ಭರದಿಂದ ಸಾಗಿದ “ಮಹಾಕಾಲ” – ಚಿತ್ರೀಕರಣ.
ಬೆಂಗಳೂರು ಜ.28

ಎಸ್.ಹೆಚ್.ವಿ ಸಿನಿ ಕ್ರಿಯೇಷನ್ಸ್ ಬೆಂಗಳೂರು ಅವರ ‘ಮಹಾಕಾಲ’ ಕನ್ನಡ ಚಲನ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗಿದೆ. ಮೂಲತಃ ಮಂಡ್ಯ ಜಿಲ್ಲೆಯವರಾದ ನಿರ್ದೇಶಕ ಹರಿಪ್ರಸಾದ್ ಅವರು ಈಗಾಗಲೇ ಹಲವಾರು ಚಲನ ಚಿತ್ರಗಳಲ್ಲಿ ಕೆಲಸ ನಿರ್ವಹಿಸಿದ್ದು “ಮಹಾಕಾಲ” ವನ್ನು ಈಗ ಅವರೇ ನಿರ್ದೇಶನದ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ರಘು ಅ ರೂಗಿ (ಹುಬ್ಬಳ್ಳಿ) ಅವರ ಛಾಯಾ ಗ್ರಹಣದಲ್ಲಿ ಮೈಸೂರು ,ಬೆಂಗಳೂರು ಸುತ್ತಮುತ್ತ ಸತತ ಕಳೆದೊಂದು ವಾರದಿಂದ ಚಿತ್ರೀಕರಣ ನಡೆಸಲಾಗುತ್ತಿದೆ. ಇದೊಂದು ಕಮರ್ಷಿಯಲ್ ಚಿತ್ರವಾಗಿದ್ದು ಚಿತ್ರದಲ್ಲಿ ನಾಲ್ಕು ಹಾಡುಗಳಿವೆ.ಮತ್ತು ಈ ಸಿನಿಮಾದಲ್ಲಿ ಮೂರು ಸಾಹಸ ದೃಶ್ಯಗಳಿದ್ದು, ಮೈಸೂರು ಮತ್ತು ಸಕಲೇಶಪುರ, ಹಾಸನ, ಬೆಂಗಳೂರು, ಸುತ್ತಮುತ್ತಲು ಹಾಡುಗಳನ್ನು ಚಿತ್ರೀಕರಿಸಲಾಗುತ್ತದೆ, ಒಂದು ಹಾಡನ್ನು ಹೊರ ರಾಜ್ಯದಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ. ಸದ್ಯ 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ, ನಿರ್ಮಾಪಕರಾದ ಹರಿಪ್ರಸಾದ ತಿಳಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ರಘು ಅ. ರೂಗಿ (ಹುಬ್ಬಳ್ಳಿ), ಸಂಗೀತ ನಿರ್ದೇಶನ ಕಲ್ಕಿ ಅಭಿಷೇಕ್, ಸಾಹಸ ವೈಲೆಂಟ್ ವೇಲು, ಕೊರಿಯೋ ಗ್ರಾಫರ್ ರಾಜು ಮೈಸೂರ್. ಪ್ರಸಾಧನ ಅಪ್ಪು , ಶ್ರುತಿ, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ್ ಹಂಡಗಿ, ಸಹ ನಿರ್ದೇಶಕರು ಶ್ರೀಪಲ್ಲವಿ, ಹಾಗೂ ನಿರ್ದೇಶಕ ತಂಡದಲ್ಲಿ ಮನು ಸಾಮ್ರಾಟ್, ಸಾಗರ್, ಹರೀಶ್, ಪ್ರಕಾಶ್ ಕಡಕೋಳ ಅವರಿದ್ದಾರೆ. ನಾಯಕ ನಟನಾಗಿ ವಿನಯ್, ನಾಯಕಿಯಾಗಿ ಜೆಸ್ಸಿಕಾ ಡಯಾನ, ಅಶ್ವಿನಿ ಶೆಟ್ಟಿ, ಅಭಿನಯ, ರಾಮಕೃಷ್ಣ, ಮೂಗು ಸುರೇಶ್, ಶಶಿಧರ್ ಕೋಟೆ, ಚಂದ್ರಪ್ರಭ, ನಾನ್ ಸಿಂಕ್ ಬಸು, ಮೋಹನ್ ಮುಂತಾದ ತಾರಾಬಳಗವಿದೆ, ಶೀಘ್ರದಲ್ಲೇ ಚಿತ್ರೀಕರಣ ಮುಗಿಸಿ ಬೆಳ್ಳಿತೆರೆಗೆ ತರುವ ಹಂಬಲವನ್ನ ನಿರ್ದೇಶಕರು ಹೊಂದಿದ್ದಾರೆ.
*****
-ಡಾ.ಪ್ರಭು.ಗಂಜಿಹಾಳ.
ಮೊ-9448775346