‘ಮದ್ದಾನೆ’ ಚಿತ್ರದ ಟೈಟಲ್ ಮತ್ತು ಪೋಸ್ಟರ್ – ಬಿಡುಗಡೆ ಮಾಡಿದ ಡಾ, ಶಿವರಾಜ್ ಕುಮಾರ್.
ಬೆಂಗಳೂರು ಮೇ.23

ಎಲ್.ಎಮ್ ಫಿಲ್ಮ್ಸ್ ಬೆಂಗಳೂರ ಅವರ “ಮದ್ದಾನೆ” ಕನ್ನಡ ಚಲನ ಚಿತ್ರದ ಟೈಟಲ್ ಲಾಂಚ್ ಮತ್ತು ಪೋಸ್ಟರ್ ಬಿಡುಗಡೆಯನ್ನು ಕರುನಾಡ ಚಕ್ರವರ್ತಿ ಡಾ, ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಬಿಡುಗಡೆಗೆ ಮಾಡಿದರು. ನಂತರ ಮಾತನಾಡಿ ಚಿತ್ರ ಯಶಸ್ವಿ ಯಾಗಲಿ ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದರು.
‘ಮದ್ದಾನೆ’ ಚಿತ್ರದಲ್ಲಿ ಚಿಕ್ಕ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿ, ಮುಂಬೈನಲ್ಲಿ ಆಂಟಿ-ಟೆರರಿಸ್ ಸ್ಕ್ವಾಡ್ ಆಗಿ ಲವ್ ಜಿಹಾದ್, ಡ್ರಗ್ಸ್ ಮಾಫೀಯಾ ದಂಧೆಯಲ್ಲಿ ಭಾಗಿ ಯಾದವರನ್ನು ಕಂಡು ಹಿಡಿಯಲು ರೌಡಿಸಂಗೆ ಇಳಿದು ಕಷ್ಟದಲ್ಲಿರುವ ತನ್ನ ಕುಟುಂಬವನ್ನ ಹೇಗೆ ರಕ್ಷಿಸಿ ಕೊಳ್ಳುತ್ತಾನೆ ಎಂಬುದನ್ನು ಹೇಳಿದ್ದು ಪ್ರೇಕ್ಷಕರು ಚಿತ್ರ ಮಂದಿರದಲ್ಲೇ ನೋಡ ಬೇಕು ಎಂದು ನಿರ್ದೇಶಕ ಕೆ.ರಾಜಶರಣ್ ಹೇಳಿದರು.
ನಾಯಕನಾಗಿ ಈ ಮೊದಲು “ಕ್ಯಾಂಪಸ್ ಕ್ರಾಂತಿ” ಯಲ್ಲಿ ಕಾಲೇಜ್ ಹುಡುಗನ ಪಾತ್ರದಲ್ಲಿ ಅಭಿನಯಿಸಿದ್ದ ಆರ್ಯರವರಿಗೆ ಇದು ಎರಡನೇ ಚಿತ್ರ, ಈ ಮೊದಲು “ಎಮ್ಮೆತಿಮ್ಮ”, “ಮೊದಲ ಮಳೆ” ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಕೆ ರಾಜಶರಣ್‌ರಿಗೆ ಇದು ಮೂರನೇ ಚಿತ್ರ, ಚಿತ್ರರಂಗಕ್ಕೆ ಒಳ್ಳೆಯ ಅಭಿರುಚಿಯ ಸಿನಿಮಾಗಳನ್ನು ಕೊಡಲು ಹದಿನೈದು ವರ್ಷದ ಹಿಂದೆ ಕಲ್ಯಾಣ ಕರ್ನಾಟಕದ ಸುರಪುರ ತಾಲೂಕಿನ ಜೋಗುಂಡಭಾವಿ ಗ್ರಾಮದಿಂದ ಮನೆ ತೊರೆದು ಬಂದು ಗಾಂಧಿ ನಗರದಲ್ಲಿ ಕನಸು ನನಸಾಗಿಸಿ ಕೊಂಡವರು.
ಬೆಂಗಳೂರು, ಮಂಡ್ಯ, ಮೈಸೂರಿನಲ್ಲಿ ಸುಮಾರು ೩೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ, ತಾರಾ ಬಳಗದಲ್ಲಿ ಶ್ರೀನಿವಾಸ್‌ಮೂರ್ತಿ, ಲತಾಮೂರ್ತಿ, ರಾಣಿ, ಸುಜಾತ ಹೀರೆಮಠ, ಏಕಾಂಬರ, ಸುಧಾಕರ್, ರಾಮಕೃಷ್ಟ, ಪೂಜಿತ್ ಮೊದಲಾದವರು ಅಭಿನಯಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ ನಾಗಭೂಷಣ್ ಪೂಜಾರ್ ಛಾಯಾಗ್ರಹಣ, ಚಿತ್ರದಲ್ಲಿ ಮೂರು ಹಾಡುಗಳಿದ್ದು ಪ್ರಸನ್ನ ಭೋಜಶೆಟ್ಟರ್ ಸಂಗೀತ ಸಂಯೋಜಿಸಿದ್ದಾರೆ, ಡಾ, ಮಾರುತಿ ಎನ್.ಈ ಮತ್ತು ಎಸ್ ವಿ ಶಿವಕುಮಾರ್ ದಾವಣಗೆರೆ ಸಾಹಿತ್ಯ, ಸ್ಟಾರ್ ನಾಗಿಯವರ ನೃತ್ಯ ಸಂಯೋಜನೆ, ರಾಜೇಶ್ ಚೌಹಾಣ್ ಸಂಕಲನ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಗಿ, ಎಂ.ಜಿ ಕಲ್ಲೇಶ ಪಿ.ಆರ್.ಓ ಸಹ ನಿರ್ಮಾಪಕರು ಡಾ, ಮಾರುತಿ ಎನ್.ಈ ಆಗಿದ್ದಾರೆ.
ಶ್ರೀಮತಿ ಲತಾ ಮೂರ್ತಿಯವರು ಚಿತ್ರಕ್ಕೆ ಬಂಡವಾಳ ಹೂಡಿದ್ದು ಈಗ ಸೆನ್ಸಾರ್ ಮುಗಿಸಿ ಕೊಂಡು ಜೂನ್ ೧೨ ಕ್ಕೆ ತೆರೆಗೆ ಬರಲು ಸಜ್ಜಾಗಿದೆ ಎಂದು ನಿರ್ಮಾಪಕಿ ಲತಾಮೂರ್ತಿ ತಿಳಿಸಿದರು.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ
