ಶ್ರೀ ಬದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ಜರುಗುವುದು.
ಬೇಕಿನಾಳ ಸ.09

ತಾಳಿಕೋಟೆ ತಾಲೂಕಿನ ಸುಕ್ಷೆತ್ರ ಬೇಕಿನಾಳ ಗ್ರಾಮದಲ್ಲಿ ಶ್ರೀ ಬದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ಪಲಕ್ಕಿ ಮೆರವಣಿಗೆ ಜರುಗುವುದು. ನಿನ್ನೆ ರಾತ್ರಿ ಶ್ರೀ ಬದ್ರೇಶ್ವರ ಭಜನಾ ಮಂಡಳಿಯವರಿಂದ ಭಜನೆ ಜರುಗಿತು. ಬೆಳಿಗ್ಗೆ ಶ್ರೀ ಬದ್ರೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ ಅಸ್ಟೋತ್ರ ನಾಮಾವಳಿ ಮಹಾ ಮಂಗಳಾರತಿ ಯಾದ ನಂತರ ಊರಿನಲ್ಲಿ ಪಲಕ್ಕಿ ಮೆರವಣಿಗೆ ಡೊಳ್ಳು ವಾದ್ಯ ಕಳಸ ಹಾಗೂ ಪುರವಂತರ ಸೇವೆ ಜೊತೆಗೆ ಶ್ರೀ ಬದ್ರೇಶ್ವರ ಪಲಕ್ಕಿ ಉತ್ಸವವು ಅತೀ ವೀಜೃಂಭಣೆಯಿಂದ ಜರುಗುವುದು. ಮತ್ತೆ ಮಠಕ್ಕೆ ಬಂದು ಗುಡಿ ಪ್ರವೇಶ ಅದ ನಂತರ ಪ್ರಸಾದ ವ್ಯವಸ್ಥೆ ಇರುತ್ತೆ ಊರಿನ ಎಲ್ಲಾ ಪ್ರಮುಖರು ಮತ್ತು ಯುವಕ ಮಂಡಳಿ ಎಲ್ಲಾ ಸಕಲ ಸದ್ಭಕ್ತರು ಸೇರಿ ಜಾತ್ರೆ ಅತೀ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಪತ್ರಿಕಾ ಪ್ರತಿನಿಧಿ ತಿಳಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ.ಬೇನಾಳಮಠ.ಕಲಕೇರಿ