ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಾತಿನಿಧ್ಯ ನೀಡಲಾಗಿದೆ ; ಶಾಸಕರು ಡಿ.ಎಸ್ ಸುರೇಶ್ …..
ತರೀಕೆರೆ ( ಮಾರ್ಚ್ 8 ) :
ಪ್ರತಿಯೊಬ್ಬ ಯಶಸ್ವಿ ಮಹಿಳೆ ಹಿಂದೆ ಒಬ್ಬ ಪುರುಷ ಇರುತ್ತಾನೆ. ಹೆಣ್ಣು ಸ್ವತಂತ್ರವಾಗಿ ಕಾರ್ಯ ಸಾಧನೆ ಮಾಡಲು ಪುರುಷನ ಪ್ರೋತ್ಸಾಹ , ಕಾಲಾವಕಾಶವೇ ಕಾರಣ ಎಂದು ಶಾಸಕ ಡಿ.ಎಸ್ ಸುರೇಶ್ ಅವರು ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು, ತಾಲೂಕು ಪಂಚಾಯಿತಿ ತರೀಕೆರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಪುರಸಭೆ ತರೀಕೆರೆ, ಮತ್ತು ವಿವಿಧ ಸರ್ಕಾರಿ ಇಲಾಖೆಗಳು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತರೀಕೆರೆ ಘಟಕ, ತಾಲೂಕು ಶ್ರೀ ಶಕ್ತಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಬೆಲೆನಳ್ಳಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸರ್ಕಾರದ ಎಲ್ಲಾ ಇಲಾಖೆಗಳಲ್ಲಿಯೂ ಶೇಕಡ 50ರಷ್ಟು ಮೀಸಲಾತಿಯನ್ನು ನೀಡಿದೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಚ್ಚು ಪ್ರಾತಿನಿಧ್ಯ ನೀಡಲಾಗಿದೆ ಎಂದು ಹೇಳಿದರು. ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ,ತಾಲೂಕು ಪಂಚಾಯಿತಿ,ಪುರಸಭೆ,ನಗರಸಭೆ, ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ರಾಜಕೀಯ ಸ್ಥಾನಮಾನ ಮಹಿಳೆಯರು ಪಡೆದಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಆರು ಜನ ಮಹಿಳೆಯರು ಸಚಿವ ಸ್ಥಾನ ಹೊಂದಿರುತ್ತಾರೆ ಕರ್ನಾಟಕದ ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ ಅವರು ಸಚಿವರಾಗಿದ್ದಾರೆ. ತರೀಕೆರೆ ಮತ್ತು ಅಜ್ಜಂಪುರದ ಎರಡು ತಾಲೂಕಿನಲ್ಲಿಯೂ ಸರಿ ಸುಮಾರು 900 ಮಹಿಳಾ ಶ್ರೀ ಶಕ್ತಿ ಸಂಘಗಳಿಗೆ 9 ಕೋಟಿ ರೂಗಳನ್ನು ಬಡ್ಡಿ ರಹಿತ ಸಾಲವನ್ನು ನೀಡಲಾಗಿದೆ. ಹಾಗೆಯೇ ಸರ್ಕಾರ ಮನೆ ನಿರ್ಮಾಣ ಮಾಡಲು ಹಕ್ಕುಪತ್ರಗಳನ್ನು ಮಹಿಳೆಯರ ಹೆಸರಿನಲ್ಲಿ ಕೊಡುತ್ತಿದ್ದು ಸರಕಾರದ ವತಿಯಿಂದ ಸಾಲ ಸೌಲಭ್ಯಗಳನ್ನು ಮಹಿಳೆಯರ ಹೆಸರಿನಲ್ಲಿಯೇ ನೀಡಲಾಗುತ್ತಿದೆ. ಕಾರ್ಖಾನೆಗಳು, ಗಾರ್ಮೆಂಟ್ ಗಳು ಮತ್ತು ಬೇರೆ ಬೇರೆ ಖಾಸಗಿ ಸಂಸ್ಥೆಗಳು ಇದರೊಂದಿಗೆ ಸರ್ಕಾರದ ವಿವಿಧ ಇಲಾಖೆಗಳು ಸಹ ಹೆಚ್ಚು ಹೆಚ್ಚು ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಲಾಗುತ್ತಿದೆ ಎಂದು ಹೇಳಿದರು.
ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳೆನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಿವ್ಯ ಮಲ್ಲೇಶ್ ರವರು ವಹಿಸಿದ್ದರು ಅವರು ಮಾತನಾಡುತ್ತಾ ತೊಟ್ಟಿಲು ತೂಗುವ ಕೈ ಇಡೀ ದೇಶವನ್ನು ಆಳುತ್ತಿದೆ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರೇ ಮುಂದೆ ಇದ್ದಾರೆ ಎಂದು ಹೇಳಿದರು. ಸೋಮಶೇಖರ್ ಮಾತನಾಡಿ ಪುರುಷರಷ್ಟೇ ಸರಿ ಸಮಾನರಾಗಿದ್ದಾರೆ ಮಹಿಳೆಯರು, ಅವರಿಗೂ ಆಸ್ತಿ ಹಕ್ಕು ಹಾಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ಅವರು ಸಾಧನೆ ಮಾಡಿ ಸನ್ಮಾನಿತರಾಗುತ್ತಿದ್ದಾರೆ ಎಂದು ತಿಳಿಸಿದರು. ಕೈಗಾರಿಕೆ ಇಲಾಖೆ ತಾಲೂಕು ಪಂಚಾಯಿತಿಯಿಂದ ವಿವಿಧ ಸವಲತ್ತುಗಳನ್ನು ಸಲಕರಣೆಗಳನ್ನು ಮತ್ತು ವೀಲ್ ಚೇರ್ ಗಳನ್ನು ವಿತರಿಸಲಾಯಿತು. 26 ಗ್ರಾಮ ಪಂಚಾಯಿತಿಗಳಿಗೆ ಡಿಜಿಟಲ್ ಗ್ರಂಥಾಲಯ ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಪೂರ್ಣಿಮಾ, ಕಾರ್ಯನಿರ್ವಹಣಾಧಿಕಾರಿ ಗೀತಾ ಶಂಕರ್, ಸಿಡಿಪಿಓ ಜ್ಯೋತಿ ಲಕ್ಷ್ಮಿ, ಚಿದಾನಂದ, ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಯ ಪಿಡಿಒಗಳು ಅಧ್ಯಕ್ಷರು ಉಪಾಧ್ಯಕ್ಷರುಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ವರದಿಗಾರರು : ತರೀಕೆರೆ N. ವೆಂಕಟೇಶ್….