ಕಾನಾ ಹೊಸಹಳ್ಳಿ ನಾಡ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ.
ಕಾನಾ ಹೊಸಹಳ್ಳಿ ಅಕ್ಟೋಬರ್.29

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ನಾಡ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು. ನಂತರ ಕಂದಾಯ ಪರಿವೀಕ್ಷಕ ಬಿ ಮುರಳಿಕೃಷ್ಣ ಮಾತನಾಡಿ ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿ ಆದಿಕವಿ ವಾಲ್ಮೀಕಿ ಮಹರ್ಷಿಗಳು ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರುಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಎಚ್ಎಮ್ ಚನ್ನಬಸಯ್ಯ. ಶ್ರೀನಿವಾಸ ಕೊಂಡಿ. ನಾಡ ಕಚೇರಿ ಸಿಬ್ಬಂದಿ ಅನಿತಾ ಪೂಜಾರ್ . ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನೂರಪ್ಪ. ಮುಖಂಡರಾದ ನಡುಮನೆ ತಿಪ್ಪೇಸ್ವಾಮಿ. ಯುವ ಮುಖಂಡರಾದ ಲಕ್ಕಜ್ಜಿ ಮಲ್ಲಿಕಾರ್ಜುನ್. ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷರಾದ ರಾಘವೇಂದ್ರ. ಹನುಮಂತಪ್ಪ ಬಿಸನಹಳ್ಳಿ. ಸ್ವಾಮಿ. ಗ್ರಾಮ ಸಹಾಯಕ ಬೋರಪ್ಪ.ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ