“ರಂಭಾಪುರಿ ದಸರಾದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಶಿವಾಚಾರ್ಯ ರತ್ನ:ಶ್ರೀ ಷllಬll ರೇಣುಕ ಶಿವಾಚಾರ್ಯ ಸ್ವಾಮೀಗಳು” – ಕ್ಷೇತ್ರ ಎಡೆಯೂರು…..

ಶಿವಾಚಾರ್ಯ ಸಂಕುಲದ ಭೀಷ್ಮರೆಂದೇ ಪ್ರಸಿದ್ಧರಾದ ಶ್ರೀ ಷ||ಬ್ರ|| ರೇಣುಕ ಶಿವಾಚಾರ್ಯ ಸ್ವಾಮಿಗಳವರು ತರೀಕೆರೆ ತಾಲೂಕಿನ ಗೊಂಡೇದಹಳ್ಳಿಯ ಶ್ರೀ ವೇ|| ಮರಿದೇವರು ಮತ್ತು ಶ್ರೀಮತಿ ಹಾಲಮ್ಮನವರ ನಾಲ್ಕನೇ ಸುಪುತ್ರರಾಗಿ ದಿನಾಂಕ: 06-9-1948 ರಂದು ಜನಿಸಿದರು. ಬಾಲ್ಯದಲ್ಲಿಯೇ ತಮ್ಮ ಮಾತಾಪಿತೃಗಳ ವಿಯೋಗವಾದ ಸಂದರ್ಭದಲ್ಲಿ ತಾವರೆಕೆರೆ ಶಿಲಾಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳವರ ಗರಡಿಯಲ್ಲಿ ಬಾಲ್ಯವನ್ನು ಕಳೆದರು. ಶ್ರೀಮದ್ವೀರಶೈವ ಶಿವಯೋಗಮಂದಿರದಲ್ಲಿ ವಿದ್ಯಾಭ್ಯಾಸ ಮಾಡಿ ಯೋಗ ಮತ್ತು ಶಿವಯೋಗದ ತರಬೇತಿ ಪಡೆದವರು. ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿನ ಶ್ರೀ ಮಹಂತರ ಮಠದಲ್ಲಿ ಆಶ್ರಯ ಪಡೆದು ವೇದ, ಸಂಸ್ಕೃತ ಪದವಿ ಪಡೆದವರು. ತಾವರೆಕೆರೆ ಶ್ರೀ ಶಿಲಾಮಠಕ್ಕೆ 1976 ರಲ್ಲಿ ಶ್ರೀಗುರು ಪಟ್ಟಾಧಿಕಾರ ಹೊಂದಿ, ಧರ್ಮ ಕಟ್ಟುವ ಕಾರ್ಯಕ್ಕೆ ಮುಂದಡಿ ಇಟ್ಟವರು. ಹಲವಾರು ಸವಾಲುಗಳನ್ನು ಎದುರಿಸಿ ವೀರಶೈವ ಧರ್ಮದ ಪ್ರಚಾರದ ಜೊತೆಗೆ ಜನರಲ್ಲಿ ಧಾರ್ಮಿಕ ಪ್ರಜ್ಷೆಯನ್ನು ಜಾಗೃತಗೊಳಿಸಿದರು. ಶ್ರೀ ರಂಭಾಪುರಿ ಪೀಠದ ಜಗದ್ಗುರುತ್ರಯರ ಸೇವಾ ವಲ್ಲರಿಯಲ್ಲಿ ಅತ್ಯಂತ ಹತ್ತಿರದವÀರಾಗಿದ್ದುಕೊಂಡು ಉತ್ತಮ ನಡೆ-ನುಡಿಗಳನ್ನು ಒಡಮೂಡಿಸಿಕೊಂಡವರು. ಶ್ರೀಮಠದಲ್ಲಿ ನಿರಂತರ ಚಿಂತನ-ವಿಚಾರ ಗೋಷ್ಠಿಗಳನ್ನು ಆಯೋಜಿಸಿ, ಧರ್ಮಪೀಠಗಳನ್ನು ಬರಮಾಡಿಕೊಂಡು, ಸಾಹಿತ್ಯ-ಸಂಸ್ಕೃತಿ ಸಮ್ಮೇಳನಗಳನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ್ದಲ್ಲದೇ ಶ್ರೀಮಠದ ಅಭಿವೃದ್ಧಿಯನ್ನಂತೂ ಹೆಚ್ಚಿನ ಮಟ್ಟದಲ್ಲಿ ಮಾಡಿದ ಶ್ರೇಯಸ್ಸು ಇವರದು. ಮುಂದೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಶ್ರೀ ಬಾಳೆಹೊನ್ನೂರು ಖಾಸಾ ಶಾಖಾಮಠಕ್ಕೆ 1994ರ ಮೇ 14ರಂದು ಪ್ರಸ್ತುತ ಶ್ರೀ ರಂಭಾಪುರಿ ಜಗದ್ಗುರುಗಳವರಿಂದ ವಿಶೇಷ ಆಶೀರ್ವಾದವನ್ನು ಪಡೆದುಕೊಂಡು ಶ್ರೀಗುರು ಪಟ್ಟಾಧಿಕಾರತ್ವವನ್ನು ಹೊಂದಿ ಅಸಾಧ್ಯವನ್ನೂ ಸಾಧ್ಯಗೊಳಿಸಿದ್ದಾರೆ.

ಯುವಕರಿಗೆ ಮಾರ್ಗದರ್ಶಿ ಸೂತ್ರಗಳನ್ನು ನಿರಂತರಗೊಳಿಸುತ್ತ ಸಂಘಟನಾತ್ಮಕ ಚಿಂತನೆಗಳಲ್ಲಿ, ತಾತ್ವಿಕಾಚರಣೆಗಳಲ್ಲಿ, ಸಾಹಿತ್ಯಿಕೋಜ್ವಲನೆಯಲ್ಲಿ ತಮ್ಮನ್ನು ತಾವು ಸಂಪೂರ್ಣ ವಿನಿಯೋಗಿಸಿಕೊಂಡವರು. ಶ್ರೀ ವೀರಭದ್ರಸ್ವಾಮಿ, ಶ್ರೀ ಜಗದ್ಗುರು ರೇಣುಕರ ಮಂದಿರ ಸ್ಥಾಪನೆಗೆ ಪ್ರೇರಣೆ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾಡಿನಾದ್ಯಂತ ಸಂಚರಿಸಿ ಕಾರ್ಯ ಮಾಡುವ, ಮಾಡುತ್ತಿರುವ ಕೆಲಸಗಳು ಒಂದಲ್ಲ, ಎರಡಲ್ಲ ನೂರಾರು. ಸುದೀರ್ಘ 75 ವರ್ಷಗಳ ಪರ್ಯಂತರ ಮೂಲ ಧರ್ಮಾಚರಣೆಗಳನ್ನು ಬಿಡದೇ ಆಚರಿಸಿಕೊಂಡು ಬರುತ್ತಿರುವ ಶ್ರೀಗಳು ಬಹುತೇಕ ಶ್ರೀ ರಂಭಾಪುರಿ ಜಗದ್ಗುರುಗಳವರ ಎಲ್ಲ ಸಭೆ-ಸಮಾರಂಭಗಳಲ್ಲಿ ಪಾಲ್ಗೊಂಡು ಮಾರ್ಗದರ್ಶನ ಮಾಡುತ್ತಿರುವ ಶ್ರೀಗಳವರು ಶ್ರೀ ಸನ್ನಿಧಿಯವರ ಹೆಚ್ಚಿನ ದಸರಾ ಸಮಾರಂಭಗಳಲ್ಲಿ ಭಾಗವಹಿಸಿದ ಕೀರ್ತಿಯುಳ್ಳವರು. ಸತತ ಪಾದರಸದಂತೆ ಧರ್ಮಶೀಲತೆಯಲ್ಲಿ ಮುನ್ನಡೆಯುತ್ತಿರುವ ಶ್ರೀಗಳವರ ಸೇವಾಭಿಮಾನನಿಷ್ಠೆ ಮತ್ತು ಗುರುಭಕ್ತಿಯನ್ನು ಮನಗಂಡ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆಯುವ 2024 ನೇ ಸಾಲಿನ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ದಿನಾಂಕ: 09-10-2024 ರಂದು ‘ಶಿವಾಚಾರ್ಯ ರತ್ನ’ ಎಂಬ ಪ್ರಶಸ್ತಿಯನ್ನಿತ್ತು ಆಶೀರ್ವದಿಸುತ್ತಿದೆ. ಸಾಧನಸಿರಿ : ಶ್ರೀ ಷ|| ಬ್ರ|| ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ನರೇಗಲ್ಲ-ಸವದತ್ತಿ ಆಚಾರ-ವಿಚಾರಗಳನ್ನು ನಡೆ-ನುಡಿಗಳಲ್ಲಿ ಅಳವಡಿಸಿಕೊಂಡು ನಿರಂತರ ಧರ್ಮ ಪ್ರಸಾರ ಮಾಡುತ್ತ, ಉಪದೇಶಾಮೃತ ಮೂಲಕವಾಗಿ ಜನರಲ್ಲಿ ಜಾಗೃತಿ ಮತ್ತು ಬದಲಾವಣೆಯನ್ನುಂಟು ಮಾಡುತ್ತ ಒಬ್ಬ ಸರಳ ಮತ್ತು ವಿರಳ ಸಾಧಕರಾಗಿ ಮುನ್ನಡೆಯುತ್ತಿರುವವರೇ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಹಿರೇಮಠದ ಶ್ರೀ ಷ||ಬ್ರ|| ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು. ಶ್ರೀಗಳವರು ದಿನಾಂಕ: 30-6-1974 ರಂದು ನರೇಗಲ್ಲ ಗ್ರಾಮವಾಸಿಗಳಾದ ಶ್ರೀ ವೇ||ಸದಾಶಿವಯ್ಯ ಹಿರೇಮಠ ಮತ್ತು ಶ್ರೀಮತಿ ವಿಶಾಲಾಕ್ಷಮ್ಮನವರ ಪುಣ್ಯ ಗರ್ಭದಲ್ಲಿ ಜನಿಸಿದರು.

ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಅಧ್ಯಯನ ಮಾಡಿ ತಮ್ಮ 13ನೇ ವಯಸ್ಸಿನಲ್ಲಿಯೇ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳ ಅಪ್ಪಣೆಯಂತೆ ದೀಕ್ಷಾ ಸಂಸ್ಕಾರ ಹೊಂದಿ ಸ್ವಾಮಿತ್ವಕ್ಕೆ ಅಡಿಯಿಟ್ಟವರು. ನಂತರ ಧರ್ಮ-ಆಧ್ಯಾತ್ಮ ಶಿಕ್ಷಣಕ್ಕಾಗಿ ಹೊನ್ನಾಳಿ ಹಿರೇಕಲ್ಮಠದಲ್ಲಿ ಪ್ರವೇಶ ಪಡೆದು ಪ್ರೌಢಶಾಲೆ ಹಾಗೂ ಸಂಸ್ಕೃತ, ಆಧ್ಯಾತ್ಮ ಶಿಕ್ಷಣ ಪೂರೈಸಿದರು. ಉನ್ನತ ವ್ಯಾಸಂಗವನ್ನು ಮೈಸೂರಿನ ಜೆ.ಎಸ್.ಎಸ್. ಗುರುಕುಲದಲ್ಲಿ ಹಾಗೂ ಅರಮನೆ ಜಪದಕಟ್ಟೆಮಠದಲ್ಲಿ ಪೂರ್ಣಗೊಳಿಸಿದರು. ಸಾಧಕರಿರುವ ಸಂದರ್ಭದಲ್ಲಿಯೇ ಪ್ರಸ್ತುತ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಪಡೆದು, ಅವರ ಆಶೀರ್ವಚನದಿಂದ ಪ್ರಭಾವಿತರಾಗಿ ಪ್ರವಚನ ಮಾಡುವುದನ್ನು ಕಲಿತವರು. ಮುಂದೆ ಉನ್ನತ ಅಧ್ಯಯನಕ್ಕಾಗಿ ವಿದ್ಯಾನಗರಿ ಶ್ರೀಮದ್ ಕಾಶಿ ವಿಶ್ವಾರಾಧ್ಯ ಗುರುಕುಲದಲ್ಲಿ ಸತತ 5 ವರ್ಷಗಳ ಕಾಲ ಸಂಸ್ಕೃತ, ಜ್ಯೋತಿಷ್ಯ, ವೇದ, ಆಗಮ, ಸಿದ್ಧಾಂತಗಳನ್ನು ಅಧ್ಯಯನ ಮಾಡಿ ದಿನಾಂಕ: 17-11-2002 ರಂದು ನರೇಗಲ್ಲ ಹಿರೇಮಠದ ಶ್ರೀಗುರು ಪಟ್ಟಾಧಿಕಾರ ವಹಿಸಿಕೊಂಡು ಭಕ್ತರ ಸಹಕಾರದಿಂದ ಮಠಾಭಿವೃದ್ಧಿ, ಧರ್ಮ ಪ್ರಚಾರ ಕೈಗೊಂಡಿದ್ದಾರೆ. ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಸಂಚರಿಸಿ ವೀರಶೈವ ಧರ್ಮ, ಶಿವಾದ್ವೆöÊತ ಸಿದ್ಧಾಂತ, ವೀರಶೈವ ಲಿಂಗಾಯತ ಪರಂಪರೆಯ ಪುರಾಣ-ಪ್ರವಚನಗಳನ್ನು ಪ್ರಸ್ತುತಪಡಿಸುತ್ತ ಜನರ ಪ್ರೀತಿಗೆ ಪಾತ್ರರಾಗಿರುವ ಶ್ರೀಗಳವರಿಗೆ “”ಪ್ರವಚನ ಪ್ರಾಜ್ಞ”, “ಶ್ರೀ ಜಗದ್ಗುರು ರೇಣುಕ ಸಿರಿ”, “ಪ್ರವಚನ ಬ್ರಹ್ಮ” ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳು ಸಂದಿರುವ ಶ್ರೀಗಳ ಕಾರ್ಯನಿಷ್ಠೆಯನ್ನು ಗಮನಿಸಿ 2012ರಲ್ಲಿ ಸವದತ್ತಿಯ ಮೂಲಿಮಠಕ್ಕೆ ಶ್ರೀಗುರು ಪಟ್ಟಾಧಿಕಾರ ಮಾಡಲಾಗಿದೆ.

ಶಿಕ್ಷಣ, ಸಂಘಟನೆ, ಪ್ರವಚನ, ಧರ್ಮಜಾಗೃತಿಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿರುತ್ತಿರುವ ಶ್ರೀಗಳವರಿಗೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆಯುವ 2024 ನೇ ಸಾಲಿನ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ದಿನಾಂಕ: 10-10-2024 ರಂದು “ಸಾಧನ ಸಿರಿ” ಎಂಬ ಪ್ರಶಸ್ತಿಯನ್ನಿತ್ತು ಆಶೀರ್ವದಿಸುತ್ತಿದೆ. ಸಾಹಿತ್ಯ ಸಿರಿ : ಶ್ರೀ ಆರ್. ಎಮ್. ಪ್ರಭುಲಿಂಗಶಾಸ್ತಿçಗಳು ರುದ್ರಾಕ್ಷಲಮಠ, ಮೆಹಬೂಬನಗರ, ತೆಲಂಗಾಣಅಕ್ಷರ ಕಲಿತವರು ಅಕ್ಷಯ ಪಾತ್ರೆ ಇದ್ದಂತೆ. ಎಲ್ಲಿ, ಯಾವುದೇ ಪ್ರಸಂಗ ಬಂದರೂ ಹೊಂದಿಕೊಳ್ಳುವ ಮನೋಭಾವದವರು ಎಂಬAತೆ ತೆಲಂಗಾಣ ರಾಜ್ಯದ ಕೋಸ್ಗಿ ಗ್ರಾಮದ ಶ್ರೀ ರುದ್ರಾಕ್ಷಲಾ ಮಠಂ ವೇ||ಪರ್ವತಯ್ಯಸ್ವಾಮಿ ಮತ್ತು ಶ್ರೀಮತಿ ಚಂದ್ರಶೇಖರಮ್ಮನವರ ಒಡಲ ಕುಡಿಯಾಗಿ ದಿನಾಂಕ: 19-07-1960 ರಂದು ಜನಿಸಿದವರೇ ಶ್ರೀ ಆರ್.ಎಮ್. ಪ್ರಭುಲಿಂಗಶಾಸ್ತಿçಗಳವರು. ಚಿಕ್ಕವರಿದ್ದಾಗಲೇ ಅಧ್ಯಯನ ಕುರಿತು ಹೆಚ್ಚು ಒಲವು ಮೂಡಿಸಿಕೊಂಡ ಶ್ರೀಯುತರು ಶಾಲಾ-ಕಾಲೇಜುಗಳ ವಿವಿಧ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿದ್ದು ಗೆಲುವು ಹೊಂದಿದವರು. ಶಾಸ್ತ್ರಿ ಮನೆತನವೆಂದೇ ಆ ಭಾಗದಲ್ಲಿ ಪ್ರತೀತಿ ಹೊಂದಿರುವ ಇವರ ಮನೆತನ ವೀರಶೈವ ಧರ್ಮ ಸಿದ್ಧಾಂತಗಳನ್ನು ಪ್ರಸಾರಗೊಳಿಸುತ್ತ ತಮ್ಮ ಕಾಯಕದೊಟ್ಟಿಗೆ ಸಮಾಜವನ್ನು ಜಾಗೃತಗೊಳಿಸುವ ದಿಟ್ಟ ಕಾರ್ಯ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಶ್ರೀ ಪ್ರಭುಲಿಂಗ ಶಾಸ್ತಿçಗಳವರು ಎಮ್.ಎ. ಇಂಗ್ಲೀಷ್ ಪದವೀದರರಾಗಿ ವೀರಶೈವ ಸಿದ್ಧಾಂತದ ಕುರಿತು ವಿಶೇಷ ಅಧ್ಯಯನ ನಡೆಸಿದ್ದಲ್ಲದೇ ತಾವೊಬ್ಬ ಅಬಕಾರಿ ಇಲಾಖೆಯ ಅಧಿಕಾರಿಯಾಗಿ ಅತ್ಯುತ್ತಮ ಕಾರ್ಯ ಮಾಡಿ ಎಲ್ಲರ ಮನ ಗೆದ್ದವರಾಗಿದ್ದಾರೆ. ಇಂಗ್ಲೀಷ್ ಮತ್ತು ತಮಿಳು ಭಾಷೆಯಲ್ಲಿ ಸುಮಾರು 49 ಕ್ಕೂ ಮಿಕ್ಕಿದ ಅಮೂಲ್ಯ ಕೃತಿಗಳನ್ನು ರಚಿಸಿ ಪ್ರಕಟಪಡಿಸಿರುವುದು ಹೆಮ್ಮೆಯ ಸಂಗತಿ. ವೀರಶೈವ ಸಿದ್ಧಾಂತ ಮತ್ತು ತತ್ತಾ÷್ವದರ್ಶಗಳನ್ನು ಅನೇಕ ಪ್ರಬಂಧಗಳ ಮುಖೇನ ಜನಜನಿತಗೊಳಿಸಿದ ಕೀರ್ತಿಯೂ ಸಹ ಇವರಿಗೆ ಸಲ್ಲುತ್ತದೆ. ಇವರ ಸಾಹಿತ್ಯ ಜೀವನದ ಸರಮಾಲೆಯಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು 2002 ರಲ್ಲಿ “ಸ್ವಯಂ” ನಾಮಾಂಕಿತದ ಕೃತಿಯನ್ನು ಸಂಸತ್ತಿನಲ್ಲಿ ಲೋಕಾರ್ಪಣೆಗೊಳಿಸಿದ್ದು ಕಿರೀಟಕ್ಕೆ ಗರಿ ಸಿಕ್ಕಿಸಿದಂತಾಗಿದೆ. ಮಾಜಿ ರಾಷ್ಟçಪತಿಗಳಾದ ಭೈರೋನ್ ಸಿಂಗ್ ಶೇಖಾವತ್‌ರವರು ಇವರ ಮತ್ತೊಂದು ಕೃತಿಗೆ ಮುನ್ನುಡಿ ಬರೆದು ಮೆರಗು ತುಂಬಿದ್ದು ವಿಶೇಷವಾಗಿದೆ. ಶ್ರೀ ಪ್ರಭುಲಿಂಗ ಶಾಸ್ತಿçಯವರ ಅಧ್ಯಯನದ ಆಳ ಮತ್ತು ಹರವು ಬಹು ವಿಶಾಲವಾದುದು. ದೂರದೃಷ್ಠಿ ಮತ್ತು ಸ್ಫುಟವಾಗಿ ಬರೆಯುವ ಮತ್ತು ಬೆರೆಯುವ ಮನೋಭಾವದವರಾದ ಇವರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ, ಸಂಘಟನೆಗಳಲ್ಲಿ, ಸಂಸ್ಥೆಗಳಲ್ಲಿ ತಮ್ಮ ಪ್ರಬುದ್ಧ ಭಾಷಣ ಮತ್ತು ಲೇಖನಮಾಲೆಗಳನ್ನು ಪ್ರಸಾರಪಡಿಸಿದ್ದಾರೆ. ರಾಷ್ಟಿçÃಯ ಮಟ್ಟದ ವಾಹಿನಿಗಳು ಸಂದರ್ಶನ ಮಾಡಿವೆ. ಸಾಮಾಜಿಕ ಮತ್ತು ಸಾಹಿತ್ಯಿಕವಾಗಿ ಅಪಾರ ಪ್ರಮಾಣದ ಸೇವೆ ನೀಡುತ್ತಿರುವ ಶ್ರೀ ಪ್ರಭುಲಿಂಗ ಶಾಸ್ತಿçಗಳವರಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ದೊರೆತಿವೆ. ಸಧ್ಯ ವೃತ್ತಿ ಜೀವನದಿಂದ ನಿವೃತ್ತರಾಗಿರುವ ಶಾಸ್ತಿçಗಳವರು ಸ್ವಾಭಿಮಾನದ ಜೀವನ ಸಾಗಿಸುತ್ತ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಯುತರ ಸಾಹಿತ್ಯ ರಚನಾಶೀಲತೆ ಮತ್ತು ಧರ್ಮಾಚಾರಶೀಲತೆಯನ್ನು ಅವಗಾಹಿಸಿ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆಯುವ 2024 ನೇ ಸಾಲಿನ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ದಿನಾಂಕ: 05-10-2024 ರಂದು “ಸಾಹಿತ್ಯ ಸಿರಿ” ಎಂಬ ಪ್ರಶಸ್ತಿಯನ್ನಿತ್ತು ಆಶೀರ್ವದಿಸುತ್ತಿದೆ. ವೀರಶೈವ ಸಿರಿ : ಶ್ರೀ ಜಿ. ಎಸ್. ಪಾಟೀಲ, ಶಾಸಕರು, ರೋಣ ವ್ಯಕ್ತಿ ಜೀವನದಲ್ಲಿ ಪರಿಶ್ರಮ ಪಟ್ಟರೆ ಏನಾದರೂ ಸಾಧಿಸಬಲ್ಲ ಎಂಬ ಮಾತಿಗನ್ವರ್ಥಕವಾಗಿ ಬೆಳೆದು ನಿಂತವರೇ ರೋಣ ಕ್ಷೇತ್ರದ ಜನಾನುರಾಗಿ ಶಾಸಕರಾದ ಸನ್ಮಾನ್ಯ ಶ್ರೀ ಜಿ.ಎಸ್. ಪಾಟೀಲರವರು. ರೋಣ ಪ್ರಾಂತದ ಪಾಟೀಲ ಮನೆತನದ ಹಿರಿಯರಾದ ಶ್ರೀ ಸಂಗನಗೌಡ ಮತ್ತು ಶ್ರೀಮತಿ ಬಸಮ್ಮನವರ ಎಂಟು ಜನ ಮಕ್ಕಳಲ್ಲಿ ಆರನೇಯವರಾಗಿ ದಿನಾಂಕ: 10-04-1948 ರಂದು ಜನಿಸಿದ ಶ್ರೀ ಗುರುಪಾದಗೌಡ ಸಂಗನಗೌಡ ಪಾಟೀಲರು ಬಾಲ್ಯದಿಂದಲೇ ಉತ್ತಮ ನಡೆ-ನುಡಿಗಳನ್ನು ರೂಢಿಸಿಕೊಂಡು ಅಣ್ಣಂದಿರ ಮತ್ತು ಅಕ್ಕ-ತಂಗಿಯರ ಅಕ್ಕರೆ-ಮಮತೆಯಲ್ಲಿ ಬೆಳೆದವರು. ಧಾರವಾಡದಲ್ಲಿ ಶಿಕ್ಷಣ ಪೂರೈಸಿ ಕ್ರೀಡೆ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಪ್ರಾಂತ ಮಟ್ಟದಲ್ಲಿ ತಲೆದೋರಿದ್ದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ಮುಂಚೂಣಿಯಲ್ಲಿದ್ದು ಎಲ್ಲವನ್ನೂ ನಿವಾರಿಸಿ ಜನನಾಯಕರಾಗಿ ಹೊಮ್ಮಿದವರು. ಮುಂದುವರೆದು 1983ರಲ್ಲಿ ರಾಜಕೀಯ ಪ್ರವೇಶ ಮಾಡಿ ಅನೇಕ ಸುಧಾರಣೆಗಳಿಗೆ ನಾಂದಿ ಹಾಡಿದ ಪಾಟೀಲರು, ಜನಾಭಿಪ್ರಾಯದ ಮೇರೆಗೆ 1989 ರಲ್ಲಿ ಪ್ರಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ರೋಣ ಮತ ಕ್ಷೇತ್ರದಲ್ಲಿ ಶಾಲಾ-ಕಾಲೇಜುಗಳ ಅಭಿವೃದ್ಧಿ, ಮಠ-ಮಂದಿರ-ದೇಗುಲಗಳ ಜೀರ್ಣೋದ್ಧಾರ, ಕೆರೆ-ಕಟ್ಟೆಗಳ ನಿರ್ಮಾಣ, ರಸ್ತೆ-ಸೇತುವೆ-ವಿದ್ಯುತ್-ಕೃಷಿ-ಆರೋಗ್ಯ-ಶಿಕ್ಷಣ-ಸಾರಿಗೆ-ನೀರು ಮೊದಲಾದ ಅವಶ್ಯಕಾಂಶಗಳ ಪೂರೈಕೆಗೆ ಅಲ್ಲದೇ ಗ್ರಾಮೀಣ ಪ್ರದೇಶಗಳ ಸರ್ವಾಭಿವೃದ್ಧಿಗೆ ಶ್ರಮವಹಿಸಿ ಕಾರ್ಯಸಾಧ್ಯ ಮಾಡಿದವರು. ಏತನ್ಮಧ್ಯೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿದ್ದಲ್ಲದೇ ರಾಜ್ಯಮಟ್ಟದ, ಜಿಲ್ಲಾಮಟ್ಟದ ವಿವಿಧ ಜವಾಬ್ದಾರಿಗಳನ್ನು ಹೆಗಲಿಗೇರಿಸಿ ಕೊಂಡು ಪಕ್ಷದ ಸಂಘಟನೆ ಕೈಗೊಂಡು ಉತ್ತಮ ಕೆಲಸ ಮಾಡಿದವರು.

ಕ್ಷೇತ್ರದ ಕೆರೆಗಳನ್ನು ಮರುನಿರ್ಮಾಣ ಮಾಡಿ “ಸಾವಿರ ಕೆರೆಗಳ ಸರದಾರ” ಎಂದು ಹೆಸರಾದವರು. ಮೂರು ಬಾರಿ ಶಾಸಕರಾಗಿ ಜನರಿಂದ ಮನ್ನಣೆ ಪಡೆದ ಶ್ರೀ ಜಿ. ಎಸ್. ಪಾಟೀಲರು ಕನ್ನಡ ಕಟ್ಟುವ ಕಾರ್ಯದಲ್ಲಿ, ಧರ್ಮ-ಸಂಸ್ಕೃತಿಗಳ ಜಾಗೃತಿ ಕಾರ್ಯಕ್ರಮಗಳಲ್ಲಿ, ವಿವಿಧ ಸಮಾವೇಶ-ಸಮ್ಮೇಳನಗಳಲ್ಲಿ ಮುಂಚೂಣಿಯಾಗಿದ್ದುಕೊAಡು ಎಲ್ಲವುಗಳನ್ನೂ ಯಶಸ್ವಿಯಾಗಿ ನಿಭಾಯಿಸಿದ ಧೀಮಂತರು. ಮೂರು ತಲೆಮಾರುಗಳಿಂದ ಪಂಚಪೀಠಗಳ ಜಗದ್ಗುರುಗಳವರ ಸೇವಾಭಿಲಾಷೆಯಲ್ಲಿ ಮುನ್ನಡೆಯುತ್ತಿರುವ ಪಾಟೀಲ ಮನೆತನದ ಪುತ್ರರತ್ನರಾದ ಪಾಟೀಲರದು ಅತ್ಯಂತ ಸರಳ, ಸವಿನಯ ಸ್ವಭಾವದವರು. ಸರ್ವ ವಿಧದಲ್ಲೂ ಉತ್ತಮ ಪರಿಸರ ಹೊಂದಿರುವ ಶ್ರೀ ಜಿ.ಎಸ್. ಪಾಟೀಲರ ಸೇವಾಕಾರ್ಯಕ್ಕೆ ಅನೇಕ ಮಠ-ಮಾನ್ಯಗಳು, ಸಂಘ, ಸಂಘಟನೆ, ಸಂಸ್ಥೆಗಳು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಈ ನಿಟ್ಟಿನಲ್ಲಿ ಸತತ ರಾಜಕಾರಣ ಮತ್ತು ಸಮಾಜದ ಜೊತೆಗಿದ್ದು ಸೇವಾಕಾರ್ಯ ಮಾಡುತ್ತಿರುವ ಶ್ರೀ ಜಿ.ಎಸ್. ಪಾಟೀಲರವರಿಗೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆಯುವ 2024 ನೇ ಸಾಲಿನ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ದಿನಾಂಕ: 08-10-2024 ರಂದು “ವೀರಶೈವ ಸಿರಿ” ಎಂಬ ಪ್ರಶಸ್ತಿಯನ್ನಿತ್ತು ಆಶೀರ್ವದಿಸುತ್ತಿದೆ. ರಂಭಾಪುರಿ ಯುವಸಿರಿ : ಶ್ರೀ ಹೆಚ್. ಎಮ್. ಬಸವರಾಜಯ್ಯ (ಅಕ್ಕಿರಾಜು), ಉದ್ದಿಮೆದಾರರು, ದಾವಣಗೆರೆ ಗುರುವಿನ ಕರುಣೆ ಆಕಾಶಕ್ಕಿಂತಲೂ ದೊಡ್ಡದು. ಹಿಂದೆ ಗುರು ಮುಂದೆ ಗುರಿ ಇದ್ದಲ್ಲಿ ಮನುಷ್ಯ ಜೀವನದಲ್ಲಿ ಸಾಧಕನಾಗುತ್ತಾನೆ. ಬೆಳೆದು ಸಮಾಜಕ್ಕೊಂದು ಮಾದರಿಯಾಗುತ್ತಾನೆ. ಅಂತೆಯೇ ದಾವಣಗೆರೆ ಜಿಲ್ಲೆಯ ಹಿರೇತೊಗಲೇರಿ ಗ್ರಾಮದ ಶ್ರೀ ಹೆಚ್.ಎಮ್. ಚನ್ನಬಸಯ್ಯ, ಶ್ರೀಮತಿ ಸೌಭಾಗ್ಯಮ್ಮನವರ ಹಿರಿಯ ಸುಪುತ್ರರಾದ ಶ್ರೀ ಹೆಚ್.ಎಮ್. ಬಸವರಾಜಯ್ಯನವರು ದಿನಾಂಕ: 11-08-1981 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹಿರೇತೊಗಲೇರಿಯಲ್ಲಿ, ಪ್ರೌಢಶಿಕ್ಷಣವನ್ನು ಮತ್ತು ಕಾಲೇಜು ಶಿಕ್ಷಣವನ್ನು ದಾವಣಗೆರೆ ತಾಲೂಕಿನ ಅತ್ತಿಗೇರಿಯಲ್ಲಿ ಪೂರೈಸಿದರು. ಕೆಲವು-ಹಲವು ಅನಿವಾರ್ಯ ಸಂದರ್ಭಗಳಿಗೆ ಸಿಲುಕಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ತಂದೆಯವರ ವ್ಯವಸಾಯ ಕಾರ್ಯಗಳಿಗೆ ಸಹಾಯಕರಾಗಿ ಕಾರ್ಯಾರಂಭ ಮಾಡಿದರು. ಹಲವು ಏಳು-ಬೀಳುಗಳನ್ನು ಕಂಡುAಡ ಹೆಚ್.ಎಮ್. ಬಸವರಾಜಯ್ಯನವರು ಮುಂದೆ ತಮ್ಮ ಚಿಕ್ಕಪ್ಪನವರಾದ ಶ್ರೀ ಹೆಚ್.ಎಮ್. ಸಿದ್ಧಲಿಂಗೇಶ ಅವರ ಸೂಚನಾ ಮೇರೆಗೆ ಅವರದ್ದೇ ಅಕ್ಕಿ ವ್ಯಾಪಾರ ಮಳಿಗೆಯಲ್ಲಿ ಗುಮಾಸ್ತರಾಗಿ ಸೇರಿಕೊಂಡರು. ವೃತ್ತಿಯ ವ್ಯಾಪ್ತಿ ವಿಸ್ತಾರಗೊಂಡAತೆ 2008 ರಲ್ಲಿ ಸ್ವಯಂ ಬಂಡವಾಳ ಹೂಡಿ ಬ್ರೋಕರ್ ಏಜೆನ್ಸಿ ತೆರೆದರು. ಯಶಸ್ಸಿನ ಮೆಟ್ಟಿಲುಗಳನ್ನು ಕ್ರಮೇಣ ಮೇಲೇರಿದರು. ರಾಜು ಏಜೆನ್ಸಿ ಕ್ಯಾನ್ವಸಿಂಗ್ ರೈಸ್ ಎಂಬ ನೂತನ ನಾಮಾಂಕಿತದಲ್ಲಿ ವ್ಯವಹಾರವನ್ನು ಪರಿವರ್ತನೆಗೊಳಿಸಿ ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಪಡೆದು ಇನ್ನೂ ಹೆಚ್ಚಿನ ವ್ಯಾಪಾರ-ವಹಿವಾಟು ನಡೆಸಿಕೊಂಡು ಮುನ್ನಡೆದ ಹೆಚ್.ಎಮ್. ಬಸವರಾಜಯ್ಯನವರು ಅಕ್ಕಿರಾಜು ಎಂದೇ ಪ್ರಚಲಿತರಾದರು. ತಂದೆಯವರ ಕಾಲದಿಂದಲೂ ಶ್ರೀ ರಂಭಾಪುರಿ ಪೀಠಕ್ಕೆ ನಿರಂತರ ಸೇವೆ ಮಾಡಿಕೊಂಡು ಬಂದಿದ್ದ ವ್ಯವಸ್ಥೆಯಂತೆ ತಂದೆಯವರAತೆಯೇ ಅಕ್ಕಿರಾಜುರವರೂ ಸಹ ಯಾವುದೇ ಸೇವೆ ಬರಲಿ ಪ್ರಸಾದವೆಂದು ಸ್ವೀಕರಿಸಿ ನಿಸ್ವಾರ್ಥಯುತವಾಗಿ ಮಾಡುತ್ತ ಬಂದವರು. 2000 ನೇ ವರ್ಷದಿಂದ ವರ್ತಮಾನದವರೆಗೂ ಪ್ರತಿವರ್ಷ ದೀಪಾವಳಿ ಪಾಡ್ಯಮಿಯಂದು ಪ್ರಸ್ತುತ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರನ್ನು ಅತ್ಯಂತ ಗೌರವ, ಭಕ್ತಿಭಾವದಿಂದ ತಮ್ಮ ಮನೆಗೆ ಬರಮಾಡಿಕೊಂಡು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ, ಆಶೀರ್ವಾದ ಪಡೆದು ತಮ್ಮ ಸೇವಾಕಾರ್ಯವನ್ನು ಎಂದಿನAತೆ ನಡೆಸಿಕೊಂಡು ಬರುತ್ತಿರುವ ಶ್ರೀಯುತರ ವ್ಯವಹಾರ ಇಂದು ಬೃಹತ್ತಾಗಿ ಬೆಳೆದು ನಿಂತಿದ್ದರ ಹಿಂದಿನ ಶಕ್ತಿ ಶ್ರೀ ರಂಭಾಪುರಿ ಮಹಾಸನ್ನಿಧಾನಂಗಳವರ ಪರಮಾಶೀರ್ವಾದದ ಫಲ-ಬಲ. ಇದರ ಪ್ರಭಾವದಿಂದ 2018 ರಲ್ಲಿ ಬೃಹತ್ ಮಟ್ಟದ ಉದ್ದಿಮೆ ಸ್ಥಾಪಿಸುವ ಸಂಕಲ್ಪ ತೊಟ್ಟು ಶ್ರೀ ಜಗದ್ಗುರುಗಳವರ ಅಭಯಾಶೀರ್ವಾದದಿಂದ ದಾವಣಗೆರೆ ಮಹಾನಗರದಲ್ಲಿ ಶ್ರೀ ಭುವನೇಶ್ವರಿ ಅಗ್ರೋ ಇಂಡಸ್ಟಿçÃಸ್ ಸ್ಥಾಪಿಸಿ ಇಂದು ನೂರಾರು ಜನರಿಗೆ ಉದ್ಯೋಗ ನೀಡಿರುವುದು ಇವರೊಳಗಿನ ಆತ್ಮಶಕ್ತಿ, ಗುರುಭಕ್ತಿಯನ್ನು ತೋರಿಸುತ್ತದೆ. ಇನ್ನಷ್ಟು ಮತ್ತಷ್ಟು ಧರ್ಮಪರ ಸೇವಾಕಾರ್ಯಗಳನ್ನು ಮಾಡುವ ಮನೋಭಿಲಾಷಿಗಳಾಗಿರುವ ಶ್ರೀಯುತರ ಗುರುಸೇವಾ ಕಿಂಕರತೆ ಮತ್ತು ಕಾರ್ಯನಿಷ್ಠೆಯನ್ನು ಅವಗಾಹಿಸಿ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆಯುವ 2024 ನೇ ಸಾಲಿನ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ದಿನಾಂಕ: 06-10-2024 ರಂದು “ರಂಭಾಪುರಿ ಯುವಸಿರಿ” ಎಂಬ ಪ್ರಶಸ್ತಿಯನ್ನಿತ್ತು ಆಶೀರ್ವದಿಸುತ್ತಿದೆ.

ಯಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button