🚨ಬ್ರೇಕಿಂಗ್ ನ್ಯೂಸ್🚨ಕ್ರೆಡಿಟ್ ಸೊಹಾರ್ಡ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ರವಿನಾಥ್ ಬಿ. ಅವರಿಗೆ – ‘ವಿಶೇಷ ಗೌರವ ಪುರಸ್ಕಾರ’..!
ಬ್ರಹ್ಮಾವರ ಸೆ.16

ಸನ್ಮಾನಿತರ ವಿವರ:-
ಕ್ರೆಡಿಟ್ ಸೊಹಾರ್ಡ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ ಶ್ರೀ ರವಿನಾಥ್ ಬಿ. ಅವರಿಗೆ ಈ ಗೌರವ ಸಂದಿದೆ.
ಕಾರ್ಯಕ್ರಮದ ಸ್ಥಳ:-
ಶೇಷಗೋಪೀ ಪ್ಯಾರಡೈಸ್, ವಾರಂಬಳ್ಳಿ, ಬ್ರಹ್ಮಾವರ.
ಗೌರವಕ್ಕೆ ಕಾರಣ:-
ಉಡುಪಿ ಜಿಲ್ಲಾ ಸೊಹಾರ್ಡ ಸಹಕಾರಿ ಕ್ಷೇತ್ರದ ಪ್ರಗತಿಗೆ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅವರು ಸಲ್ಲಿಸಿದ ಅವಿರತ ಸೇವೆ, ಅಪಾರ ಕೊಡುಗೆ ಹಾಗೂ ಅನನ್ಯ ಸಾಧನೆಯನ್ನು ಗುರುತಿಸಿ ಈ ಪುರಸ್ಕಾರ ನೀಡಿಮಾನಪೂರ್ವಕವಾಗಿ ಸನ್ಮಾನಿಸಲಾಗಿದೆ.
ಶ್ಲಾಘನೆ:-
“ಸೇವೆ… ಸಾಧನೆ… ಸಮರ್ಪಣೆ… ಇವುಗಳ ಸಾರ್ಥಕ ಸಂಗಮಕ್ಕೆ ಸಂದ ಗೌರವದ ಮಹಾ ಮನ್ನಣೆ!” ಎಂದು ಗಣ್ಯರು ಹಾಗೂ ಹಿತೈಷಿಗಳು ಪ್ರಶಂಸಿಸಿದ್ದಾರೆ.
ಶುಭ ಕೋರಿದವರು:-
ಸಂಘದ ಆಡಳಿತ ನಿರ್ದೇಶಕರು ಹಾಗೂ ಸಿಬ್ಬಂದಿವರ್ಗದವರು, ಉಪಾಧ್ಯಕ್ಷರಾದ ಶ್ರೀ ಶಿವಾನಂದ ಕಾಮತ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಶ್ರೀಧರ ಪೂಜಾರಿ ಶುಭ ಹಾರೈಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

