ಕಂದಗಲ್ಲ ಸುತ್ತ ಮುತ್ತ ಸಂಭ್ರಮದ ನಾಗರ ಪಂಚಮಿ ಹಬ್ಬ.
ಕಂದಗಲ್ಲ ಆ.09

ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ನಿಮಿತ್ಯ ಕಂದಗಲ್ ಸೇರಿದಂತೆ ಸುತ್ತಲಿನ ಗ್ರಾಮದ ಮಹಿಳೆಯರು ನಾಗದೇವರ ಮೂರ್ತಿಗೆ ಪೂಜೆ ಸಲ್ಲಿಸಿ ಹಾಲೆರೆದು ಸಂಭ್ರಮಿಸಿದರು ಹೊಸ ವಸ್ತ್ರಗಳನ್ನು ಧರಿಸಿ ಕೊಂಡು ಶೃಂಗಾರ ಗೊಂಡು ಮಹಿಳೆಯರು ಮಕ್ಕಳು ಕುಟುಂಬ ಸದಸ್ಯರು ಜೊತೆ ಗೂಡಿ ನಾಗರ ಕಟ್ಟೆಗಳು ಇರುವ ಜಾಗಗಳಿಗೆ ಹೋಗಿ ಅಲ್ಲಿ ಹಾಲೆರೆಯುವ ಕಾಯಕದಲ್ಲಿ ನಿರತರಾಗಿದ್ದರು ಬೆಳಗಿನಿಂದಲೇ ಮನೆ ಅಂಗಳ ಮತ್ತು ನಾಗರ ಕಟ್ಟೆಗಳನ್ನು ಸುಚಿಗೊಳಿಸಿ ರಂಗೋಲಿ ಹಾಕಿ ತಳಿರು ತೋರಣಗಳಿಂದ ಶೃಂಗರಿಸಿದ್ದರು. ಮಹಿಳೆಯರು ಮತ್ತು ಮಕ್ಕಳ ಭಕ್ತಿ ಭಾವದೊಂದಿಗೆ ನಾಗಪ್ಪನ ಪೂಜೆ ನೆರವೇರಿಸಿದರು ನಾಗ ದೇವರ ಮೂರ್ತಿಗೆ ವಿವಿಧ ರೀತಿಯ ಸಿಹಿ ತಿನಿಸುಗಳಾದ ಉಂಡೆ ಅರಳು ತಂಬಿಟ್ಟು ಹಾಲು ಕೊಬ್ರೆ ಬೆಲ್ಲ ಎರೆದು ಪೂಜೆ ಸಲ್ಲಿಸಿ ತಮ್ಮ ಇಷ್ಟರ್ಥಗಳನ್ನು ಈಡೆರಿಸುವಂತೆ ಬೇಡಿ ಕೊಂಡರು. ನಾಗ ಪಂಚಮಿ ಹಬ್ಬದ ವಿಶೇಷ ಜೊಕಾಲಿಯನ್ನು ಮಹಿಳೆಯರು ಮಕ್ಕಳು ಜೀಕಿ ಹಬ್ಬದ ಸಂತೊಷ ಹಂಚಿ ಕೊಂಡರು ಯುವಕರ ಗುಂಪುಗಳು ಸ್ಪರ್ಧೆಯ ಮಾದರಿಯ ಆಟಗಳನ್ನು ಆಡಿ ಗೆಲುವಿನ ಸಂಭ್ರಮ ಹಂಚಿ ಕೊಳ್ಳುತ್ತಿರುವುದು ಕಂಡು ಬಂತುಹಬ್ಬ ಎರಡು ದಿನಗಳಾದ್ದರಿಂದ ಮೊದಲ ದಿನ ಮಹಿಳೆಯರು ನಾಗರ ಮೂರ್ತಿಗೆ ಹಾಲೆರೆದರು ಎರಡನೆ ದಿನ ಪುರುಷರು ಮನೆಯಲ್ಲಿ ಮಣ್ಣಿನ ನಾಗರ ಮೂರ್ತಿಗಳಿಗೆ ಹಾಲೆರೆದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.