ಸರ್ಕಾರಿ ಸೌಲಭ್ಯ ಪಡೆದು ಕೊಂಡು ಸ್ವಾವಲಂಬಿಗಳಾಗಿ – ಸಿ.ಸಿ ಪಾಟೀಲ.

ಗದಗ ಏ.21

ದಲಿತ ಸಮುದಾಯದ ಯುವ ಯುವ ಜನತೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿ ಕೊಂಡು ಸ್ವಾವಲಂಭಿಗಳಾಗಿ ಬದುಕನ್ನ ಕಟ್ಟಿ ಕೊಳ್ಳಬೇಕೆಂದು ನರಗುಂದ ಮತಕ್ಷೇತ್ರದ ಶಾಸಕ ಸಿ.ಸಿ ಪಾಟೀಲ ಹೇಳಿದರು.

ಗದಗ ನಗರದ ಶಾಸಕರ ಜನ ಸಂಪರ್ಕ ಕಾರ್ಯಾಲಯದ ಆವರಣದಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ನರಗುಂದ ಮತ ಕ್ಷೇತ್ರದ ಬಳಗಾನೂರ ಗ್ರಾಮದ ಸುಭಾಸ ಬಣಕಾರ ಅವರಿಗೆ ಮಂಜೂರಾದ ಟಾಟಾ ಮ್ಯಾಜಿಕ್ ಹಾಗೂ ಕದಡಿ ಗ್ರಾಮದ ಜುನಾಥ ಪೂಜಾರ ಅವರಿಗೆ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ ಅಡಿಯಲ್ಲಿ ಮಂಜೂರಾದ ಸ್ವಿಫ್ಟ್ ಡಿಸೈಯರ್ ವಾಹನಗಳನ್ನು ಡಾ, ಬಿ.ಆರ್ ಅಂಬೇಡ್ಕರ್ ಅವರ ಭಾವಚಿ ತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವದರ ಮೂಲಕ ವಿತರಿಸಿ ಮಾತನಾಡಿದ ಅವರು ಎಸ್‌ಸಿ/ಎಸ್‌ಟಿ ಸಮುದಾಯದ ಬಡವರು ವಿವಿಧ ರೀತಿಯ ಸರ್ಕಾರಿ ಯೋಜನೆಗಳನ್ನ ಪಡೆದು ಕೊಂಡು ಆರ್ಥಿಕವಾಗಿ ಸಬಲೀಕರಣ ಹೊಂದುವದರ ಜೊತೆಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಅಂದಾಗ ಮಾತ್ರ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸ್ಸು ನನಸು ಮಾಡಿದಂತಾಗುತ್ತದೆ ಎಂದು ಹೇಳಿದರು.

ದಲಿತರ ಶ್ರೇಯೋಭಿವ್ರದ್ದಿಗಾಗಿ ನಾನು ನಿರಂತರವಾಗಿ ಶ್ರಮಿಸುತ್ತೇನೆ. ನಮ್ಮ ಸರ್ಕಾರ ಆಢಳಿತದಲ್ಲಿದ್ದಾಗ ಬಡವರ ದೀನ ದಲಿತರ ಪರ ಸಾಕಷ್ಟು ಯೋಜನೆಗಳನ್ನ ಕ್ಷೇತ್ರದ ಜನತೆಗೆ ಒದಗಿಸಿದ್ದೇನೆ. ಮುಂದೆಯೂ ಬಡವರ ಪರ ಕೆಲಸ ಮಾಡಲು ನಾನು ಕಂಕಣ ಬದ್ದನಾಗಿದ್ದೇನೆ ಎಂದು ಹೇಳಿದರು.

ಈ ಸಂದರ್ಭಲ್ಲಿ ರಾಜ್ಯ ದಲಿತ ಮುಖಂಡರಾದ ಮೋಹನ್ ಎಸ್ ಅಲ್ಮೇಲ್ಕರ್ ಅವರು ಮಾತನಾಡಿ ಎಸ್‌.ಸಿ/ಎಸ್.ಟಿ ಸಮುದಾಯ ಸರ್ಕಾರದ ಇಂತಹ ಸೌಲಭ್ಯಗಳನ್ನ ಪಡೆದು ಕೊಂಡು ಬಡತನ ಹೋಗಲಾಡಿಸುವಲ್ಲಿ ಶ್ರಮ ವಹಿಸಿ ಉತ್ತಮವಾದ ಜೀವನವನ್ನು ಕಲ್ಪಿಸಿ ಕೊಳ್ಳಬೇಕೆಂದು ಹೇಳಿದರು.

ಜಿಲ್ಲಾ ದಲಿತ ಮುಖಂಡರಾದ ಪ್ರೊ, ಸತೀಶ ಪಾಸಿ ಮಾತನಾಡಿ ನಿರುದ್ಯೋಗಿ ಯುವಕರು ಸ್ವಯಂ ಉದ್ಯೋಗ ಕೈಗೊಂಡು ಜೀವನ ಶೈಲಿಯನ್ನು ಬದಲಾಯಿಸಿ ಕೊಳ್ಳ ಬೇಕು. ದೊಡ್ಡ ದೊಡ್ಡ ವಿಚಾರ ಧಾರೆಯೊಂದಿಗೆ ಬದುಕು ರೂಪಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್‌.ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ವಾಯ್.ಚಲವಾದಿ ಅವರು ಮಾತನಾಡಿ ದಲಿತ ಸಮುದಾಯದ ಬಡ ಜನತೆಗೆ ಸರ್ಕಾರಿ ಯೋಜನೆಗಳೇ ಆಸರೆ. ಸರ್ಕಾರಿ ಯೋಜನೆಯ ಲಾಭವನ್ನು ಪಡೆದು ಕೊಂಡು ದಲಿತ ಸಮುದಾಯದ ಯುವಕರು ಆರ್ಥಿಕವಾಗಿ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಪ್ರಗತಿಯತ್ತ ಸಾಗಿದಾಗ ಮಾತ್ರ ಡಾ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.

ಸನ್ಮಾನ್ಯ ಸಿ.ಸಿ ಪಾಟೀಲ ಸಾಹೇಬರು ನರಗುಂದ ಮತ ಕ್ಷೇತ್ರದ ಸಾಕಷ್ಟು ನಿರುದ್ಯೋಗಿ ಯುವ ಸಮುದಾಯಕ್ಕೆ ವಿವಿಧ ಇಲಾಖೆಯ ಸಹಾಯ ಧನದೊಂದಿಗೆ ಸ್ವಯಂ ಉದ್ಯೋಗ ಮಾಡಿ ಸ್ವಾಭಿಮಾನದ ಬದುಕನ್ನು ಕಟ್ಟಿ ಕೊಳ್ಳಲು ಸಾಕಷ್ಟು ಯೋಜನೆಗಳ ಲಾಭವನ್ನ ಸಮುದಾಯದ ಜನರಿಗೆ ತಲುಪಿಸಿದ್ದಾರೆ. ಅಷ್ಟೇ ಅಲ್ಲದೇ ದಲಿತ ಸಮುದಾಯಕ್ಕೆ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸುವದರ ಜೊತೆಗೆ ದಲಿತ ಸಮುದಾಯವನ್ನ ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಿದ್ದಾರೆ. ಆದಕಾರಣ ಕ್ಷೇತ್ರದಾದ್ಯಂತ ದಲಿತ ಸಮುದಾಯ ಸದಾವಕಾಲ ಸನ್ಮಾನ್ಯ ಸಿ.ಸಿ ಪಾಟೀಲ ಸಾಹೇಬರ ಪರವಾಗಿ ನಿಲ್ಲುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ. ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಜು ಕುರುಡಗಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ. ಬಿಜೆಪಿ ಜಿಲ್ಲಾ ಮುಖಂಡರಾದ ವಸಂತ ಮೇಟಿ. ಪ್ರದೀಪ ನವಲಗುಂದ. ಜಿಲ್ಲಾ ವಾಲ್ಮೀಕಿ ಸಮುದಾಯದ ಯುವ ಮುಖಂಡ ಪ್ರಶಾಂತ ನಾಯ್ಕರ. ಜಿಲ್ಲಾ ದಲಿತ ಮುಖಂಡ ಉಡಚಪ್ಪ ಹಳ್ಳಿಕೇರಿ ಬಿಜೆಪಿ ಯುವ ಮುಖಂಡ ಶಿವು ಹಿರೇಮನಿ ಪಾಟೀಲ. ಬಿಜೆಪಿ ಲಕ್ಕುಂಡಿ ಮಂಡಲ ಎಸ್‌.ಸಿ ಮೋರ್ಚಾದ ಮಾಜಿ ಅಧ್ಯಕ್ಷ ಬಸವರಾಜ ಮುಳ್ಳಾಳ. ಬಿಜೆಪಿ ಲಕ್ಕುಂಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಬಸವರಾಜ ಚಲವಾದಿ. ಡಾ, ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧಿಕಾರಿಗಳಾದ ವೆಂಕಟೇಶ ದ್ವಾಸಲಕೇರಿ. ದಲಿತ ಯುವ ಮುಖಂಡ ಮಂಜುನಾಥ ದೊಡ್ಡಮನಿ. ಹನಮಂತ ಚಲವಾದಿ. ನಾಗಪ್ಪ ಕನ್ನಾರಿ ಮುಂತಾದವರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button