ಭಕ್ತಿ ಭಾವದಿಂದ ಬಸವೇಶ್ವರರ ಭಾವ ಚಿತ್ರವನ್ನು ಮೆರವಣಿಗೆ ಮೂಲಕ ಯಶಸ್ವಿಯಾಗಿ ಜಯಂತೋತ್ಸವ – ಕಾರ್ಯಕ್ರಮ ಜರಗಿತು.
ಕೆಂಚಮಲ್ಲನಹಳ್ಳಿ ಏ.20

ಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದಲ್ಲಿ ಭಕ್ತಿ ಭಾವದಿಂದ ಬಸವೇಶ್ವರರ ಭಾವ ಚಿತ್ರವನ್ನು ಮೆರವಣಿಗೆ ಕಾರ್ಯಕ್ರಮವನ್ನು ಗ್ರಾಮಸ್ಥರು ಸೋಮವಾರ ವಿಜೃಂಭಣೆಯಿಂದ ಜರುಗಿತು.
ಬಸವೇಶ್ವರರ ಭಾವಚಿತ್ರ, ಎತ್ತಿನಗಾಡಿಗೆ ಹೂಮಾಲೆಗಳು, ಧ್ವಜಗಳು ಹಾಗೂ ಬಣ್ಣ ಬಣ್ಣದ ಅಲಂಕಾರಗಳಿಂದ ಸಿಂಗಾರಿಸಲಾಗಿತ್ತು.
ಗ್ರಾಮಸ್ಥರು ಸೇರಿಕೊಂಡು ಪೂಜೆ ಸಲ್ಲಿಸಿ, ಭಕ್ತಿ ಭಾವದಿಂದ ಜಯಘೋಷಗಳನ್ನು ಕೂಗಿ ಮೆರವಣಿಗೆಯನ್ನು ಆರಂಭಿಸಿದರು.
ಮೆರವಣಿಗೆಯಲ್ಲಿ ಗ್ರಾಮದ ಯುವಕರು, ಹಿರಿಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಗ್ರಾಮದಲ್ಲಿ ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆ ಯಾಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ವೇಳೆ ತಮ್ಮನ ಗೌಡ್ರು, ಪ್ರಸನ್ನಸ್ವಾಮಿ, ಕೆಜಿ ನಿಂಗಪ್ಪ, ಕರೇ ಗೌಡ್ರು, ಸತೀಶ್,ಹೆಚ್ ಎನ್ ಬಸವರಾಜ್, ಕೆಇಬಿ ಗುತ್ತಿಗೆದಾರ ಎಂಜಿ ಬಸನಗೌಡ, ಕೊಟ್ರೇಶ್,ಶರಣಪ್ಪ, ಗ್ರಾಮದ ಅನೇಕ ಮುಖಂಡರು, ಯುವಕರು ಹಾಗೂ ಭಕ್ತರು ಉಪಸ್ಥಿತರಿದ್ದರು. ಗ್ರಾಮಸ್ಥರು ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ
