ವಾರದ ಸಂತೆ, ಜಾಗದಲ್ಲಿ ಮೂಲಭೂತ ಸೌಕರ್ಯಗಳಿಗೆ – ಒತ್ತಾಯಿಸಿದ ಕರವೇ ಅಧ್ಯಕ್ಷ ಹಾಲೇಶ.

ಕೂಡ್ಲಿಗಿ ಏ.20

ಪಟ್ಟಣದ ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಪ್ರಸ್ತುತ ವಾರದ ತರಕಾರಿ ಸಂತೆ, ಮತ್ತು ದನದ ಸಂತೆ ನಡೆಯುತ್ತಿದ್ದು. ಜಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ, ಹರಾಜು ಮಾಡಲು ಮುಂದಾಗಿರುವ ಪಟ್ಟಣ ಪಂಚಾಯ್ತಿ ಮುಖ್ಯಧಿಕಾರಿಗೆ ಗುರುವಾರ ಕರವೇ ತಾ. ಘಟಕ ಅಧ್ಯಕ್ಷ ಹಾಲೇಶ ಕಾಟೇರ ಮನವಿ ಸಲ್ಲಿಸಿದರು.

ಮನವಿ ಪತ್ರದಲ್ಲಿ ತಿಳಿಸಿರುವಂತೆ, ಸಂತೆ ಮೈದಾನದಲ್ಲಿ ತರಕಾರಿ ಮಾರಾಟಗಾರರಿಗೆ ಕನಿಷ್ಟ ನೆಲಹಾಸು ಬಂಡೆಗಳು ಇಲ್ಲ, ಈ ಬಿಸಿಲಿನ ಹೊಡೆತಕ್ಕೆ ದಾಹವಾದರೆ, ಶುದ್ಧ ಕುಡಿಯುವ ನೀರು ಇಲ್ಲ, ಶೌಚಾಲಯಗಳು ಇಲ್ಲ, ಖರೀದಿ ಮಾಡುವ ಗ್ರಾಹಕರಿಗೂ ಸಮತಟ್ಟಾದ ನೆಲವಿಲ್ಲದೆ, ಇದ್ದುದ್ದರಲ್ಲಿ ಒದ್ದಾಡುತ್ತಾ ವಾರಕ್ಕೆ ಬೇಕಾದ ತರಕಾರಿಗಳನ್ನು ಖರೀದಿಸುವುದು ನಡೆದಿದೆ.

ಕನಿಷ್ಟ ಮೂಲ ಸೌಕರ್ಯ, ಸೌಲಭ್ಯಗಳನ್ನು ನೀಡದೆ ಪ್ರತಿ ವರ್ಷವೂ ಸಂತೆ ಹರಾಜು ಪ್ರಕ್ರಿಯೇ ನಡೆಸಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ಮಳೆ ಬಂದರೆ ಸಂತೆ ಮೈದಾನ ಕೆಸರು ಗದ್ದೆ ಯಂತಾಗುತ್ತದೆ. ಇಲ್ಲಿ ದನದ ಸಂತೆಯೂ ನಡೆಯುವುದರಿಂದ, ಸ್ವಚ್ಛತೆಯೆಂಬದು ಕನಸಿನ ಮಾತಾಗಿದೆ.

ಆದ್ದರಿಂದ ಮೊದಲು ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಂತರ ಹರಾಜು ಪ್ರಕ್ರಿಯೇ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಬೇಕಾ ಬಿಟ್ಟಿಯಾಗಿ ಜಕಾತಿದಾರರೂ ಅವರಿಗೆ ಇಚ್ಚೆ ಬಂದ ಹಾಗೇ ರೈತರಿಂದ, ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡುತ್ತಾರೆ. ಈ ಹಣದಿಂದ ಸಂತೆ ಮೈದಾನವನ್ನು ಅಭಿವೃದ್ಧಿ ಪಡಿಸುವುದು ಬಿಟ್ಟು ಜನರ ತೆರೆಗೆ ಹಣ ದುರುಪಯೋಗ ಆಗುತ್ತಿದೆ.

ಆದ್ದರಿಂದ ತಾವುಗಳು ಈಗಲಾದರೂ ಎಚ್ಚೆತ್ತು ಕೊಂಡು, ಈ ಜಾಗದಲ್ಲಿ ಒಂದು ಸುಸಜ್ಜಿತವಾದ ಕಟ್ಟಡ, ಶೌಚಾಲಯ, ನೀರಿನ ವ್ಯವಸ್ತೆ, ಉತ್ತಮವಾದ ವಾತವರಣ ನಿರ್ಮಾಣ ಮಾಡುವಂತೆ ವಿನಂತಿಸಿದ್ದಾರೆ. ಜಕಾತಿಗೆ ತೆರೆಗೆ ವಸೂಲಿ ಮಾಡುವ ನಾಮ ಫಲಕವನ್ನು ಅಳವಡಿಸಿ ಈ ಕೆಲಸ ಕಾರ್ಯಗಳು ಆದ ನಂತರ ವಾರದ ಸಂತೆ ಹರಾಜು ಮಾಡಬೇಕೆಂದು ಮನವಿ ಪತ್ರದಲ್ಲಿ ಕೋರಿದ್ದಾರೆ. ಕರವೇ ತಾ. ಘ ಅಧ್ಯಕ್ಷ ಹಾಲೇಶ ಕಾಟೇರ, ಕರಿಯಪ್ಪ ಸೇರಿದಂತೆ ಇತರರಿದ್ದರು ಎಂದು ವರದಿಯಾಗಿದೆ.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button