ಆರ್.ಟಿ.ಪಿ.ಎಸ್ ಆಡಳಿತ ಕಚೇರಿ ಆವರಣದಲ್ಲಿ ವಿಶ್ವ ಗುರು ಜಗಜ್ಯೋತಿ ಬಸವ ಜಯಂತೋತ್ಸವ – ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ರಾಯಚೂರು ಏ.21

ನಿನ್ನೆ ನಿಗಮದ RTPS ನ ಆಡಳಿತ ಕಚೇರಿ ಅವರಣದಲ್ಲಿ ವಿಶ್ವ ಗುರು ಜಗಜ್ಯೋತಿ ಬಸವ ಜಯಂತೋತ್ಸವದ ಸಾಂಕೇತಿಕ ಪೂಜಾ ಕಾರ್ಯಕ್ರಮ ವಿಜೃಂಭಣೆ ಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್.ಟಿ.ಪಿ.ಎಸ್ ನ ಮುಖ್ಯಸ್ಥರಾದ ಶ್ರೀ ರಮೇಶ ಹೆಚ್ ಆರ್, ಕಾರ್ಯನಿರ್ವಾಹಕ ನಿರ್ದೇಶಕರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ನಿಗಮದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ CISF ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.

