ಶಾರದಾಂಬೆ ಪತ್ತಿನ ಸೌಹಾರ್ದ ಸಹಕಾರಿಗೆ 45. ಲಕ್ಷ ಲಾಭ – ವೈ. ಸುರೇಶ ಗೌಡ ಸ್ಪಷ್ಟನೆ.
ಮಾನ್ವಿ ಸ.26

ಶಾರದಾಂಬೆ ಸಹಕಾರಿ ಸಂಘದ ಅಧ್ಯಕ್ಷ ವೈ. ಸುರೇಶ ಗೌಡ ಮಾತನಾಡಿ, ಕಳೆದ 4 ವರ್ಷಗಳಿಂದ ಸಹಕಾರಿಯು 2016 ಸದಸ್ಯರಿಗೆ ಉತ್ತಮವಾದ ಆರ್ಥಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಶೇರು ಬಂಡವಾಳ 53 ಲಕ್ಷ 14 ಸಾವಿರ , ಠೇವಣಿಗಳು 17 ಕೋಟಿ 24 ಲಕ್ಷ , ನಿಧಿಗಳು 44 ಲಕ್ಷ 97 ಸಾವಿರ, ಸದಸ್ಯರಿಗೆ ವಿವಿಧ ಅವಶ್ಯಕತೆಗಳಿಗೆ ನೀಡಿಸ ಸಾಲ ಮತ್ತು ಮುಂಗಡಗಳು 16 ಕೋಟಿ 37 ಲಕ್ಷರೂ, ದುಡಿಮೆಯ ಬಂಡವಾಳ 18 ಕೋಟಿ 22 ಲಕ್ಷರೂ, ಒಟ್ಟು ವ್ಯವಹಾರ 33 ಕೋಟಿ 65 ಲಕ್ಷ ರೂಗಳು. ಸಾಲ ಮರುಪಾವತಿ 96 ಶೇ, ನಿವ್ವಳ ಲಾಭ 45 ಲಕ್ಷ 65 ಸಾವಿರ ಸಹಕಾರಿಯ ಎಲ್ಲಾ ಸದಸ್ಯರಿಗೆ ಈ ಸಾಲಿನಲ್ಲಿ ಬಂದ ಲಾಭಂಶದಲ್ಲಿ ಶೇ 14 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ಕನಕ್ಕುಂದ.ಮಾನ್ವಿ