ಆಗಸ್ಟ್ 5 ರಂದು ಚಿಕ್ಕಮಗಳೂರು ಜಿಲ್ಲಾ ಮಟ್ಟದ – ವಿಚಾರ ಸಂಕಿರಣ ಮತ್ತು ಪದಗ್ರಹಣ ಏರ್ಪಡಿಸಲು ತೀರ್ಮಾನ.

ಚಿಕ್ಕಮಗಳೂರು ಜು.21

ಮಹಾತ್ಮ ಪ್ರೊ ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ರವರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ನೂತನವಾಗಿ ಸಮಿತಿಯನ್ನು ರಚನೆ ಮಾಡಲಾಯಿತು.

ಜಿಲ್ಲಾ ಸಂಚಾಲಕರಾಗಿ ಭೀಮಯ್ಯ, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಜಗದೀಶ್ ಬ್ಯಾಡರಹಳ್ಳಿ, ರಾಘವೇಂದ್ರ ತ್ಯಾಗದಕಟ್ಟೆ, ಪುಟ್ಟಸ್ವಾಮಿ ಆದಿಹಳ್ಳಿ, ಶಿವಕುಮಾರ್ ಹಲಸುಮನೆ, ಬಿ ನಾಗರಾಜ್ ಚಿಕ್ಕಮಗಳೂರು,ಕೃಷ್ಣ ಕಳಸ, ಮೃತ್ಯುಂಜಯ ಮತ್ತು ಅಬ್ದುಲ್ ರೆಹಮಾನ್ ಎನ್ ಆರ್ ಪುರ, ಜಿಲ್ಲಾ ಖಜಾಂಚಿಯಾಗಿ ಯುಸಿ ರಮೇಶ್ ಉದ್ದೇಬೋರನಹಳ್ಳಿ, ದಲಿತ ಕಲಾಮಂಡಳಿಯ ಜಿಲ್ಲಾ ಸಂಚಾಲಕರಾಗಿ ಗಣೇಶ್, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾಗಿ ಕೆಬಿ ರಮೇಶ್, ಚಿಕ್ಕಮಗಳೂರು ತಾಲೂಕು ಸಂಚಾಲಕರಾಗಿ ರಂಗಯ್ಯ, ತರೀಕೆರೆ ತಾಲೂಕು ಸಂಚಾಲಕರಾಗಿ ಎನ್ ಹೆಚ್ ಬಸವರಾಜ್ ನಾಗೇನಹಳ್ಳಿ, ತಾಲೂಕು ಸಂಘಟನಾ ಸಂಚಾಲಕರಾಗಿ ರಂಗಸ್ವಾಮಿ ಯರೆಹಳ್ಳಿ, ರವರನ್ನು ಸರ್ವಾನುಮತಿದಿಂದ ಆಯ್ಕೆ ಮಾಡಲಾಯಿತು.

ಹಾಗೂ ಆಗಸ್ಟ್ 5 ರಂದು ಚಿಕ್ಕಮಗಳೂರು ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಮತ್ತು ಪದಗ್ರಹಣ ಕಾರ್ಯಕ್ರಮವನ್ನು ಏರ್ಪಡಿಸುವುದಾಗಿ ತೀರ್ಮಾನಿಸಲಾಗಿದೆ ಎಂದು ರಾಜ್ಯ ಸಂಚಾಲಕರಾದ ತರೀಕೆರೆ ವೆಂಕಟೇಶ್ ರವರು ಪತ್ರಿಕೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button