು ಇಂತಹ ಒಬ್ಬ ಪ್ರಾಮಾಣಿಕ ವ್ಯಕ್ತಿ ಶಾಸಕರನ್ನು ನಾವು ಗೆಲ್ಲಿಸಿಕೊಂಡರೆ ಬಡ ಜನಗಳ ಕಷ್ಟಗಳನ್ನು ಬಗೆಹರಿಸುತ್ತಾರೆ ಎಂದು ನಮ್ಮ ಹೃದಯಪೂರ್ವಕವಾಗಿ ಮನಸ್ಸಿಟ್ಟು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತಗಳನ್ನು ಹಾಕಿಸಿ ಗೆಲ್ಲಿಸಿಕೊಂಡಿದ್ದೇವೆ ಎಂದು ಮೊಳಕಾಲ್ಮುರು ತಾಲೂಕಿನ ಮತದಾರರು ಹೇಳುತ್ತಾರೆ ಇವರು ಅಭಿವೃದ್ಧಿಗಳು ಕೆಲಸಗಳನ್ನು ಹೇಳಿ ಮಾಡೋರಲ್ಲ ಕೆಲಸ ಮಾಡಿ ತೋರಿಸುವರು ಎಂದು ವರದಿಯಾಗಿದೆ. ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು