ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ತಾಯಿ – ಮಹಾಲಿಂಗ ಪ್ರಭು ಶ್ರೀ.

ಕನಕಪುರ ಸ.19

ಶ್ರೀ ದೇಗುಲಮಠದ ನಿರ್ವಾಣಸ್ವಾಮಿ ಕೃಪಾ ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ನಿರ್ವಾಣಸ್ವಾಮಿ ಸಂಸ್ಕೃತ ಪಾಠ ಶಾಲೆ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಕಾರ ದೊಂದಿಗೆ “ಅಸ್ಮಾಕಂ ಸಂಸ್ಕೃತ ಭಾಷಾ” ಸಂಸ್ಕೃತೋತ್ಸವ ಕಾರ್ಯಕ್ರಮ ಮತ್ತು ಜನ ಜಾಗೃತಿ ಜಾತಕ್ಕೆ ಸಂಸ್ಥೆಯ ವಿಶೇಷ ಅಧಿಕಾರಿ ಶ್ರೀ ರವಿಶಂಕರ್‌ರವರು ಚಾಲನೆ ನೀಡಿದ ನಂತರ ಬೂದೀಕೆರೆ ರಸ್ತೆ ಎಂಜಿ ರಸ್ತೆಗಳಲ್ಲಿ ಜನ ಜಾಗೃತಿಯ ಜಾಥಾ ನಡೆಯಿತು.

ನಂತರ ಅಸ್ಮಾಕಂ ಸಂಸ್ಕೃತ ಸಮಾರಂಭದ ದಿವ್ಯ ಸಾನಿಧ್ಯವನ್ನು ಮುಖ್ಯ ಶಿಕ್ಷಕರಾದ ವಿದ್ವಾನ್ ಮಹಾಲಿಂಗಪ್ರಭು ಸ್ವಾಮಿಗಳು, ವಹಿಸಿ ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳಿಗೆ ತಾಯಿ, ನಮ್ಮ ಪರಂಪರೆಯಲ್ಲಿ ಪೂಜೆ ಪುನಸ್ಕಾರಗಳಲ್ಲಿ ಬಳಸುವಂತಹ ಭಾಷೆ ಸಂಸ್ಕೃತ ಅದನ್ನು ಸರಳ ಗೊಳಿಸಿ ಜನ ಸಾಮಾನ್ಯರು ಮಾತನಾಡುವಂತೆ ಆಗಬೇಕು ಎಂಬುದು ಜಾಥಾ ಮತ್ತು ಜಾಗೃತಿ ಕಾರ್ಯಕ್ರಮದ ಉದ್ದೇಶ ನಮ್ಮ ಶ್ರೀಮಠದಲ್ಲಿ ಇಮ್ಮಡಿ ಮಹಾಲಿಂಗ ಸ್ವಾಮಿಗಳವರ ಕಾಲದಿಂದಲೂ ಎಲ್ಲಾ ಜನಾಂಗದವರು ಸಂಸ್ಕೃತವನ್ನು ಕಲಿತು ಇಂದು ಪ್ರಮುಖ ಸ್ಥಳಗಳಲ್ಲಿ ಶಿಕ್ಷಕರಾಗಿ ಪುರೋಹಿತರಾಗಿ ಸಂಸ್ಕಾರವಂತವರಾಗಿ ಎಲ್ಲಾ ಕಡೆ ಕಾಣುತ್ತಿರುವುದು ನಮ್ಮ ಶ್ರೀಮಠದ ಹೆಮ್ಮೆ ಎಂದರು.

ರಾಮನಗರ ಜಿಲ್ಲಾ ಸಂಸ್ಕೃತ ಪಾಠ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೆ.ಪಿ ಯೋಗಿಶ್‌ರವರು ಉದ್ಘಾಟನೆಯನ್ನು ನೆರವೇರಿಸಿ ಸಂಸ್ಕೃತ ಭಾಷೆಯು ಇಂದಿನ ವಿದ್ಯಾರ್ಥಿಗಳು ಅಧ್ಯಯನ ಮಾಡಿದರೆ ಮನಸ್ಸು ಶುದ್ಧವಾಗಿ, ನಿರ್ಮಲವಾಗಿ ಎಲ್ಲಾ ವಿಷಯಗಳಲ್ಲಿಯೂ ಆಸಕ್ತಿ ಮೂಡುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾದ ಶ್ರೀ ದುರದುಂಡೇಶ್ವರ ಸ್ವಾಮಿಗಳು, ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿ ಕೊಂಡರೆ ಈ ಕಾರ್ಯಕ್ರಮ ಯಶಸ್ವಿ ಎಂದರು ಅಧ್ಯಕ್ಷತೆಯನ್ನು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಆರ್.ಶಿವಯ್ಯನವರು ವಹಿಸಿದ್ದರು. ಉಪನ್ಯಾಸವನ್ನು ವಿದ್ಯಾನ್ ಶಿವಕುಮಾ‌ರ್ ಎಂ. ರವರು ನಡೆಸಿದರು ಸಮಾರಂಭದಲ್ಲಿ ವಿದ್ವಾನ್ ವೀರಭದ್ರಪ್ಪರವರು, ಮಂಜುನಾಥ ಮಲ್ಲಣ್ಣನವರು, ವಿದುಷಿ ವಿ.ಎಲ್ ಧನ ಲಕ್ಷ್ಮಿರವರು, ಶ್ರೀ ಆನಂದ್ ಕುಮಾರ್‌ರವರು, ಸಂಸ್ಥೆಯ ಎಲ್ಲಾ ಶಿಕ್ಷಕರು ಮಕ್ಕಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button