“ಒಲವ ಯಾನ”…..

ಸೂರ್ಯ ಚಂದ್ರರ ಹಗಲು ಇರುಳ ನಿತ್ಯ
ನಿರಂತರ ಭೂಮಿ ಚಲನವಲನ
ಮಾನವ ಜೀವನ ಸುಂದರ ಯಾನ
ಬಾಳ ಬಂಡಿಯ ಸಾಗುವ ಪ್ರಯಾಣ
ಕ್ಷಣ ಕ್ಷಣವು ತಿರುವ ಪಡೆವ ನಡೆ
ಜಗದ ಜನರ ಚಂದನ ವನದ ಚೆಲನೆ
ಯುವಕ ಯವತಿಯರ ಹರೆಯದ
ಮರೆಯದ ಕ್ಷಣಗಳ ನೆನಪುಗಳ ನಡಗೆ
ಬಡವ ಬಲ್ಲಿದವರ ಸಮಾನ ಪ್ರವಾಸ
ಜಗದಿ ಜರಗುವ ಘಟನೆ ನಿತ್ಯ ನಿರಂತರ
ಬೇಧ ಅರಿಯದ ವೇಳೆಯ ಪ್ರಯಾಣ
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟ