ಹೆಚ್.ಕೆ ಕುಂಟೆ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ – ಅವಿರೋಧ ಆಯ್ಕೆ.

ಗಡಿ ಗ್ರಾಮ ಹಿರೇ ಕುಂಬಳಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಟಿ ಗುದ್ದಿ ಗೊಲ್ಲರಟ್ಟಿ ಗ್ರಾಮದ ಬಾಲಮ್ಮ ಹಾಗೂ ಉಪಾಧ್ಯಕ್ಷರಾಗಿ ಹುಲಿಕೆರೆ ಗ್ರಾಮದ ಎಚ್ ದುರುಗೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಚ್.ಪಿ ಗಂಗಮ್ಮ ಹಾಗೂ ಉಪಾಧ್ಯಕ್ಷರಾದ ಬಸವರಾಜಪ್ಪ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಕೂಡ್ಲಿಗಿ ತಹಶೀಲ್ದಾರ್ ರೇಣುಕಾ ಅವರು ಚುನಾವಣಾ ಪ್ರಕ್ರಿಯೆ ಪೂರ್ಣ ಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಬಾಲಮ್ಮ ನೂತನ ಅಧ್ಯಕ್ಷರಾಗಿ, ಹಾಗೂ ಎಚ್.ದುರುಗೇಶ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಒಟ್ಟು 23 ಸದಸ್ಯರಲ್ಲಿ 19 ಜನ ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ ಪಿಡಿಓ ನಿಂಗಪ್ಪ, ಸಿಬ್ಬಂದಿ ಕೊಟ್ರೇಶ್ ಶಿವಕುಮಾರ್, ತುಂಬರಗುದ್ದಿ ದುರುಗೇಶ, ಟಿ ಗಂಗಾಧರ, ಬಾಲಪ್ಪ, ಮರಳು ಸಿದ್ದಪ್ಪ ಮನೋಜ್ ಕುಮಾರ್, ಸಕಲಪುರ ಹಟ್ಟಿ ಹ ರೇಶ್, ಮರಳು ಸಿದ್ದಪ್ಪ, ದಂಡಪ್ಪ. ಗ್ರಾ.ಪಂ ಸದಸ್ಯರು, ಮುಖಂಡರು, ಸಿಬ್ಬಂದಿಗಳು ಇದ್ದರು ಹಾಗೂ ಖಾನಾ ಹೊಸಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ಜಿಲಾನ್ ಬಾಷಾ. ಪಿ.ಸಿ ರವಿ ಗೌಡ ಸಿಬ್ಬಂದಿ ಬಿಗಿ ಬಂದೋಬಸ್ತ್ ನೀಡಿದ್ದರು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಕೆ.ಎಸ್.ವೀರೇಶ್.ಕೆ. ಹೊಸಹಳ್ಳಿ