ಪಿ.ಎಸ್ ಸಜ್ಜನ ಕಾಲೇಜಿನ ಎನ್.ಎಸ್.ಎಸ್ ಶಿಬಿರದಲ್ಲಿ – ಆರೋಗ್ಯ ತಪಾಸಣೆ ಬಗ್ಗೆ ಜಾಗೃತಿ ಮೂಡಿಸಿದರು.
ಬಿಲ್ ಕೆರೂರು ಏ.21

ಶಿಬಿರಾರ್ಥಿಗಳು ಸ್ವಯಂ ಶಿಸ್ತು ರೂಢಿಸಿ ಕೊಂಡು ಆರೋಗ್ಯಯುತ ಜೀವನ ನಡೆಸಬೇಕು ಎಂದು ನಿಡಗುಂದಿಯ ಎಮ್.ವಿ ನಾಗಠಾಣ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯ ಶಿವನಗೌಡ ಬಿರಾದಾರ ಹೇಳಿದರು.
ಬೇವೂರಿನ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾ ವಿದ್ಯಾಲಯದ ವತಿಯಿಂದ ಏಳು ದಿನಗಳ ವರೆಗೆ ಹಮ್ಮಿಕೊಂಡ ಎನ್.ಎಸ್.ಎಸ್ ಶಿಬಿರದ ನಾಲ್ಕನೇ ದಿನದ ವಿಶೇಷ ಉಪನ್ಯಾಸ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಆತ್ಮ ಹತ್ಯೆ ತಡೆ ಗಟ್ಟಲು ಅನುಸರಿಸ ಬೇಕಾದ ಜಾಗೃತಿ ಕ್ರಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಶಿಬಿರದ ವತಿಯಿಂದ ಹಮ್ಮಿಕೊಂಡ ಆಯುಷ್ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ಕಾರ್ಯಕ್ರಮ ಕುರಿತು ಮಾತಾನಾಡಿದ ವೈದ್ಯೆ ಸುರೇಖಾ ಚೂರಿ ಆಯುಷ್ ಆರೋಗ್ಯದ ತಪಾಸಣೆಯ ಸಾಫಲ್ಯತೆಯನ್ನು ಪಡೆದು ಕೊಂಡ ಜನತೆ ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ. ಇಂದಿನ ಯುವ ಸಮೂದಾಯ ಆರೋಗ್ಯದ ಬಗ್ಗೆ ಅಧಿಕ ಕಾಳಜಿ ವಹಿಸ ಬೇಕು ಎಂದು ಅವರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಬಿಲ್ ಕೆರೂರಿನ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ಕಟಗೇರಿ ಎನ್.ಎಸ್.ಎಸ್ ಚಟುವಟಿಕೆಗಳು ಗ್ರಾಮದ ಉದ್ದಾರಕ್ಕೆ ಪೂರಕ ಎನಿಸಿವೆ. ಪರಿಸರ ಪ್ರಜ್ಞೆ, ವೈಚಾರಿಕ ಪ್ರಜ್ಞೆಯನ್ನು ಶಿಬಿರದ ವಿದ್ಯಾರ್ಥಿಗಳು ರೂಢಿಸಿ ಕೊಳ್ಳಬೇಕೆಂದು ಅವರು ಹೇಳಿದರು. ಗ್ಯಾನಮ್ಮ ಪೂಜಾರಿ, ಜೀವಿತಾ ಸಂಗಡಿಗರು ಪ್ರಾರ್ಥಿಸಿದರು.
ಗ್ಯಾನಮ್ಮ ಪೂಜಾರಿ ಅತಿಥಿ ಪರಿಚಯ ನಡೆಸಿ ಕೊಟ್ಟರು. ಉಪನ್ಯಾಸಕ ಡಾ, ಸಂಗಮೇಶ ಹಂಚಿನಾಳ ಸ್ವಾಗತಿಸಿದರು. ವಿದ್ಯಾರ್ಥಿನಿ ಅಶ್ವಿನಿ ಮಾದರ ನಿರೂಪಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಜಿ. ಎಸ್ ಗೌಡರ ವಂದಿಸಿದರು. ವೈದ್ಯರಾದ ಡಾ, ಎಸ್.ಪಿ ನಿಡಗುಂದಿ, ಡಾ, ಷಣ್ಮುಖಪ್ಪ ಕಾಪ್ಸೆ, ಡಾ, ಶಗುಪಾಬೇಗಂ ಅತ್ತಾರ, ಸಿಬ್ಬಂದಿಗಳಾದ ಸಿದ್ದಲಿಂಗ ಗೌಡರ, ರವಿ ಓಗಿ ಉಪಸ್ಥಿತರಿದ್ದರು.
ಪಿ.ಎಸ್ ಸಜ್ಜನ ಕಾಲೇಜಿನ ಪ್ರಾಚಾರ್ಯರಾದ ಡಾ, ಜಗದೀಶ ಗು. ಭೈರಮಟ್ಟಿ, ಹಿರಿಯ ಉಪನ್ಯಾಸಕರಾದ ಎಸ್. ಎಸ್. ಆದಾಪೂರ, ಉಪನ್ಯಾಸಕರಾದ ಡಿ. ವಾಯ್. ಬುಡ್ಡಿಯವರ, ಡಾ, ಎ.ಎಮ್ ಗೊರಚಿಕ್ಕನವರ ಉಪಸ್ಥಿತರಿದ್ದರು.
ಬಿಲ್ ಕೆರೂರು ಗ್ರಾಮದ 200 ಕ್ಕೂ ಅಧಿಕ ಜನತೆ ಸೇರಿದಂತೆ ಶಿಬಿರಾರ್ಥಿಗಳು ಆಯುಷ್ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಸಮಾರಂಭದಲ್ಲಿ ಚಿಕಿತ್ಸೆ ಪಡೆದು ಕೊಂಡರು. ಶಿಬಿರಾರ್ಥಿಗಳು ಮನೆ ಮನೆಗೆ ತೆರಳಿ ಔಷಧಿ ಉಪಚಾರದ ಬಗ್ಗೆ ಜಾಗೃತಿ ಮೂಡಿಸಿದರು.
