ಆನ್ ಲೈನ್ ಔಷಧಿ ಮಾರಾಟ – ಖಂಡಿಸಿ ಪ್ರತಿಭಟನೆ.
ಕೆ ಹೊಸಹಳ್ಳಿ ಮೇ.22

ಕೂಡ್ಲಿಗಿ ತಾಲೂಕಿನ ಹೋಬಳಿ ಮಟ್ಟದ ಅನಿಯಂತ್ರಿತ ಆನ್ ಲೈನ್ ಔಷಧ ಮಾರಾಟ ದಿಂದ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ಬಂದಿದೆ. ಶೆಡ್ಯೂಲ್ ಡ್ರಗ್ಸ್ ದುರುಪಯೋಗ ತಡೆದು ಚಿಲ್ಲರೆ ಔಷಧ ಅಂಗಡಿಗಳನ್ನು ಉಳಿಸುವಂತೆ ಆಗ್ರಹಿಸಿ ಕಾನ ಹೊಸಹಳ್ಳಿ ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ಬುಧವಾರ ನಾಡ ಕಚೇರಿಯ ಅನಿತಾ ಪೂಜಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಮುಖಂಡ ಬಿ. ಮಂಜುನಾಥ್ ಮಾತನಾಡಿ, “ಕಾರ್ಪೊರೇಟ್ ಕಂಪನಿಗಳು ಆನ್ ಲೈನ್‌ನಲ್ಲಿ ವೈದ್ಯರ ಚೀಟಿ ಇಲ್ಲದೆ H, H1 ಔಷಧಗಳನ್ನು ಮಾರಾಟ ಮಾಡುತ್ತಿವೆ. ನಕಲಿ ಔಷಧ, ಸ್ವಯಂ ಚಿಕಿತ್ಸೆಯಿಂದ ಜನರ ಪ್ರಾಣಕ್ಕೆ ಅಪಾಯವಾಗಿದೆ. ಸರ್ಕಾರ ಕೂಡಲೇ ಆನ್ ಲೈನ್ ಔಷಧ ಮಾರಾಟಕ್ಕೆ ಕಡಿವಾಣ ಹಾಕಬೇಕು. ಹಳ್ಳಿಗಳಲ್ಲಿ 30-40 ವರ್ಷ ದಿಂದ ಸೇವೆ ನೀಡುತ್ತಿರುವ ನಮ್ಮಂತಹ ಚಿಲ್ಲರೆ ಅಂಗಡಿಗಳು ಬೀಗ ಹಾಕುವ ಸ್ಥಿತಿ ಬಂದಿದೆ. ಇಂದು ಸಾಂಕೇತಿಕ ಬಂದ್ ಮಾಡಿದ್ದೇವೆ. ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ ರಾಜ್ಯ ವ್ಯಾಪಿ ಉಗ್ರ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
“ಆನ್ ಲೈನ್‌ನಲ್ಲಿ ಶೇ. 20 ರಿಂದ 30 ರಷ್ಟು ರಿಯಾಯಿತಿ ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಆದರೆ ಔಷಧದ ಗುಣಮಟ್ಟ, ಅವಧಿ ಬಗ್ಗೆ ಖಾತ್ರಿ ಇಲ್ಲ. ಇದು ಜನರ ಜೀವದ ಜೊತೆ ಚೆಲ್ಲಾಟ” ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ಅನಿತಾ ಪೂಜಾರಿ ಅವರು, ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿ.ಮಂಜುನಾಥ್, ನಿತೀಶ್, ಇಮ್ರಾನ್, ಅಮ್ಮನಕೆರೆ ಕೊಟ್ರೇಶ್, ನಾಗಭೂಷಣ್, ಆನಂದ್ ಸ್ವಾಮಿ, ಸೋಮಶೇಖರ್, ಸಿದ್ದಾಪುರ ಮಂಜುನಾಥ್ ಜಿ.ಎಸ್ ದೇವರಾಜ್, ಪ್ರವೀಣ್, ಶ್ರೀರಾಮ್, ರಾಮಣ್ಣ, ಜ್ಯೋತಿ, ರಮೇಶ್, ತಿಪ್ಪೇಶ್, ರಾಕೇಶ್, ಈಶಣ್ಣ ಸೇರಿದಂತೆ ಹೋಬಳಿಯ ಔಷಧ ವ್ಯಾಪಾರಿಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

